ಪುಟ:ಪ್ರಬಂಧಮಂಜರಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಸು, ೪೫ ಮಕ್ಕಳು ಮೊದಲುಗೊಂಡು ಎಲ್ಲರಿಗೂ ಪುಷ್ಟಿಯನ್ನು ಕೊಡುವ ಆಹಾರ ಮನುಷ್ಯನ ದೇಹಪೋಷಣೆಗೆ ಬೇಕಾದ ವಸ್ತುಗಳೆಲ್ಲ ಹಾಲಿನಲ್ಲಿರುವುದರಿಂದ ವೈದ್ಯರು ಇದನ್ನು ಶ್ರೇಷ್ಠವಾದ ಆಹಾರವೆಂದು ಗಣಿಸುವರು. ಕಾಫಿ, ಟೀ ಮುಂತಾದ ಕಷಾಯಗಳೊಡನೆ ಹಾಲನ್ನು ಬೆರಸಿ ಅನೇಕರು ಸೇವಿಸುವರು. ಮೊಸರು ತುಪ್ಪಗಳನ್ನು ಊಟಮಾಡುವಾಗ ಪ್ರತಿದಿನವೂ ಉಪಯೋಗಿಸುವರು. ಮೊಸರಿಂದ ಮೈಗೆ ಬಲುತಂಪು, ತುಪ್ಪದಿಂದ ಮೇದೋವೃದ್ಧಿಯಾಗಿ ತೇಜಸ್ಸು ಹೆಚ್ಚುವುದು, ಬೆಣ್ಣೆಯನ್ನು ರೊಟ್ಟಿಯೊಡನೆ ತಿನ್ನುವರು. ತುಪ್ಪದಿಂದ ಬಗೆಬಗೆಯ ಭಕ್ಷ್ಯಗಳನ್ನೂ ಮಿಠಾಯಿಗಳನ್ನೂ ಮಾಡುವರು. ಕೊಂಬು ಮಳೆಗಳಿಂದ ಬಾಚಣಿಗೆ,ಭರಣಿ,ಗುಂಡಿ, ಕತ್ತಿಹಿಡಿ ಮೊದಲಾದುವನ್ನು ಮಾಡುತ್ತಾರೆ ಗೊರಸಿನಿಂದಲೂ, ಕಿವಿಗಳಿಂದಲೂ ಮರಗೆಲಸಕ್ಕೆ ಉಪಯುಕ್ತವಾಗುವ ವಜ್ರವಾಗುವುದು. ಹಸುವಿನ ಮಲಕ್ಕೆ ಸೆಗಣಿಯೆ. ನ್ನು ವರು. ನಮ್ಮ ದೇಶದಲ್ಲಿ ಸೆಗಣಿ ಬಹಳ ಕೆಲಸಕ್ಕೆ ಬರುತ್ತದೆ. ಸೆಗಣಿಯನ್ನು ಗುಂಡುಗುಂಡಾಗಿ ತಟ್ಟಿ ಒಣಗಿಸಿ ಬೆರಣಿಗಳಾಗಿ ಮಾಡಿ ಸೌದೆಗೆ ಬದಲು ವಿಶೇಷವಾಗಿ ಉರಿಸುವರು. ತುಂಬಾ ದನಕರುಗಳಿರುವವರು ಸೌದೆಯಿಲ್ಲದೆ ಬೆರಣಿಗಳಿಂದಲೇ ಕಾಲಕ್ಷೇಪಮಾಡುವರು. ಸೆಗಣಿ ವಿಷಾಪಹರವಸ್ತುವೆಂದು ಎಣಿಸಲ್ಪಟ್ಟಿರುವಂತೆ ಕಾಣುತ್ತದೆ. ಆದುದರಿಂದಲೇ ಬೆಳಗಾದ ಕೂಡಲೇ ಮನೆಯ ಮುಂದೆ ಸೆಗಣಿನೀರು ಹಾಕುವುದು, ಸೆಗಣಿಯಿಂದ ಮನೆಯನ್ನೆಲ್ಲಾ ಸಾರಿಸುವುದು ನಮ್ಮಲ್ಲಿ ವಾಡಿಕೆಯಾಗಿವೆ. ಇದಲ್ಲದೆ ಸೆಗಣಿಯನ್ನು ವಿಶೇಷವಾಗಿ ಹೊಲಗಳಿಗೂ ಗದ್ದೆ ಗಳಿಗೂ ಗೊಬ್ಬರಕ್ಕಾಗಿ ಹಾಕುವರು. ಹಸುವಿನ ಚರ್ಮವು ಕುದುರೆಯ ಮೇಲೆ ಹಾಕುವ ಸಾಮಾನುಗಳಿಗೂ ಪಾದರಕ್ಷೆಗಳಿಗೂ ಬರುವುದು. ಇಂಗ್ಲೆಂಡಿನಲ್ಲಿ ಮನೆಯನ್ನು ಕಟ್ಟುವವರು ಗಾರೆಯೊಂದಿಗೆ ಹಸುವಿನ ಕೂದಲನ್ನು ಸೇರಿಸುತ್ತಾರೆಂದು ತಿಳಿಯಬರುತ್ತದೆ. ಹಿಂದೂಗಳು ಹಸುವನ್ನು ದೇವತೆಯಂತೆ ಪೂಜಿಸುವರು. ಅದು ಬಲು ಉಪಯುಕ್ತವಾಗಿರುವುದೇ ಅದಕ್ಕೆ ಕಾರಣವೆಂತಲೂ, ಅದನ್ನು ಪೂಜಿಸುವುದು ಮೌಢವೆಂತಲೂ ಅನ್ಯದೇಶೀಯರು ಹೇಳುವರು. ಇದು ಸರಿಯಲ್ಲ.