ಪುಟ:ಪ್ರಬಂಧಮಂಜರಿ.djvu/೧೯೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦ ಪ್ರಬಂಧಮಂಜರಿ ಎರಡನೆಯ ಭಾಗ, 18. ನಾಣ್ಯಗಳು, 1, ನಾಣ್ಯಗಳಂದರೇನು? ಇವು ಏತಕ್ಕೆ? ನಾಣ್ಯಗಳು ಬಳಕೆಗೆ ಬರುವುದಕ್ಕೆ ಮೊದಲು ಜನರು ಏನು ಮಾಡುತ್ತಿದ್ದರು? ಇವುಗಳನ್ನು ಉಪಯೋಗಿಸದಿರುವ ಜನಗಳು ಈಗ ಯಾರಾದರೂ ಉಂಟೋ? ನಾಣ್ಯಗಳನ್ನು ಲೋಹದಿಂದಲೇ ಮಾಡಬೇಕೆ? ಇ, ನಾನಾಬಗೆಯ ನಾಣ್ಯಗಳು: ಚಿನ್ನ, ಬೆಳ್ಳಿ, ಕಂಚು, ಎಲ್ಲಾ ನಾಣ್ಯಗಳನ್ನೂ ಏತಕ್ಕೆ ಒಂದೇ ಲೋಹದಿಂದ ಮಾಡಕೂಡದು? ಕೆಲವು ನಾಣ್ಯಗಳ ಹೆಸರುಗಳನ್ನು ಸೂಚಿಸಿ, 3, ಆಕಾರ ಮೇಲುಮುಖದಲ್ಲಿ ಆಳುತ್ತಿರುವ ದೊರೆಯ ಪ್ರತಿಮಇದರ ಉದ್ದೇಶವೇನು ಇಲ್ಲಿ ಏನು ಬರೆದಿರುವುದು? ಕಳಮುಖದಲ್ಲಿ ನಾಣ್ಯದ ಬೆಲೆಗೆ ಅನುಸಾರವಾಗಿ ಒಂದು ಮುದ್ರೆ. ಇದು ಅರ್ಥಗರ್ಭಿತವಾದುದು. ರೂಪಾಯಿನ ಮೇಲೆ ಇರುವ ಈ ಮುದ್ರೆಗೆ ಏನು ಅರ್ಥ? ಕಲವು ನಾಣ್ಯಗಳ ಅಂಚಿನ ಸುತ್ತಲೂ ಗೀರು ಮಾಡಿದೆ. ನಮ್ಮ ಸೀಮೆಯ ಯಾವ ನಾಣ್ಯಗಳಿಗೆ ಇದು ಇಲ್ಲ ? 4, ನಾಣ್ಯಗಳನ್ನು ಮಾಡುವುದು-ಇವುಗಳನ್ನು ಯಾರು ಮಾಡತಕ್ಕವರು? ಟಂಕಸಾಲೆ ಯೆಂದರೇನು? ಚಿನ್ನ, ಬೆಳ್ಳಿ ಮೊದಲಾದ ಲೋಹಗಳ ಗಟ್ಟಿಗಳನ್ನು ಲಟ್ಟಿಸಿ, ಚಿತ್ರಾಕಾರವಾದ ಚೂರುಗಳನ್ನು ಮಾಡಿ, ಇವುಗಳಿಗೆ ಅಂಚಿನಲ್ಲಿ ನೀರೆಳೆದು, ಮುದ್ರೆ ಒತ್ತಿ, ತೂಕಮಾಡಿ, ಪರೀಕ್ಷಿಸಿ ಚಲಾವಣೆಗೆ ಕೊಡುವರು. 5. ಹಳೇ ನಾಣ್ಯಗಳನ್ನು ಮೂಜಿಯಂಗಳಲ್ಲಿಡುವರು. ಇವುಗಳಿಂದ ಪ್ರಯೋಜನ. ಇವು ಪೂರ ಕಾಲಕ್ಕೂ ಈಗಿನಕಾಲಕ್ಕೂಮಾರ್ಪಾಟದಲ್ಲಿ ಏನಾದರೂ ತಾರತಮ್ಯವನ್ನು ತೋರಿಸುತ್ತವೋ? 19, ಬೇಸಗೆಯ ಕಾಲ. 1. ಇಂಡಿಯಾ ದೇಶದಂಥ ಸೀಮೆಗಳಲ್ಲಿ ಸೆಕೆ ಬಹಳ ಹೆಚ್ಚು. ಮಧ್ಯಾಹ್ನದಲ್ಲಿ ಜನರ ಆಯಾಸ, ಸುಸ್ತು, ಸಂಕಟ, ಯಾವ ಕೆಲಸ ಮಾಡಲೂ ಮನಸ್ಸು ಬರುವುದಿಲ್ಲ, 2. ಸಾಯಂಕಾಲದ ತಂಗಾಳಿಯಿಂದ ಆಗುವ ಉಪಶಾಂತಿ, 3, ರಾತ್ರಿಯನ್ನು ಹೇಗೆ ಕಳೆಯುವರು ? ಆಗ ಹೇಗೆ ನಿದ್ದೆ ಹೋಗುವರು? 4, ಒಳ್ಳೆಯ ಫಲಗಳಿಗೂ ಪುಷ್ಟಗಳಿಗೂ ತಕ್ಕ ಕಾಲ, 5, ಅರವಟ್ಟಿಗೆಗಳು ಮೊದಲಾದ ಧರ್ಮಕಾರ್ಯಗಳು, 20. ನಾಟಕಶಾಲೆ, 1. ಸೂಕ್ಷ್ಮ ವರ್ಣನೆ, 2. ಮುಖ್ಯವಾಗಿ ನೇತ್ರಾನಂದವೂ ವಿನೋದವೂ ದೊರೆಯುವ ಸ್ಥಳ, 3. ಪೂರ್ವದಲ್ಲಿ ಗ್ರೀಸ್, ಇಟಲಿ ದೇಶಗಳಲ್ಲಿ ಪ್ರಜೆಗಳಿಗೆ ನಾಟಕಗಳ ಮೂಲಕ ನೀತಿ, ಬೋಧೆಯನ್ನು ಮಾಡುತ್ತಿದ್ದರು, ಇಂಡಿಯಾದಲ್ಲಿಯೂ ಹಾಗೆಯೇ, 4. ಒಂದು ವಿಷಯವನ್ನು ಕಿವಿಯಲ್ಲಿ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದರಿಂದ