ಪುಟ:ಪ್ರಬಂಧಮಂಜರಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಭಾಗ: ಪ್ರಬಂಧಗಳು ಸೂಚನೆ:- ಮುಂದೆ ಅರುವತ್ತು ಬೇರೆ ಬೇರೆ ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಪೂರ್ತಿಯಾಗಿ ಬರೆದು ತೋರಿಸಿದೆ. ಇವುಗಳನ್ನು ಪಯೋಗಿಸುವ ಕ್ರಮವೇನಂದರೆ : ಪ್ರಬಂಧವನ್ನು ಓದದೆ, ಪ್ರತಿವಿಷಯವನ್ನೂ ವಿದ್ಯಾರ್ಥಿಯು ತಾನೇ ಸಾವಧಾನವಾಗಿ ಯೋಚಿಸಿ, ತನಗೆ ತೂರಿದ ವಿಷಯಗಳನ್ನು ಹಿಂದೆ ಹೇಳಿರುವಂತ ಸೂಕ್ಷ್ಮ ವಾಗಿ ಪಟ್ಟಿಯ ರೂಪದಲ್ಲಿ ಗುರುತುಹಾಕಿಕೊಂಡು, ತರುವಾಯ ಆ ಪಟ್ಟಿಯನ್ನನುಸರಿಸಿ ಪ್ರಬಂಧವನ್ನು ಬರೆವುದು . ತನ್ನ ಪ್ರಬಂಧದಲ್ಲಿ ಬಿದ್ದಿರುವ ತಪ್ಪುಗಳನ್ನೆಲ್ಲ ತಿದ್ದಿ, ತನಗೆ ತಿಳಿದಮಟ್ಟಿಗೆ ಅದನ್ನು ನಾನಾವಿಧಗಳಲ್ಲಿಯ ಸರಿಮಾಡಿದ ಮೇಲೆ, ಆ ವಿಷಯವನ್ನು ಕುರಿತು ಇಲ್ಲಿ ಕೊಟ್ಟಿರುವ ಪ್ರಬಂಧವನ್ನು ಓದಬೇಕು. ಆ ಮೇಲೆ ಇದರ ಸಹಾಯದಿಂದ ತನ್ನ ಪ್ರಬಂಧವನ್ನು ಇನ್ನೂ ನೆಟ್ಟಗೆಮಾಡಿಕೊಳ್ಳಬಹುದಾಗಿ ತೋರಿದರೆ, ಹಾಗೆ ಮಾಡಬೇಕು. ಪ್ರಬಂಧರಚನೆಯ ಶಕ್ತಿಯನ್ನು ಹೀಗೆ ಕಷ್ಟ ಪಟ್ಟು ಸಂಪಾದಿಸಬೇಕಲ್ಲದೆ, ಇಲ್ಲಿ ಬರೆದಿರುವ ಪ್ರಬಂಧಗಳನ್ನು ಮೊದಲಿಂದ ಕೊನೆವರೆಗೂ ಕಂಠಪಾಠಮಾಡುವುದರಿಂದ ಏನೂ ಪ್ರಯೋಜನವಾಗಲಾರದು. 1. ಹಸು. ಇದು ಸಕಲ ವಲಯಗಳಲ್ಲಿಯೂ ಹರಡಿಕೊಂಡಿರುವುದು, ಅತಿ ಶೀತ. ವಾದ ಉತ್ತರಭಾಗದಲ್ಲಿ ಹೊರತು ಏಷ್ಯಾ ಖಂಡದ ಉಳಿದ ಎಲ್ಲಾ ಪ್ರದೇಶ ಗಳಲ್ಲಿಯೂ, ಆಫ್ರಿಕ, ಯೂರೋಪ್ ಖಂಡಗಳ ಮಧ್ಯ ದಕ್ಷಿಣ ಪ್ರದೇಶಗಳಲ್ಲಿಯೂ, ಅಮೆರಿಕಾ ಖಂಡದಲ್ಲಿಯೂ ವಿಶೇಷವಾಗಿರುವುದು. ಹಸು ಬಲು ಮಟ್ಟಸವಾದ ಚತುಷ್ಪಾದವು. ಇದು ಮೂರರಿಂದ ಐದಡಿ ಎತ್ತರವಿರುತ ದೆ. ಇದಕ್ಕೆ ಕುತ್ತಿಗೆಯ ಕೆಳಗೆ ನೆಲದೊಗಲೆಂಬ ಚರ್ಮವು ಜೋಲಾಡುತ್ತಿರುವುದು ಇದರ ಕಾಲುಗಳು ಸಣ್ಣವು ಮತ್ತು ಬಲವುಳ್ಳವು. ಕಾಲಿನ ಗೊರಸು ಎರಡುಪಾಲಾಗಿ ಸೀಳಿರುವುದು. ಬಾಲ ಉದ್ದವಾಗಿಯೂ ಬರುತಬರುತ ಮೊನೆಯಾಗಿಯೂ ಇರುವುದಲ್ಲದೆ ಅದರ ಕೊನೆಯಲ್ಲಿ ಕೂದಲಿನ ಗೊಂಚಲಿದೆ. ಹಿಂದೂ ದೇಶದಲ್ಲಿ ಅಮೃತಮ. ಹಲ್, ನೆಲ್ಲೂರು, ಕಾಠವಾಡಿ ಎಂಬ ಮುಖ್ಯವಾದ ಮೂರುರಾಸಿನ