ಪುಟ:ಪ್ರಬಂಧಮಂಜರಿ.djvu/೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮ ಪ್ರಬಂಧಮಂಜರಿ-ಮೊದಲನೆಯ ಭಾಗ

  • 4 ಹಸುವಿನಷ್ಟು ಉಪಯುಕ್ತವಾದ ಪ್ರಾಣಿ ಪ್ರಪಂಚದಲ್ಲಿ ಮತ್ತಾವುದೂ ಇಲ್ಲ "(ಪ್ರಬಂಧ) ಈ ವಾಕ್ಯವು ಹಸುವಿನಿಂದಾಗುವ ಪ್ರಯೋಜನಗಳನ್ನು ವರ್ಣಿಸಿರುವ ವಾಕ್ಯವೃಂದದ ಆದಿಯಲ್ಲಿದೆ. - III, ವಾಕ್ಯವೃಂದದ ಎಲ್ಲಾ ವಾಕ್ಯಗಳೂ ಅದರ ಮುಖ್ಯಾಭಿಪ್ರಾಯ. ವನ್ನು ಪೋಷಿಸತಕ್ಕವುಗಳಾಗಿರಬೇಕು, ಇದನ್ನು ಏಕೀಭಾವ (Unity in a Paragraph) ವೆಂದು ಕರೆಯಬಹುದು - ಅಪ್ರಕೃತವಾದ ಸಂಗತಿಗಳನ್ನು ವಾಕ್ಯವೃಂದದ ನಡುವೆ ತರಬಾರದು

ವಾಕ್ಯವೃಂದಗಳು ಬಹಳ ಉದ್ದವಾಗಿಯೂ ಬಹಳ ಚಿಕ್ಕವಾಗಿಯೂ ಇರಬಾರದು, ಬಹುದೀರ್ಘವಾದ ವಾಕ್ಯವೃಂದದಲ್ಲಿ ಏಕೀಭಾವವಿರುವುದು ಅಪೂರ್ವ, ಮುಖ್ಯೋದ್ದೇಶವು ಮರೆತು ಹೋಗಿ ಅಪ್ರಕೃತವಾದ ವಿಷಯಗಳಿಗೆ ಅವಕಾಶವಾಗುವುದು. ವಾಕ್ಯವೃಂದವನ್ನು ಒಂದೆರಡು ವಾಕ್ಯಗಳಲ್ಲಿಯೇ ಮುಗಿಸಬಾರದು. ಇದರಿಂದ ಬಿಗಿ ತಪ್ಪಿ ವಾಕ್ಯ ಬೃಂದವು ಒಂದು ವಾಕ್ಯಕ್ಕೆ ಸಮಾನವಾಗುವುದು. - IV, ವಾಕ್ಯದಲ್ಲಿ ಪದಗಳನ್ನು ಹೇಗೋ ಹಾಗೆಯೇ ವಾಕ್ಯವೃಂದದಲ್ಲಿ ವಾಕ್ಯಗಳನ್ನು ತಕ್ಕ ಸ್ಥಳಗಳಲ್ಲಿ ಬರೆಯಬೇಕು. ಮುಖ್ಯವಾದುದು ಅಮುಖ್ಯವಾಗಿಯೂ ಅಮುಖ್ಯವಾದುದು ಮುಖ್ಯವಾಗಿಯೂ ಕಾಣುವಂತೆ ಇರಬಾರದು. V, ಒಂದೇ ವಿಧವಾದ ವೇಷವನ್ನು ನೋಡುವುದಕ್ಕೂ, ತಿಂಡಿಯನ್ನು ತಿನ್ನು ವುದಕ್ಕೂ ಬೇಸರವಾಗುವಂತೆ, ವಾಕ್ಯವೃಂದವು ಮೊದಲಿಂದ ಕೊನೆವರೆಗೂ ಒಂದೇ ವಿಧವಾದ ವಾಕ್ಯಗಳಿಂದ ಕೂಡಿದ್ದರೆ ಕಿವಿಗಿಂಪಾಗಲಾರದು. ಕೆಲವುದೂರ ಸಾಮಾನ್ಯವಾಕ್ಯ, ಕೆಲವುದರ ಮಿಶ್ರವಾಕ್ಯ,ಕೆಲವುಕಡೆ ಸಂಯೋಜಿತವಾಕ್ಯ, ಕೆಲವುಕಡೆ ಸಮತೆ ಹೀಗೆ ವಾಕ್ಯವೃಂದದ ಸ್ವರೂಪವು ಬೇರೆ ಬೇರೆ ವಿಧವಾದ ಭಾಗಗಳಿಂದ ಯಥೋಚಿತವಾಗಿ, ಕೂಡಿರಬೇಕು, ಲೇಖನಚಿಹ್ನೆಗಳು (Punctuation). ಅರ್ಥವು ಸುಲಭವಾಗಿ ತೋರುವಂತೆ ಕೆಲವು ಗುರುತುಗಳನ್ನು ಬರೆವುದರಲ್ಲಿಯ ಅಚ್ಚು ಹಾಕುವುದರಲ್ಲಿಯೂ ಇಂಗ್ಲಿಷಿನಲ್ಲಿ ಉಪಯೋಗಿಸು