ಪುಟ:ಪ್ರಬಂಧಮಂಜರಿ.djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸತ್ಯ, ೧೬೯ ಯಿಲ್ಲದೆ ಹೊರಟುಹೋಗುವುದು. ಮನಃ ಪೂರ್ವಕವಾಗಿ ಸುಳ್ಳಾಡುವವ ನಿಗೆ, ಎಲ್ಲಿ ಸಿಕ್ಕಿ ಬಿಡಬೇಕಾಗುವುದೋ ಎಂಬ ಭಯದಿಂದ ಎದೆ ಡವಡವನೆ ಬಡಿದುಕೊಳ್ಳುತ್ತಿರುವುದು, ಸುಳ್ಳಿಗೆ ಸತ್ಯದ ಬಣ್ಣವನ್ನು ಕೊಟ್ಟು ಹೇಳ ಬೇಕಾದರೆ ಬಹಳ ಬಲವಾದ ನೆವವೂ, ಚಾತುರ್ಯವೂ, ಎಚ್ಚರಿಕೆಯೂ ಬೇಕು. ಸುಳ್ಳುಗಾರನಿಗೆ ಧೈರ್ಯವು ಕಡಮೆ; ಅವನು ಸತ್ಯವಾದಿಯಂತೆ ಧೈರ್ಯವಾಗಿ ಮಾತನಾಡುವುದಕ್ಕಾಗದೆ, ಯಾವಾಗಲೂ ಅವನಂತೆ ಚಿಂತೆಯಿಲ್ಲದೆ ಸಂತೋಷವಾಗಿರುವುದಕ್ಕಾಗುವುದಿಲ್ಲ. ಆದುದರಿಂದ ಸುಳ್ಳಾಡುವುದು ಎಂತಹ ಹುಚ್ಚತನ! ಸತ್ಯವನ್ನು ಮಾರಿ ನಡೆದುಕೊಳ್ಳಲು ಲಾಭದಮೇಲೆ ಆಸೆ, ಸೋಮಾರಿ ತನ, ಅಹಂಕಾರ, ಹೇಡಿತನ ಇವು ಆದಿಕಾರಣ ಲಾಭವನ್ನು ಪಡೆಯಲು ವರ್ತಕರು ಹೆರರಸರಕುಗಳನ್ನು ದೂಷಿಸಿ ತಮ್ಮ ಸಾಮಾನುಗಳಲ್ಲಿ ಇಲ್ಲದಿರುವ ಗುಣಗಳನ್ನಾ ರೋಪಿಸುವರು. ಕೆಲವು ಲೆಕ್ಕಗಳನ್ನು ಮಾಡಿಕೊಂಡುಬಾರೆಂದು ಒಬ್ಬ ಹುಡುಗನಿಗೆ ಆಜ್ಞಾಪಿಸಿದರೆ ಅವನು ತನ್ನ ಜತೆಯ ಹುಡುಗನು ಮಾಡಿರುವುದನ್ನು ನೋಡಿ ಮಾಡಿಕೊಂಡು ಬರುವುದು ಮೈಬಗ್ಗಿ ಕೆಲಸಮಾಡದಷ್ಟು ಸೋಮಾರಿಯಾದುದರಿಂದ, ತನಗೆ ಸಾಮಾನ್ಯವಾದ ಯೋಗ್ಯತೆಯಿದ್ದರೂ, ತನ್ನ ಸಮಾನರಿಲ್ಲ ತಾನೇ ಘನಪಂಡಿತ, ತನಗೆ ತಿಳಿಯದ ವಿಷಯ. ಗಳೇ ಅಪೂರ್ವ ಎಂದು ಪ್ರತಿಷ್ಠೆ ಹೊಡೆದುಕೊಳ್ಳುವುದು ದೊಡ್ಡ ಸುಳ್ಳು; ಇದು ಅಹಂಕಾರವೆಂಬ ದುರ್ಗುಣದಿಂದ ಆದುದು. ಇಂತಹ ಸುಳ್ಳಿಗೆ ವಿಶೇಷ ವಾಗಿ ಗುರಿಯಾಗತಕ್ಕವರು ಯಾರೆಂದರೆ, ಮೂಢರು, ಅನುಭವವಿಲ್ಲದ ಚಿಕ್ಕ ವರು, ಮತ್ತು ಕೂಪಕೂರ್ಮದಂತೆ ಇದ್ದೆಡೆಯಲ್ಲಿಯೇ ಇರುವವರು, ತಪ್ಪುಮಾಡಿದ್ದರೂ ತಪ್ಪು ಮಾಡಿಲ್ಲವೆನ್ನುವುದೂ, ಹೇಳಿದ ಕೆಲಸವನ್ನು ಒಬ್ಬ ಸೇವಕನು ಮಾಡಿಲ್ಲದಿದ್ದರೂ ಮಾಡಿದ್ದೇನೆನ್ನು ವುದೂ ಶಿಕ್ಷೆಯ ಭೀತಿ ಯಿಂದ. ಇವಲ್ಲದೆ ಮನಸ್ಸಿಗೆ ತೋರಿದ ಅಭಿಪ್ರಾಯಗಳನ್ನು ವ್ಯಕ್ತವಾಗಿ ಎಲ್ಲರಿಗೂ ತಿಳಿಯಪಡಿಸುವುದಕ್ಕೆ ಹಿಂದೆಗೆವುದೂ ಹೇಡಿತನದಿಂದ ಆಗುವುದು,