ಪುಟ:ಪ್ರಬಂಧಮಂಜರಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ 4f ಗಳಲ್ಲಿ ಒಂದೆಂದು ಗಣಿಸುವರು-ಬಂದ ಅತಿಥಿಯನ್ನು ಸತ್ಕರಿಸದಿರುವುದು ಇವರಲ್ಲಿ ದೊಡ್ಡ ಜಪ-ಅಕೀಳುಜಾತಿಯವರೂ ಆಚರಿಸುವರು, 3, ಉದಾಹರಣೆಗಳು, 4. ನಾಗರಿಕತೆ ಹೆಚ್ಚಿದಷ್ಟೂ ಅತಿಥಿಸತ್ಕಾರದಲ್ಲಿ ಪಾರಮಾರ್ಥಿಕತೆ ಕಡಮೆಯಾಗಿ ಕೇವಲ ಪ್ರತಿಫಲೇಚ್ಛೆಯೇ ಉಂಟಾಗುವುದು. 5, ಸಮಾಪ್ತಿ. 4. ಬೈಸಿಕಲ್, 1, ಸಾಧಾರಣ ಹಣಗಾರರಿಗೂ ಬಲು ಉಪಯುಕ್ತ. 2, ಹೆಚ್ಚು ಖರ್ಚಿಲ್ಲದೆ ಕುದುರೆ ಸವಾರಿಯು ಪ್ರಯೋಜನಗಳನ್ನುಂಟುಮಾಡುವುದಲ್ಲದೆ ಅದರಷ್ಟೇ ಅಂಗಸಾಧನೆ ಕೊಡುವುದು, ಕಾಲವನ್ನು ಬಹಳ ಮಿಗಿಸುವುದು, 3, ಸ್ವದೇಶದ ನೋಟಗಳನ್ನೆಲ್ಲ ನೋಡಲು ಎಲ್ಲರಿಗೂ ಅವಕಾಶ ಕೊಡುವುದು. 4 ಅದರ ಮೇಲೆ ನೆಟ್ಟಗೆ ಕುಳಿತುಕೊಳ್ಳುವುದರಿಂದ ಮೈಗೆ ಬಲಕೊಡುವುದು, ಎದೆಯನ್ನು ಅಗಲಿಸುವುದು, 6, ತಿಳಿದವರಿಗೆ ಬಲು ಅನುಕೂಲ-ತಿಳಿಯದವರಿಗೆ ಹಾನಿಕರ, 6, ಈಗ ಇಂಡಿಯಾದಲ್ಲಿನ ದೊಡ್ಡ ಪಟ್ಟಣಗಳಲ್ಲಿ ಬೈಸಿಕಲಮೇಲೆ ಆಸೆ ಅತಿ ಬಲ; ಸಮಾಪ್ತಿ, 5. ಸಮುದ್ರಯಾನ. (a) ಶಬ್ದಾರ್ಥ-ಅನೇಕ ಶತಮಾನಗಳಿಂದಲೂ ಪಶ್ಚಿಮದೇಶಗಳಲ್ಲಿ ಉಂಟು, (6) ಪ್ರಯೋಜನಗಳು ೧, ಅಮೆರಿಕ, ಇಡಿಯ ಮೊದಲಾದುವು ಪಾಶ್ಚಾತ್ಯರಿಗೆ ತಿಳಿಯಬಂದುವು. ೨, ವ್ಯಾಪಾರವೂ ನಾಗರಿಕತೆಯೂ ಹೆಚ್ಚಿದುವು. (c) ಹಿಂದೂಗಳಲ್ಲಿ ಇದು ನಿಷಿದ್ಧ, ಕಾರಣಗಳು:- 1. ಮೈಗೆ ಒಂಟುವುದಿಲ್ಲ, ತಲೆ ತಿರುಗುವುದು, ವಾಂತಿ, 8 ಮತಕ್ಕೆ ವಿರುದ್ಧವಾಗಿ, ತಿಂಡಿತೀರ್ಥಗಳ ಸೇವನೆ ; ಇದರಿಂದ ಜಾತಿ ಸಾಂಕರ್ಯ, 3, ವೃದ್ಧಾಚಾರವಿಲ್ಲ, (d) ಆಕ್ಷೇಪಣೆಗಳಿಗೆ ಸಮಾಧಾನ :- 1. ಪ್ರಾರಂಭದಲ್ಲಿ ಸ್ವಲ್ಪ ಅಶಕ್ತಿಯಾಗಬಹುದು ; ಅಭ್ಯಾಸವಾದರೆ ಎಲ್ಲರಿಗೂ ಸರಿಹೋಗುವುದು,