ಪುಟ:ಪ್ರಬಂಧಮಂಜರಿ.djvu/೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩L ಶ್ರಬಂಧಮಂಜರಿ-ಮೊದಲನೆಯ ಭಾಗ (5) ಸಮಾಪ್ತಿ:-ಕೊಟ್ಟ ವಿಷಯದಿಂದ ತೋರುವ ಬುದ್ಧಿವಾದವನ್ನು ವಿವರಿಸುವುದು. ದೀರ್ಘವಾದ ಪ್ರಬಂಧಗಳಲ್ಲಿ ಕೆಲವರು ಹಿಂದೆ ಹೇಳಿದ್ದ ಅಂಶಗಳನ್ನೆಲ್ಲ ಇಲ್ಲಿ ಸಂಕ್ಷೇಪಿಸಿ ಮತ್ತೆ ಹೇಳುವುದುಂಟು. - ಪ್ರಬಂಧದಲ್ಲಿ ತಕ್ಕ ಕಡೆ ಉಪಮೆ, ರೂಪಕ, ದೃಷ್ಟಾಂತ ಸ್ವಭಾವೋಕ್ತಿ ಮೊದಲಾದ ಕೆಲವು ಅಲಂಕಾರಗಳನ್ನು ಪ್ರಯೋಗಿಸಿದರೆ ಬೇಸರ ತಪ್ಪಿ ಅದು ಆಹ್ಲಾದಕರವಾಗುವುದು : ಆದರೆ ಅತಿಶಯೋಕ್ತಿ, ಉತ್ತೇಕೆ, ಶ್ರೇಷೆ ಮುಂತಾದುವು ಕೂಡದು.

  • ಪ್ರತಿಯೊಂದು ಪ್ರಬಂಧದ ಆದಿಯೂ ಅಂತವೂ ಒಂದೊಂದು ವಾಕ್ಯ ಬೃಂದದಿಂದಾಗಿರಬೇಕು. ಮಧ್ಯಭಾಗದಲ್ಲಿ ಕೊಟ್ಟ ವಿಷಯವನ್ನೂ ಕಾಲವನ್ನೂ ಅನುಸರಿಸಿ ಒಂದು ಅಥವಾ ಹೆಚ್ಚು ವಾಕ್ಯವೃಂದಗಳಿರಬಹುದು, ಆದ್ಯಂತಗಳು ಪ್ರಬಂಧದ ಅತಿಕಠಿನವಾದ ಭಾಗಗಳು. ಇವುಗಳನ್ನು ಚೆನ್ನಾಗಿ ಬರೆಯಲು ಬಲುಜಾಣೆ ಬೇಕು. ಆದಿಯ ವಾಕ್ಯವೃಂದವು ಬಲು ಉದ್ದವಾಗಿರಬಾರದು. ಮಧ್ಯಭಾಗದಲ್ಲಿ ಪ್ರಾರಂಭಿಸಬೇಕಾದ ಪ್ರಬಂಧಕ್ಕೆ ತಕ್ಕ ಸಂಕ್ಷಿಪ್ತವಾದ ಪೀಠಿಕೆಯ ರೂಪದಲ್ಲಿರಬೇಕು.

ಈ ವಿಧದ ಪ್ರಬಂಧಕ್ಕೆ ಕೆಲವು ವೇಳೆ ಒಂದು ನೀತಿವಚನವನ್ನು ,ನೀತಿ, ಪದ್ಯವನ್ನು ಇಲ್ಲವೆ ಲೋಕೋಕ್ತಿಯನ್ನು ಕೊಟ್ಟಾಗ ಅವುಗಳ ಅರ್ಥವನ್ನು ಒಂದೆರಡು ಮಾತುಗಳಲ್ಲಿಯೇ ಸಂಗ್ರಹಿಸಿಕೊಂಡು ಮುಖ್ಯ ತಾತ್ಪರ್ಯವನ್ನು ವಿವರಿಸುವುದು. ಉದಾ:- (1) ಅತಿಸ್ನೇಹ ಗತಿ ಕೆಡಿಸಿತು. (2) ಸ್ಥಾನದ ಬಲದಿಂ ಬೀಗಿದೆ | ಡೇನಕ್ಕುಂ ಗುಣಮೆ ಮಾನ್ಯಮಲ್ಲಿ ರ್ದೊಡಮೇಂ || ಮಾನಾರ್ಹಮೆ ಮಾರ್ಜಾಲಂ | ಮಾನವಸತಿಯಂತವುರದೊಳಿರ್ದುo ಕಂಪೋಲ್ | (3) ಮಾಡುವುದನಾಚಾರ, ಮನೆಯ ಮುಂದೆ ಬೃಂದಾವನ ಇವುಗಳಿಂದ ಗ್ರಹಿಸಬೇಕಾದ ತಾತ್ಸರ್ಯಗಳಾವುವೆಂದರೆ: