ಪುಟ:ಪ್ರಬಂಧಮಂಜರಿ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧go ಪ್ರಬಂಧಮಂಜರಿ-ಎರಡನೆಯ ಭಾಗ 29. ಬಾಲ್ಯ ವಿವಾಹ, 1, ಬಾಲ್ಯ ವಿವಾಹವು ಇಂಡಿಯಾದಲ್ಲಿ ಪೂರ್ವಕಾಲದಿಂದಲೂ ರೂಢಿಯಲ್ಲಿರಲು ಕಾರಣ, 2, ಈಗಲೂ ಇದಕ್ಕೆ ಆವಶ್ಯಕತೆಯುಂಟೆ ? 3, ಇದರಿಂದಾಗುವ ಕೆಡಕುಗಳು, .4, ಹಿಂದೂಗಳ ನೈರ್ಬಲ್ಯಕ್ಕೆ ಬಾಲ್ಯ ವಿವಾಹವೇ ಮುಖ್ಯ ಕಾರಣ, ದೇಹಶಕ್ತಿ ಕುಂದಿದರೆ , ಬುದ್ದಿ ಶಕ್ತಿಯೂ ಕ್ರಮೇಣ ಕುಂದಿ, ಎಲ್ಲಾ ಭಾಗಗಳಲ್ಲೂ ಜನರ ಕ್ಷೀಣದಶೆಗೆ ಕಾರಣ, ಈ ದುರಾಚಾರವನ್ನು ಎಷ್ಟು ಬೇಗ ತೊರೆದರೆ ಅಷ್ಟು ಒಳ್ಳೆಯದು. 30. ಯಾವಾಗಲಾದರೂ ಸುಳಾಡಬಹುದೆ ? 1. ಬಗೆಬಗೆಯ ಸುಳ್ಳು ಗಳು:- (1) ಈ ಬಿಳಿಯ ಸುಳ್ಳು" ತಪ್ಪುಗಳನ್ನು ಮರೆಮಾಚುವ ಅಥವಾ ಹೆರರಿಗೆ ಕಡಕು ಮಾಡುವ ಉದ್ದೇಶವಿಲ್ಲದೆ ನುಡಿದ ಅನೃತ, ಉದಾ-ಮನೆಗೆ ಬಂದಿರುವವನಿಗೆ ಭೇಟಿಕೊಡಲು ಇಷ್ಟವಿಲ್ಲದೆ ಒಬ್ಬ ಗೃಹಸ್ಥನು ತಾನು ಮನೆಯಲ್ಲಿದ್ದರೂ ಇಲ್ಲವೆಂದು ಹೇಳಿಕಳುಹುವುದು, () ಮೋಸದ ಸುಳ್ಳು, ಉವಾ, ದುಷ್ಕಾರ್ಯವನ್ನು ಮಾಡಿದ್ದರೂ, ಶಿಕ್ಷಾಭಯದಿಂದ ಅದನ್ನು ಮಾಡಿಲ್ಲವೆಂದು ಹೇಳುವುದು. (3) ಉಪಯುಕ್ತ ವಾದ ಸುಳ್ಳು, ಉದಾ.ಒಬ್ಬನ ಪ್ರಾಣವನ್ನು ಉಳಿಸುವುದಕ್ಕಾಗಿ ಸುಳ್ಳನ್ನು ಹೇಳುವುದು ರೋಗಿಗೆ ರೋಗದ ನಿಜಸ್ಥಿತಿಯನ್ನು ತಿಳಿಸದೆ ವೈದ್ಯನು ಮರೆಮಾಚಿ ಧೈರ್ಯ ಹೇಳುವುದು, 3, ಸುಳ್ಳಾಡಲು ಕಾರಣ.-(1) ತೊಂದರೆ ತಪ್ಪಿಸಿಕೊಳ್ಳುವುದು ಅಥವಾ ಒಬ್ಬನನು೩ ಗೇಲಿಮಾಡುವುದು ಮನೆಯ ಸುಳ್ಳಿಗೆ ಕಾರಣ (2) ಸ್ಕೋಪಯೋಗ 2 ನೆಯದಕ್ಕೆ (3)ಪರೋ ಪಕಾರಬುದ್ದಿ 3ನೆಯದಕ್ಕೆ, 3, ಸುಳ್ಳಿನ ಫಲಗಳು.-ನಕಲಿಮಾಡಲು ಆಡಿದ ಬಿಳಿಯ ಸುಳ್ಳು ಇತರರನ್ನು ರೇಗಿಸು, ಬಹುದು ಯಾವ ತರದ ಸುಳ್ಳನ್ನೇ ಆಗಲಿ ಆಡುವವನ ಮನಸ್ಸು ಬಹಳ ನೀಚವಾಗುತ್ತದೆ. ಸುಳ್ಳುಗಾರನನ್ನು ಯಾರೂ ನಂಬರು, ಕೊನೆಗೆ ಸುಳ್ಳಿಗೂ ಸತ್ಯಕ್ಕೂ ಭೇದ ತಿಳಿಯದೆ ಸುಳ್ಳುಗಾರನು ತನಗೆ ತಾನೇ ಮೋಸಮಾಡಿಕೊಳ್ಳುವನು, ಅಪರಾಧಿಯು ಸುಳ್ಳಾಡಿ ಒಂದು ಸಾರಿ ಶಿಕ್ಷೆಯನ್ನು ತಪ್ಪಿಸಿಕೊಂಡರೆ, ಮುಂದೆ ನಿರ್ಭಯವಾಗಿ ದುಷ್ಕೃತ್ಯಗಳನ್ನು ಮಾಡುತ್ತಾ ಹೋಗುವನು. 4, ಯಾವ ಸುಳ್ಳನ್ನೂ ಆಡದೆ ಇರಲು ಸಾಧ್ಯವಲ್ಲವೆ ? ಎಲ್ಲಿ ಸುಳ್ಳು ಹೇಳಿದ್ದರಿಂದ ಕಾರ್ಯಸಾಧನವಾಗಬಹುದೋ ಅಲ್ಲಿ ನಿಜವನ್ನಾಡಿದರೆ ಕಲಸ ಕೈಗಡಲಾರದೇ?