ಪುಟ:ಪ್ರಬಂಧಮಂಜರಿ.djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರಬಂಧ عد ಲ್ಲದಂತೆ ಪರೀಕ್ಷೆಯಲ್ಲಿ ಬರೆದರೆ ಸಾಕು, ಆದರೆ ಯಾವುದಾದರೂ ಒಂದು ವಿಷಯವನ್ನು ಕುರಿತು ಒಳ್ಳೆಯ ಪ್ರಬಂಧವನ್ನು ಬರೆಯಲು, ಅದರ ವಿಷಯದಲ್ಲಿ ಏನೇನು ಹೇಳಿದೆಯೋ ಅದನ್ನು ಪುಸ್ತಕಗಳಲ್ಲಿ ಓದಿ ಚೆನ್ನಾಗಿ ಮಂದಟ್ಟು ಮಾಡಿಕೊಂಡು, ಕೆಲವು ದಿನಗಳಾದಮೇಲೆ ಅದರ ಸಾರಾಂಶವನ್ನು ಸ್ವಂತವಾಗಿ ಬರೆಯಬೇಕು. ಹೀಗೆ ಹಲವು ಬಗೆಯ ವಿಷಯಗಳನ್ನು ಕುರಿತು ಬರೆದರೆ ಚೆನ್ನಾಗಿ ಬರೆಯಲು ಅಭ್ಯಾಸವಾಗುವುದು. ೪, ಯಂತ್ರ, ಯಂತ್ರಗಳನ್ನು ವರ್ಣಿಸಲು ಶಾಸ್ತ್ರಜ್ಞಾನವು ಆವಶ್ಯಕವು. (1) ಸಂಕ್ಷಿಪ್ತವಾದ ಸಾಮಾನ್ಯ ವರ್ಣನೆ. (2) ಯಂತ್ರವು ಅಭಿವೃದ್ದಿಗೆ ಬಂದುದರ ಚರಿತ್ರೆ. (3) ನಾನಾ ರೂಪಗಳು (4) ಬೇರೆಬೇರೆ ಭಾಗಗಳ ವರ್ಣನೆ ( ಚಿತ್ರದೊಡನೆ) (5) ಉಪಯೋಗಿಸುವ ರೀತಿ.ಮೂಲತತ್ವ. (6) ಪ್ರಯೋಜನ. ೫, ಕೈಗಾರಿಕೆ, (d) ಗಾಜು ಮುಂತಾದುವು. (1) ಮೂಲದ್ರವ್ಯ, ಅದು ಎಲ್ಲಿ ದೊರೆವುದು? (2) ಬೇಕಾದ ಯಂತ್ರ ಸಹಾಯ. (3) ಮಾಡುವಕ್ರಮ. (4) ನಾನಾಭೇದಗಳು: ಆಕಾರ, ಗುಣ. (5) ಎಲ್ಲೆಲ್ಲಿ ನಡೆವುದು? (6) ಉಪಯೋಗ ಉದಾ...ಕಾಗದ, (1) ಇದನ್ನು ಹರಕುಬಟ್ಟೆ, ಒಣಹುಲ್ಲು, ಸೆಣಬಿನನಾರು, ಅಕ್ಕಿ ಮೊದಲಾದುವುಗಳಿಂದ ಮಾಡುವರು, ಹಳೆಯ ಕಾಗದದಿಂದಲೂ ಆಗುವುದುಂಟು. (2), (3) ಯಂತ್ರದಿಂದ ಮಾಡುವದು:-ಹರಕು ಬಟ್ಟೆಯನ್ನು ಚೂರು ಚೂರುಮಾಡಿ, ದೂಳುಕಡವಿ, ಸೋಡಾ, ಒಂದು ತರದ ಸುಣ್ಣ ಇವುಗಳೊಡನೆ ಕುದಿಸಿ, ಗಂಜಿಯಂತಿಮಾಡು, ಇದು. ಶಾಯಿ ಇಳಿಯದಂತೆ ಗಟ್ಟಿಯಾಗಿರಲು ಒಂದು ತರದ ಅಂಟನ್ನು ಆ ಗಂಜಿಗೆ ಸೇರಿ ಸುವುದು. ಯಂತ್ರದಿಂದ ಮೂರು ಘಂಟೆಯಲ್ಲಿ ಮಾಡುವಷ್ಟು ಕಾಗದವು ಒಂದು ಮೈಲುದ್ದ.