ಪುಟ:ಪ್ರಬಂಧಮಂಜರಿ.djvu/೨೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮೬ ಪ್ರಬಂಧಮಂಜರಿ-ಎರಡನೆಯ ಭಾಗ ದರ ಮುಂದೆ ವಿಜ್ಞಾಪನೆ,” ನಮಸ್ಕಾರ ಇಲ್ಲವೆ ಪ್ರಣಾಮಗಳು ” ಎಂತಲೂ, ಚಿಕ್ಕವರಿಗೆ «ಆಶೀರ್ವಾದ ಅಥವಾ (ಮಂಗಳಾಶಾಸನ' ? ಎಂತಲೂ ಬರೆಯಬೇಕು. ಹೆಂಗಸರಲ್ಲಿ ಚಿಕ್ಕವರಾದ ಬಂಧುಗಳಿಗೆ, ಸುಮಂಗಲಿಗಳಾದರೆ, 1 - ಭಾಗ್ಯವತಿ' ಎಂಬುದನ್ನೂ , ವಿಧವೆಯರಾಗಿದ್ದರೆ (ಭಾಗೀರಥೀಸಮಾನರಾದ' ಎಂಬುದನ್ನೂ ಹೆಸರಿನ ಹಿಂದೆ ಬರೆಯುವ ವಾಡಿಕೆ, ವಿಧವೆಯರ ಹೆಸರಿನೊಡನೆ ಏನನ್ನೂ ಬರೆಯದಿರುವುದೂ ಉಂಟು, ಆದರೆ ದೊಡ್ಡವರಾದ ವಿಧವೆಯರಿಗೆ ಮಾತೃಶ್ರೀ' ಪದವನ್ನು ಉಪಯೋಗಿಸಬಹುದು. 4. ಮಿತ್ರರಿಗೆಲ್ಲಾ ಸಮಕ್ಷಮಕ್ಕೆ ವಿಜ್ಞಾಪನೆ ಎಂದು ಬರೆಯುವರು. 5 ಇತರರಿಗೆ:-ಗಂಡಸರಲ್ಲಿ ಲೌಕಿಕರಿಗೆ ಮಹಾರಾಜಶ್ರೀ ಎಂತಲೂ, ವೈದಿಕರಿಗೆ ಶ್ರೀವೈಷ್ಣವರಲ್ಲಿ ಶ್ರೀಮದ್ವೇದಮಾರ್ಗೆ ತ್ಯಾದಿಗಳಾದ' ಅಥವಾ ಶ್ರೀ|| ಉ|| ಎಂತಲೂ, ಸ್ಮಾರ್ತಮಾಧ್ವರಲ್ಲಿ ಬ್ರಹ್ಮಶ್ರೀ'? ಆ ಥವಾ ವೇದ ಮೂರ್ತಿಗಳಾದ ಎಂತಲೂ ಹೆಸರಿನ ಹಿಂದೆ ಬರೆವ ಸಂಪ್ರದಾಯವಿದೆ. 6. ಹೀಗೆ ಕಾಗದದ ಆದಿಭಾಗದ ಒಕ್ಕಣೆಯನ್ನು ಒರೆದು ವಿಷಯವನ್ನು ಕಾಗದದ ಮಧ್ಯಭಾಗದಲ್ಲಿ ಬರೆಯತಕ್ಕದ್ದು.ವಿಷಯಾರಂಭಕ್ಕೆ ಹಿಂದೆ ಉಭಯಕುಶಲೋಪರಿ ಸಾಂಪ್ರತ' ಎಂಬ ಮಾತುಗಳನ್ನು ಬರೆಯಬೇಕು. 7. ಕಾಗದದ ಪ್ರಾರಂಭದಲ್ಲಿ ಬರೆದಿರುವ ಮರ್ಯಾದೆಯ ಮಾತುಗಳನ್ನೇ ಕೊನೆಯಲ್ಲಿಯೂ ಬರೆಯಬೇಕು. ಹೇಗೆಂದರೆ- ಇಂತೀ ವಿಜ್ಞಾಪನೆ, C Aಂತೀ ನಮಸ್ಕಾರ,” .ಇಂತೀ ಆಶೀರ್ವಾದ, ( ಇಂತೀ ಪ್ರಣಾಮಗಳು. ಆದರೆ ಮೊದಲು ವಿಜ್ಞಾಪನೆ ಎಂದು ಬರೆದು ಕೊನೆಯಲ್ಲಿ ಇಂತೀ ನಮಸ್ಕಾರ ಎಂದಾಗಲಿ, ಆಶೀರ್ವಾದ ಎಂದು ಆರಂಭಿಸಿ ಕೊನೆಗೆ 14 ಇಂತೀ ವಿಜ್ಞಾಪನೆ ಇಲ್ಲವೆ ಇ೦ತೀ ನಮಸ್ಕಾರ ಎಂದಾಗಲಿ ಬರೆಯುವುದು ತಪ್ಪ, 8, ಮೇಲಿನ ವಿಳಾಸ:-ಮರಣ ಸಮಾಚಾರದ ಕಾಗದಗಳಿಗೆ ಹೊರತು ಮಿಕ ಎಲಾ ಕೆಮಸಮಾಚಾರ ಕಾಗದಗಳಿಗೂ ಲಕೋಟೆಯ ಮೇಲೆ ಎಡಗಡೆಯ ಮೂಲೆಯಲ್ಲಿ ಕ್ಷೇಮ' ಅಥವಾ .ಕುಶಲ' ಎಂಬ ಮಾತನ್ನು ಬರೆಯತಕ್ಕದ್ದು, ಆ ಮೇಲೆ ಕಾಗದ ಓದಿಕೊಳ್ಳುವವರ ಹೆಸರು, ಅವರು ವಾಸಿಸುವ ಬೀದಿ, ಇವುಗಳನ್ನು ಒಂದೊಂದು ಹಳ್ಳಿಯಲ್ಲಿ ನಮೂಡಿಸಿ, ಅವರ ಊರಿನ ಹೆಸರನ್ನು ಕೊನೆಯ ರ್ಪಯಲ್ಲಿ ಬರೆಯಬೇಕು.