ಪುಟ:ಪ್ರಬಂಧಮಂಜರಿ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಪ್ರಬಂಧಮಂಜರಿ-ಎರಡನೆಯ ಭಾಗ ಈ ಕಾರಣಗಳಿಂದ ನೀನು ಇನ್ನು ಮೇಲಾದರೂ ಕೆಟ್ಟ ಜತೆಯನ್ನು ಬಿಟ್ಟು, ಮಾತಾಪಿತೃ. ಗಳಿಗೆ ವಿಧೇಯನಾಗಿ ನಡೆದುಕೊಂಡು, ಪಾಠಗಳನ್ನು ಮನಸ್ಸಿಟ್ಟು ಓದುತ್ತಾ ಬುದ್ಧಿವಂತನಾಗಿ ನಮ್ಮ ವಂಶಕ್ಕೆ ಕೀರ್ತಿಯನ್ನು ತರಬೇಕೆಂಬುದೇ ನನ್ನ ಕೋರಿಕೆ. ಇಂತೀ ಆಶೀರ್ವಾದ ಹಾಸನ, ಆಗಸ್ಸು 20, 1912 1 2. ಮೇಲಿನ ಕಾಗದಕ್ಕೆ ಉತ್ತರ. ತೀ|| 'ಅಣ್ಣನವರ ಸನ್ನಿಧಾನಕ್ಕೆ. ಬಾಲಕ ರಾಮಕೃಷ್ಣನು ಮಾಡುವ ನಪು ಸ್ಮಾರ, ಉಭಯ ಕುಶಲೋಪರಿ ಸಾಂಪ್ರತ. ತಮ್ಮ ಬುದ್ದಿ ಪತ್ರಿಕೆಯನ್ನು ಶಿರಸಾವಹಿಸಿದೆನು. ಇದರಿಂದ ನನಗೆ ಜ್ಞಾನೋದಯವಾಗಿದೆ. ತೀ! ರವರು ಬಹಳ ಮುದುಕರು : ಅವರಿಗೆ ಈಗಿನ ಕಾಲದ ಹುಡುಗರ ಸಮಾಚಾರ ಚೆನ್ನಾಗಿ ತಿಳಿಯದು, ನನಗೆ ಸರಿಯಾಗಿ ಬುದ್ದಿ ಹೇಳಿ ನನ್ನನ್ನು ಒಳ್ಳೆಯ ದಾರಿಗೆ ತರಲು ಮೊದಲೇ ಯಾರಾದರೂ ಯತ್ನಿಸಿದ್ದರೆ, ನಾನು ಇಷ್ಟ ದೂರ ಕೆಟ್ಟು ತಮಗೆ ವ್ಯಥೆಯನ್ನು ಉಂಟುಮಾಡುವ ತಿರಲಿಲ್ಲ. ಚಿಂತೆಯಿಲ್ಲ. ತಮ್ಮ ಬುದ್ದಿ ವಾದವು ಸಕಾಲಕ್ಕೆ ಬಂದಿದೆಯೆಂದು ಹೇಳಬೇಕು. ಅದು ನನ್ನ ಮನಸ್ಸಿಗೆ ಚೆನ್ನಾಗಿ ನಾಟಿತು, ಇನ್ನು ಮೇಲೆ ಕೆಟ್ಟ ಜತೆ ಸೇರುವುದಿಲ್ಲ ; ಸ್ಕೂಲಿಗೆ ಸರಿಯಾಗಿ ಹೋಗಿ ನನ್ನ ಪಾಠಗಳನ್ನು ಚೆನ್ನಾಗಿ ಕಲಿಯುವೆನು; ತೀ||ರವರ ಮಾತನ್ನು ಮಾರಿ ನಡೆಯುವುದಿಲ್ಲ. ತಮಗೆ ಕೆಟ್ಟ ಹೆಸರು ಬರುವಂತೆ ನಾನು ಮುಂದೆ ಯಾವ ವಿಧದಲ್ಲೂ ನಡೆದುಕೊಳ್ಳುವುದಿಲ್ಲವೆಂದು ತಾವು ದೃಢವಾಗಿ ನಂಬಬಹುದು, ಕೆಲವು ದಿನಗಳಾದ ಮೇಲೆ ತಾವು ನಮ್ಮ ಉಪಾಧ್ಯಾಯರಿಗೆ ಬರೆದು ತಿಳಿದುಕೊಳ್ಳಬಹುದು, ನನ್ನ ಅಪರಾಧವನ್ನು ಈ ಸಾರಿಗೆ ಮನ್ನಿಸಬೇಕೆಂದು ಬಹಳವಾಗಿ ಬೇಡುತ್ತೇನೆ. ಇಂತೀ ನಮಸ್ಕಾರ, ಮೇಲ್ನೋಟಿ, 8-9-1912, 3. ಸಾಲಕೇಳಿದುದಕ್ಕೆ ಉತ್ತರ. ಮ, ರಾ, ಕೃಷ್ಣಮಾಚಾರ್ಯರವರ ಸ|| , ರಾಮಸೆಟ್ಟಿಯ ವಿಜ್ಞಾಪನೆ, ಉಭಯ ಕುಶಲೋಪರಿ ಸಾಂಪ್ರತ - ತಮ್ಮ ಕಾಗದ ತಲಪಿ ಎಲ್ಲವೂ ಅಭಿಪ್ರಾಯವಾಯಿತು, ಸದಃ ನನ್ನಲ್ಲಿ ಒಂದು ರೂಪಾಯಿ ಕೂಡ ಇಲ್ಲ. ಇನ್ನು ಕೆಲವು ಕಲ ಯಾರಿಂದಲೂ ಬರುವ ಹಾಗೂ ಕಾಣಲಿಲ್ಲ. ನನ್ನ