ಪುಟ:ಪ್ರಬಂಧಮಂಜರಿ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fܦ ಪ್ರಬಂಧ (3) ಅಭಿವೃದ್ದಿ : ಅದಕ್ಕೆ ಕಾರಣ. (4) ಜನರು: ಅವರ ಸಂಖ್ಯೆ, ವಿದ್ಯಾಭ್ಯಾಸ, ಸ್ವಭಾವಮತ ಇತ್ಯಾದಿ (5) ಉತ್ಪತ್ತಿ, ಕೈಗಾರಿಕೆ, ವ್ಯಾಪಾರ, ಆಮದು, ರಫ್ತು. (6) ರೈಲು ಮತ್ತು ಸಾಮಾನ್ಯರಸ್ತೆ, (7) ಇತರ ಪಟ್ಟಣಗಳು, ದೇಶಗಳು, ಅಥವಾ ಜಿಲ್ಲೆಗಳು ಇವುಗ ಳೊಡನೆ ಸಂಬಂಧ. (8) ಪ್ರಸಿದ್ಧ ಪುರುಷರು. (9) ಮುಂದೆ ಯಾವ ಸ್ಥಿತಿಗೆ ಬರಬಹುದು ? ಸೂಚನೆ:-ಪ್ರಬಂಧದ ಜತೆಯಲ್ಲಿ ನಕ್ಷೆ ಬರೆವುದು, ಪಟ್ಟಣವನ್ನು ವರ್ಣಿಸುವಾಗ ನಕ್ಷೆಯಲ್ಲಿ ಹತ್ತರ ಇರುವ ರೇವು, ರೈಲುರಸ್ತೆ, ಬೇರೆ ರಸ್ತೆ, ಇವನ್ನೂ ತೋರಿಸಬೇಕು. ೬, (b) ನದಿ, ಪರ್ವತ. (1) ಮೇರೆ (2) ಸ್ವರೂಪವರ್ಣನೆ:- ನದಿ: ಹುಟ್ಟುವ ಸ್ಥಳ, ಮುಖ, ಪಾತ್ರ, ಉದ್ದ, ಎಷ್ಟು ದೂರ ದೋಣಿಯಿಂದ ಪ್ರಯಾಣಕ್ಕೆ ಯೋಗ್ಯ ? ಶಾಖೆಗಳು, ಉಪನದಿಗಳು, - ಸರ್ವತ: ಎತ್ತರ, ಪ್ರತ್ಯೇಕವಾಗಿದೆಯೇ, ಒಂದು ಪಜಿಯ ಭಾಗವೇ; ಪಬಿಯಲ್ಲಿ ಇತರ ಶಿಖರಗಳು; ಮೇಲ್ಬಾಗದ ಸ್ವ ರೂಪ; ಸಂತತವಾಗಿ ಮಂಜು ಇರುವ ಎತ್ತರ. (3) ಸಮಾಜದ ಮುಖ್ಯ ಪಟ್ಟಣಗಳು ; ಅವುಗಳ ಪ್ರಾಮುಖ್ಯ ಮತ್ತು ಕೈಗಾರಿಕೆ, (4) ಹವ, ಮಳೆ, ವ್ಯವಸಾಯ, ಕೈಗಾರಿಕೆ, ದೋಣಿಯ ಮೇಲೆ ಸಂಚಾರ, ಇವುಗಳಿಗೆ ಆಗುವ ಪ್ರಯೋಜನ. (5) ನೋಟ: ಇಂಥ ಇತರ ಪ್ರದೇಶಗಳೊಡನೆ ಹೋಲಿಕೆ .ಸೂಚನೆ:-ಇಲ್ಲಿಯ ಒಂದು ನಕ್ಷೆ ಬೇಕು, ಏನಾದರೂ ವಿಶೇಷ ಸಂಗತಿಗಳು ತೋರಿದರೆ ಬರೆಯಬಹುದು. ಗಂಗೆ ಕಾವೇರಿ ಮೊದಲಾದುವನ್ನು ವರ್ಣಿಸುವಾಗ ಅವುಗಳ ವಿಷಯದಲ್ಲಿ ಹಿಂದೂಜನರ ಭಕ್ತಿಯನ್ನೂ, ನೈಲನ್ನು ವರ್ಣಿಸುವಾಗ ಈಜಿಪ್ಟ್ ದೇಶಕ್ಕೆ ಆ ನದಿಯೇ ಗತಿಯಾಗಿರುವುದನ್ನೂ ಹೇಳಬೇಕು.