ಪುಟ:ಪ್ರಬಂಧಮಂಜರಿ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ M (a) ಗಾಜು, ಕಾಗದ, ರೇಷ್ಮೆ, ಜಂಖಾನ, ಮೋಂಬತ್ತಿ, ಇಟ್ಟಿಗೆ, ಶಾಯಿ, ಸಕ್ಕರೆ ಇಂಥವು. (b) ಕಟ್ಟಡ, ಹಡಗು. ೬. ಪ್ರಾಕೃತಿಕವಾದ ವಸ್ತು ಅಥವಾ ನೋಟ: (0) ದೇಶ, ಜಿಲ್ಲೆ, ಪಟ್ಟಣ, (b) ನದಿ, ಬೆಟ್ಟ, ಮರಳಕಾಡು, ಜಲಪಾತ ಮುಂತಾದವು ಈ ವಸ್ತುಗಳನ್ನು ಎಲ್ಲರೂ ನೋಡುತ್ತಲೇ ಇರುವುದರಿಂದ ಎಲ್ಲರಿಗೂ ತಕ್ಕ ಮಟ್ಟಿಗೆ ಇವುಗಳ ವಿಷಯದಲ್ಲಿ ಬರೆಯಬೇಕಾದುದು ತಿಳಿದೇ ಇ ವುದು, ಮೇಲಣ ಪ್ರತಿ ತರಗತಿಯ ವಸ್ತುಗಳನ್ನು ಕುರಿತು ಬರೆಯಬೇಕಾದ ವಿಷಯಗಳ ಸಾರಾಂಶಗಳನ್ನು ಮಾದರಿಗಾಗಿ ಈ ಕೆಳಗೆ ಕೊಟ್ಟಿದೆ. - Yo೫*೨ನಸಾರಾಂಶಗಳು (Outlines). ೧, ಪ್ರಾಣಿ, 1. ವಾಸಸ್ಥಾನ; 2. ವರ್ಣನೆ; 3, ಸ್ವಭಾವ, ಗುಣ, ಆಹಾರ: 4. ಉಪಯೋಗ ಉದಾಹರಣೆ:- ಆನೆ (3) ಆಫ್ರಿಕಾಖಂಡ, ಇಂಡಿಯಾ, ಬರ್ಮ, ಸಯಾಂ, ಸಿಂಹಳದೀಪ. (8) ಬಣ್ಣ ಕಪ್ಪು-ಅತ್ಯುನ್ನತವಾದ ಜಂತು, ಸುಮಾರು ಹತ್ತಡಿ ಎತ್ತರ-ತಲೆ ಬಹಳ ದಪ್ಪಕಿವಿಗಳು ಬೀಸಣಿಗೆಯಂತೆ ಅಗಲ, ಬಹಳ ಸೂಕ್ಷ್ಮ, ಮನುಷ್ಯನಿಗೆ ಕೇಳಿಸದ ಸದ್ದು ಇದಕ್ಕೆ ಕೇಳಿಸುತ್ತದೆ. ಕಣ್ಣುಗಳು ಚಿಕ್ಕವನು, ಸೂಕ್ಷ್ಮವಲ್ಲ .ಸೊಂಡಿಲು ಬಹಳ ಉಪಯುಕ್ತವಾದ ಅವಯವ ದುಂಡಾಗಿದೆ, ಮೇಲೆ ದಪ್ಪ, ಬರುತ್ತ ಬರುತ್ತ ಸಣ್ಣ, ಇದೇ ಆನೆಯ ಮೂಗು ಮತ್ತು ಮುಖ್ಯ ಸ್ಪರ್ಶೇಂದ್ರಿಯ-ಬಾಯಿ ಬಹಳ ದೊಡ್ಡ ದು-ದಂತಗಳು ಮೇಲಿನಾಲಿನಿಂದ ಮುಂದಕ್ಕೆ ಬಂದಿರುವ ಎರಡು ಹಲ್ಲುಗಳು, ಆರಡಿ ಉದ್ದ, ಯಾವಕಡೆ ಬೇಕಾದರೂ ತಿರುಗಿಸಬಹುದು- ಬಗ್ಗೆ ಸಲಾಗದ ದಪ್ಪವಾದ ಮೋಟು ಕುತ್ತಿಗೆ-ಮೈ ಬಹಳ ದಪ್ಪಭಾರ ಚರ್ಮ ಒರಟು - ಬಾಲವು ಸಣ್ಣದು, ತುದಿಯಲ್ಲಿ ಕೂದಲಿನ ಗೊಂಚಲು, ಕಾಲುಗಳು ಕಂಭದಹಾಗೆದಪ್ಪ, ದುಂಡು, ಬಲವುಳ್ಳವು-ಪಾದಗಳು ಗುಂಡು, ನಡೆವಾಗ ಸದ್ದಾಗುವುದಿಲ್ಲ, ಒಂದೊಂದು ಪಾದದಲ್ಲಿ ಐದು ಬೆರಳುಗಳು,