ಪುಟ:ಪ್ರಬಂಧಮಂಜರಿ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೨ ಪ್ರಬಂಧಮಂಜರಿ-ಒಂದನೆಯ ಭಾಗ, (9) ವಿದ್ಯಾರ್ಥಿಯು ಬರೆವ ಪ್ರಬಂಧಗಳಲ್ಲಿ ತನ್ನನ್ನು ಕುರಿತು ನಾನು' ನನ್ನ ಮೊದಲಾದ ಸರ್ವನಾಮಪದಗಳನ್ನು ಬರೆಯಕೂಡದು. ಅಲ್ಲದೆ “ನೀವು ನಿಮ್ಮ ” “ ತಾವು” “ ತಮ್ಮ ” ಮೊದಲಾಗಿ ಪರೀಕ್ಷಕರನ್ನು ಕುರಿತು ಪ್ರಯೋಗಿಸಲಾಗದು, ನಾನು ಹೀಗೆ ಯೋಚಿಸುತ್ತೇನೆ (ನಾನು ಈ ಮಾತನ್ನು ಒಪ್ಪಲಾರೆ « ಈ ವಿಷಯವನ್ನು ಕೇಳಿದರೆ ತಮಗೆ ಆಶ್ಚರ್ಯವಾದೀತು ಎಂದು ಬರೆಯಬಾರದು, ಈ ವಾಕ್ಯಗಳಿಗೆ ಬದಲು ಕೆಲವರು ಹೀಗೆ ಯೋಚಿಸುವರು”« ಈ ಮಾತನ್ನು ಒಪ್ಪಲಾಗುವುದಿಲ್ಲ' ««ಈ ವಿಷಯ. ವನ್ನು ಕೇಳಿದರೆ ಯಾರಿಗಾದರೂ ಆಶ್ಚರ್ಯವಾದೀತು” ಎಂದು ಬರೆಯ. ಬೇಕು. (ಕಾಲ ಸಾಲದುದರಿಂದ ಇಲ್ಲಿಗೆ ನಿಲ್ಲಿಸಿದ್ದೇನೆ, ««ಇನ್ನೂ ವಿಶೇಷ. ವಾಗಿ ಬರೆಯುತ್ತಿದ್ದೆನು ; ದಯೆಯಿಟ್ಟು ಕ್ಷಮಿಸಬೇಕು.” ಎಂದು ಕೊಟ್ಟ. ಕಾಲವನ್ನು ದೂರುವುದೂ ಪರೀಕ್ಷಕರ ಕ್ಷಮೆಯನ್ನು ಬೇಡುವುದೂ ಎಂದಿಗೂ ಕೂಡದು.