ಪುಟ:ಪ್ರಬಂಧಮಂಜರಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಾಲಿತ್ಯ, ೧೧ ಹೊತ್ತು ಹುಟ್ಟುವುದಕ್ಕೆ ಮುಂದೆ ಎದ್ದು ಹೊಳೆಗೆ ಹೋಗಿ ಹಲ್ಲುಜ್ಜಿಕೊಂಡು ಬಾಯಿ ಮುಕ್ಕುಳಿಸಿ ಮೊಕತೊಳೆದು ಶುಚಿಯಾಗಿ ಮಡಿಯುಟ್ಟು ಕ್ರಮವಾಗಿ ಸಂಧ್ಯಾನುಷ್ಟಾನವನ್ನು ತೀರಿಸಿಕೊಂಡ ಮೇಲೆ ” ಪುನರುಕ್ತಿಯನ್ನೂ ಶಬ್ಲಾಧಿಕ್ಯವನ್ನೂ ತಾತ್ಪರ್ಯ ಪುಷ್ಟಿಗಾಗಿ ಕೆ'- ವೆಡೆ ಪ್ರಯೋಗಿಸುವುದುಂಟು. ಹೇಗೆಂದರೆ:- 4 ಅರವಲ್ಲಿ ಪರ್ವತಮಾಲೆಯ ಸಮಸ್ತದುಗಳೂ ಪ್ರತಾಪನ ಯಾವುದಾದರೊಂದು ಸಾಹಸಕಾರ್ಯದಿಂದ, ಯಾವುದಾದರೊಂದು ದಿಗ್ವಿಜಯದಿಂದ, ಯಾವುದಾ, ದರೋಂದು ಅಪಜಯದಿಂದ ಪವಿತ್ರವಾಗಿರುವುವು." “ ಅದನ್ನು ಬಾಯಿಂದ ಹೇಳಲಾರೆನು, ” “ ಅದನ್ನು ನಮ್ಮ ಕಣ್ಣಿನಿಂದಲೇ ನೋಡಿದ್ದೇವೆ, ನಮ್ಮ ಕಿವಿಗಳಿಂದಲೇ ಕೇಳಿದ್ದೇವೆ” “ ಅಂತರಿಕ್ಷದಲ್ಲಿ ಹೊಳೆವ ಸೂರ್ಯಚಂದ್ರಾದಿಗ್ರಹಗಳೂ, ಭೂಮಿಯ ಮೇಲೆ ಹರಿವ ನದಿಗಳೂ, ನಾನು ಯಾವ ತಪ್ಪನ್ನೂ ಮಾಡಿಲ್ಲವೆಂಬುದಕ್ಕೆ ಸಾಕ್ಷಿಗಳು? ಇಂಡಿಯಾ ದೇಶದಲ್ಲಿ ಸಮಾಧಾನವೂ, ಜನರಿಗೆ ಸೌಖ್ಯವೂ ಉಂಟಾದ ಕಾಲವನ್ನು ಗೊತ್ತು. ಮಾಡುವುದಕ್ಕೆ ಯಾರಾದರೂ ಹೊರಟರೆ, ಅವರು ಇಂಗ್ಲಿಷರಿಗೆ ರಾಜ್ಯಭಾರವು ಕೈಸೇರಿದಂದಿನಿಂದ ಅಂಥ ಕಾಲವು ಮೊದಲಾಯಿತೆಂದು ನಿಸ್ಸಂಶಯವಾಗಿ ಹೇಳಬಲ್ಲರು. ಹೀಗೆ ಲಂಬಿಸಿ ಹೇಳುವುದರಿಂದ, ಇಂಗ್ಲಿಷರ ರಾಜ್ಯಭಾರದಿಂದ ಇಂಡಿಯಾದಲ್ಲಿ ಸಮಾಧಾನವೂ ಸೌಖ್ಯವೂ ಉಂಟಾದುವು" ಎಂದು ಹೇಳಬಹುದಾದ ವಾಕ್ಯದ ಅಭಿಪ್ರಾಯವು ಬಹಳ ದೃಢಪಡುವುದು, ಶಬಾಧಿಕ್ಯವು ಶೋಕರಸ ಮೊದಲಾದುವುಗಳನ್ನು ಪ್ರಕಟಿಸುವಾಗಲೂ ಬರುವುದುಂಟು. (c) ಪದಗಳನ್ನು ಗೂಢಾರ್ಥಗಳಲ್ಲಿ ಪ್ರಯೋಗಿಸುವುದೂ ವಿರುದ್ಧಾರ್ಥವಾಗುವಂತೆ ಉಪಯೋಗಿಸುವುದೂ ಲಾಲಿತ್ಯಗುಣಕ್ಕೆ ಕುಂದನ್ನು ತರುವುವು. ಉದಾ.ಗೂಢಾರ್ಥಕ್ಕೆ:- ಆ ಪ್ರಾಚೀನ ದ್ರಾವಿಡರು ಕ್ರಮಶಃ ಹಿಂದೂ ಧರ್ಮವನ್ನೂ ಹಿಂದೂ ಸಭ್ಯತೆಯನ್ನೂ ಕಲಿತುಕೊಂಡರು, - ವಿದೇಹ ಮತ್ತು ಕೋಸಲ ಪ್ರದೇಶಗಳು ರಾಮಾಯಣದಲ್ಲಿ ಅವಲಂಬಿಸಿರುವ ಅಭಿನಯಗಳ ಕ್ಷೇತ್ರಗಳಾಗಿವೆ.”