ಪುಟ:ಪ್ರಬಂಧಮಂಜರಿ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾರಂಶಗಳು ೧೭೧ ಸಾರಾಂಶಗಳು, Outlines ಇನ್ನು ಕೆಲವು ಪ್ರಬಂಧಗಳಿಗೆ ಸಾರಾಂಶಗಳನ್ನು ಈ ಕೆಳಗೆ ಕೊಟ್ಟಿದೆ. ಇವುಗಳ ಸಹಾಯದಿಂದ ವಿದ್ಯಾರ್ಥಿಗಳು ಪ್ರಬಂಧಗಳನ್ನು ಹಿಂದಿನ ಮಾದರಿಗಳಂತೆ ಬರೆಯತಕ್ಕದ್ದು, 1. ಕತ್ತೆ. (1) ಎಲ್ಲಾ ದೇಶಗಳಲ್ಲಿಯೂ ಸಿಕ್ಕುತ್ತದೆ. ಬಣ್ಣ ಬೂದು, ತಲೆ ಉದ್ದ, ಕಿವಿಗಳು ಉದ್ದ, ತಲೆಯಮೇಲೆ ನೆಟ್ಟಗೆ ನಿಲ್ಲದೆ ಪಕ್ಕಗಳಿಗೆ ಬಾಗಿವೆ ಕಣ್ಣುಗಳು ದೊಡ್ಡ ವು, ಉರುಟು, ದೊಡ್ಡ ಬಾಯಿ, ಕಳಗಣ ದವಡೆಯನ್ನು ಕುದುರೆಯಂತ ಅಲ್ಲಾಡಿಸಬಲ್ಲುದು, ಹಲ್ಲುಗಳ ಮಧ್ಯದಲ್ಲಿ ಕಡಿವಾಳಕ್ಕೆ ಸ್ಥಳ ಬಿಟ್ಟಿದೆ. ಮೂಗಿನ ಸೊಳ್ಳ ಬಹಳ ಅಗಲ, ಕುತ್ತಿಗೆ ಉದ್ದ, ಬಾಗಿಲ್ಲ ; ಕುತ್ತಿಗೆಯ ಮೇಲೆ ಸ್ವಲ್ಪ ಕೂದಲು, ಬೆನ್ನು ಕುದುರೆಯ ಬೆನ್ನಿನಂತೆ ಬಾಗಿಲ್ಲ. ಬೆನ್ನಿನಲ್ಲಿ ಉದ್ದಕ್ಕೂ ಒಂದು ಕರಿಯ ಪಟ್ಟೆ ಮೈ ಕುದುರೆಯದಕ್ಕಿಂತ ಬಹಳ ಚಿಕ್ಕದು ; ಚರ್ಮ ದಪ್ಪ, ಅದರ ಮೇಲೆ ಒರಟು ಕೂದಲು, ಬಾಲ ಮೋಟು, ತುದಿಯವರೆಗೆ ಮೋಟು ಕೂದಲು; ತುದಿಯಲ್ಲಿ ಮಾತ್ರ ಸ್ವಲ್ಪ ಉದ್ದವಾದ ಕೂದಲು, ಕಾಲುಗಳು ಬಲವಾಗಿವೆ ಪಾದಗಳು ಗಟ್ಟಿ, ಬಲ ; ಎರಡಾಗಿ ಬಿರಿಯದೆ ಉಂಡೆಯಾಗಿವೆ. [ ] ಕುದುರೆಯಂತೆಯೇ ಮೆಲುಕು ಹಾಕುವದಿಲ್ಲ,ಮೇಯುವಾಗ ಹುಲ್ಲನ್ನು ಕತ್ತರಿಸುತ್ತದೆ, ಕೀಳುವುದಿಲ್ಲ. ನೆಲದಲ್ಲಿ ಬಿದ್ದು ಕೊಂಡು ಹೊರಳುವುದುಂಟು. ಅಸಹ್ಯವಾಗಿ ಅಂಚುವುದು, ಹಿಂಗಾಲಿನಿಂದ ಒದೆವುದು, ಬಹಳ ಸರಣ, ಸಾಧುಗುಣ, ಮೈಮುರಿದು ಕಷ್ಟ ಮಾಡುತ್ತದೆ. ಇದೆ ಸ್ವಲ್ಪ ನಿಧಾನ, ಯಾವಾಗಲೂ ಮುಗ್ಗರಿಸುವುದಿಲ್ಲ, ಮಂದಬುದ್ದಿ. ಯುಳ್ಳ ಪ್ರಾಣಿಯೆಂದು ಹೇಳುವುದು ಸರಿಯಲ್ಲ ; ಇದಕ್ಕೆ ದೃಷ್ಟಾಂತ ಪ್ರೀತಿಯಿಂದ ಸಾಕಿ. ದರೆ ಯಜಮಾನನಲ್ಲಿ ಬಹಳ ವಿಶ್ವಾಸವನ್ನು ತೋರಿಸಿ ವಿಧೇಯವಾಗಿರುತ್ತದೆ, ಇದರ ಮರಿ ಚಿಕ್ಕದಾಗಿರುವಾಗ ಬಹಳ ಅಂದ, ಬರುಬರುತ್ತ ಅವಲಕ್ಷಣ, ಆಹಾರ-ಹುಲ್ಲು ಸೊಪ್ಪು, ಧಾನ್ಯ ಇತ್ಯಾದಿ, [3] ಮೂಟೆ ಹೊರುವುದು, ಗಾಡಿಗೆ ಕಟ್ಟುವುದು, ಹಾಲನ್ನು ಮಕ್ಕಳಿಗೆ ಕುಡಿಸುವುದು, ಔಷಧವಾಗಿಯೂ ಉಪಯೋಗಿಸುವುದು, ಸತ್ತ ಮೇಲೆ ಮಾಂಸವನ್ನು ತಿನ್ನು ಎರು, ಚರ್ಮ, ವನ್ನು ನಯಮಾಡಿ ತಮಟೆಗಳಿಗೂ ಪುಸ್ತಕಗಳ ಅಟ್ಟಿಗಳಿಗೂ ಬಳಸುವರು. 2. ಒಂಟಿ, 1) ಸಾಮಾನ್ಯವರ್ಣನೆ-ಉದ್ದವಾದ ಕಾಲುಳ್ಳ ಪ್ರಾಣಿ, 8-10 ಅಡಿ ಎತ್ತರ, ಬೆನ್ನ ಮೇಲೆ ಒಂದು ದೊಡ್ಡ ಡುಬ್ಬ, ಮುದಿ ಹೊರುವ ಪ್ರಾಣಿ, ನೋಡಲು ಬಹಳ ವಿಕಾರ, ವಿಶೇಷ ವರ್ಣನೆ-ಮೈ ತುಂಬ ಉದ್ದವಾದ ಕಂದು ಬಣ್ಣದ ಕೂದಲು, ಕಾಲುಗಳು ಉದ್ದ, ದಪ್ಪ, ಬಲವುಳ್ಳವು ; ಪಾದಗಳು ಬಹಳ ಅಗಲ, ಮೃದು, ಸೀಳಿವೆ ಪಾದದ ಎರಡು ಬೆರಳುಗಳಲ್ಲೂ ಒಂದೊಂದು ಉಗುರು, ಕಾಲಿಗೆ ಗೊರಸಿಲ್ಲ ಬೆರಳುಗಳಲ್ಲಿ ಗಟ್ಟಿಯಾದ