ಪುಟ:ಪ್ರಬಂಧಮಂಜರಿ.djvu/೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮ ಪ್ರಬಂಧಮಂಜರಿ-ಮೊದಲನೆಯ ಭಾಗ ಕೈಯಿಂದ ಮಾಡುವುದು.-ಆ ಗಂಜಿಯನ್ನು ನೀರಿನೊಡನೆ ಕುದಿಸಿ ತಂತಿಯಿಂದ ಮಾಡಿದ ಒಂದು ಅಚ್ಚಿನೊಳಗೆ ಸುರಿವುದು ಇದರಿಂದ ನೀರು ಹೋಗಿ ರೇಕು ಆಗುವುದು. ರೇಕನ್ನು ಕಂಬಳಿ ಮೇಲಿರಿಸಿ, ಬಟ್ಟೆಯನ್ನು ಮುಚ್ಚುವುದು. ಹೀಗೆ ರೇಕುಗಳನ್ನೆಲ್ಲ ಒಂದರಮೇಲೊಂ ದಿರಿಸಿ, ಒಂದು ಭಾರವಾದ ಅಚ್ಚಿಗೆ ಕೊಟ್ಟು ಒತ್ತಿ ಬಿಸಿಲಲ್ಲಿ ಒಣಗಿಸುವುದು, (4) ಕರಡುಕಾಗದ, ಬರೆವ ಕಾಗದ, ಅಚ್ಚು ಹಾಕುವ ಕಾಗದ, ಒತ್ತುವ ಕಾಗದ (5) ಚೀಣ, ಜಪಾನ್‌ನವರು ಅಕ್ಕಿಯಿಂದ ಹೇರಳವಾಗಿ ಕಾಗದಮಾಡುವರು, ಯ• ರೂಪಿನಲ್ಲಿ ಕಾಗದಮಾಡಲು ಸಾವಿರಾರು ಯಂತ್ರಗಳಿವೆ. ಅಲ್ಲಿ ಕೂಲಿಮಾಡಿ ಲಕ್ಷಾಂತರ ಜನರು ಜೀವಿಸುವರು, ಕಾಗದಕ್ಕೆ ಬೇಕಾದ ಒಣಹುಲ್ಲು, ಚಿಂದಿಬಟ್ಟೆ ಮುಂತಾದುವನ್ನು ಒದಗಿಸುವವರು ಎಷ್ಟೋ ಮಂದಿ, (6) ಅಚ್ಚು ಹಾಕುವುದು, ಬರೆವಣಿಗೆ, ಚೀಣ, ಜಪಾನ್‌ಗಳಲ್ಲಿ ಕಾಗದದಿಂದ ಕೊಡೆ, ಕುಲಾನಿ, ಉಡಿಗೆ, ಪಾತ್ರೆ, ಹಾಸಿಗೆ ಇವುಗಳನ್ನು ಮಾಡುವರು. ರಬ್ಬರು ಹಾಸಿಗೆಗಿಂತ ಈ ಹಾಸಿಗೆಯನ್ನು ಚಿಕ್ಕದಾಗಿ ಮಡಿಸಬಹುದು ; ನೀರಿನಲ್ಲಿ ನೆನೆದರೂ ಅಂಟಿಕೊಳ್ಳುವುದಿಲ್ಲ. ಅಮೆರಿಕದಲ್ಲಿ ಹೊಗೆಬಂಡಿಯ ಚಕ್ರ, ನಾಟಕಶಾಲೆ ಇವುಗಳನ್ನು ಕಾಗದದಿಂದ ಮಾಡುವರು. , ೫, (b) ಕಟ್ಟಡ, (1) ಸಾಮಾನ್ಯವರ್ಣನೆ. (2) ಇರುವಸ್ಥಳ. (3) ಕಟ್ಟಿದುದು ಹೇಗೆ? ಅದರ ಚರಿತ್ರೆ-ಕಟ್ಟಿದ ಶಿಲ್ಪಿ -ಅದಕ್ಕೆ ಆಧಾರವಾದ ಉಪಕಾರಿ. ಆಕಾರ: ಹೊರಗೆ; ಒಳಗೆ, (5) ಬೇರೆ ಬೇರೆ ಭಾಗಗಳು, ಕಟ್ಟಡದರೀತಿ, ಅಳತೆ. (6) ವಿಶೇಷ ಸಂಗತಿಗಳು. (7) ಉಪಯೋಗ ೬, () ದೇಶ, ಜಿಲ್ಲೆ, ಪಟ್ಟಣ, (1) ಹೆಸರು: ಅದರ ಅರ್ಥ; ಹೇಗೆ ಬಂದಿತು? (2) ಮೇರೆ: ಸ್ವಾಭಾವಿಕವಾದ ಆನುಕೂಲ್ಯಗಳು, ವಾಯುಗುಣ, ನದಿ, ಬೆಟ್ಟ, ಸಮುದ್ರತೀರ, ಪ್ರಾಣಿ ಮುಂತಾದುದು.