ಪುಟ:ಪ್ರಬಂಧಮಂಜರಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V೪ ಪ್ರಬಂಧಮಂಜರಿ ಎರಡನೆಯ ಭಾಗ ಹಸುವುಂಟು • ಅಮೃತಮಹಲ್ರಾಸಿನ ಹಸುವು ಬಿಳಿದು, ಇದರ ಕೊಂಬುಗಳ ಉದ್ದ ಹೆಚ್ಚು ; ಮೊದಲು ಊರ್ಧ್ವಮುಖವಾಗಿ ಹಿಂದಕ್ಕೆ ಬೆಳೆದು, ಅನಂತರ ಮುಂದಕ್ಕೆ ಮೊನೆಯಾಗಿ ಬಾಗುವುವು. ಇದಕ್ಕೆ ಅಗಲವಾದ ಎದೆಯೂ, ಉದ್ದವಾಗಿಯೂ ಅಗಲವಾಗಿಯೂ ಇರುವ ಬೆನ್ನೂ, ತೆಳುವಾದ ಹೊಟ್ಟೆಯೂ, ಬಲವುಳ್ಳ ಗುಂಡಾದ ಕಾಲುಗಳೂ ಇವೆ. ನೆಲ್ಲೂ. ರಿನ ಹಸುಗಳಿಗೆ ಗಾತ್ರವಾದ ದೇಹವೂ, ಚಿಕ್ಕದಾಗಿಯೂ ದಪ್ಪವಾಗಿಯೂ ಇರುವ ಕೊರಳೂ, ಮೇಲುಮುಖವಾಗಿ ಬೆಳೆವ ಮೋಟಾದ ಕೊಂಬುಗಳೂ, ಉದ್ದವಾದ ಕಾಲು ಗಳೂ ಇರುವುವು. ತಲೆ ಬಲುದಪ್ಪ, ಕಾಠವಾಡಿಯ ರಾಸಿಗೆ ಗಾತ್ರವಾದ ಆಕಾರವೂ, ಗುಂಡಾಗಿರುವ ಚಿಕ್ಕ ಕೊಂಬು ಗಳೂ ವಿಶೇಷವು. ಹಸು ಪರಮ ಸಾಧು, ಮಾಂಸಾಹಾರಿಯಲ್ಲ; ಹುಲ್ಲು, ಸೊಪ್ಪು, ಧಾನ್ಯಗಳನ್ನು ತಿಂದು ಜೀವಿಸುತ್ತದೆ. ಇದಕ್ಕೆ ಸಿಟ್ಟು ಬೇಗನೆ ಬರುವುದಿಲ್ಲ; ಬಂದಲ್ಲಿ ಕೊಂಬುಗಳಿಂದ ತಿವಿಯು ವುದು. ಚಟವಟಿಕೆ ವಿಶೇಷ ವಾಗಿಲ್ಲ. ತಾಳ್ಮೆ ಬಹಳ, ಅಮೃತಮಹಲ್ ಚಾತಿಯ ಹಸುಗೆ ಕೋಪವೂ ಎಚ್ಚರಿಕೆಯೂ ಹೆಚ್ಚು. ಒಂದು ಸೇರಿಗಿಂತ ಹೆಚ್ಚು ಹಾಲು ಕರೆವುದು ಅಪೂರ್ವ, ನೆಲ್ಲೂರಿನ ರಾಸು ಬಹಳ ಸಾಧು, ಮೇಲುತರದ ಹಸುಗಳು ದಿನಕ್ಕೆ ಒಂಬತ್ತು ಸೇರು ಹಾಲನ್ನು ಕರೆಯುವುವು.ಕಾಗೆವಾಡಿಯ ಹಸುವೂ ಹೆಚ್ಚಾಗಿ ಹಾಲನ್ನು ಕೊಡುತ್ತದೆ. ಹಸು ಮೆಲುಕು ಹಾಕುವ ಪ್ರಾಣಿಯಾದುದರಿಂದ ಇದರ ಜಠರವೂ ಗಂಟಲೂ ವಿಜಾತೀಯವಾದುವು. ಜಠರವು ನಾಲ್ಕು ಭಾಗಗಳಾಗಿರುವುದು, ಹುಲ್ಲನ್ನು ಕೆಳಗಣ ಹಲ್ಲುಗಳಿಂದಲೂ ಮೇಲಣ ವಸಡಿನಿಂದಲೂ ಕಿತ್ತು ಹಲ್ಲುಗಳಿಂದ ಸ್ವಲ್ಪ ಮಟ್ಟಿಗೆ ಅಗಿದು ನುಂಗಿಬಿಡುವುದು. ಹೀಗೆ ತನಗೆ ಬೇಕಾದಷ್ಟು ತಿಂದಮೇಲೆ ಜಠರದಿಂದ ಆಹಾರವನ್ನು ಕೊಂಚಕೊಂಚವಾಗಿ ಬಾಯಿಗೆ ತಂದುಕೊಂಡು ಜೀರ್ಣವಾಗುವಂತೆ ಮೆಲ್ಲಮೆಲ್ಲಗೆ ಅಗಿದು ಮತ್ತೆ ನುಂಗುವುದು. ಇದಕ್ಕೆ ಮೆಲುಕು ಅಥವಾ ನೆಮರು ಹಾಕುವುದನ್ನು ವರು. ಹಸುವಿನಷ್ಟು ಉಪಯುಕ್ತವಾದ ಪ್ರಾಣಿ ಪ್ರಪಂಚದಲ್ಲಿ ಮತ್ತಾವುದೂ ಇಲ್ಲ. ಇದರ ಹಾಲಿನಿಂದ ಮೊಸರು, ಬೆಣ್ಣೆ, ತುಪ್ಪ ಆಗುತ್ತವೆ. ಹಾಲು