ಪುಟ:ಪ್ರಬಂಧಮಂಜರಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಪ್ರಬಂಧಮಂಜರಿ ಎರಡನೆಯ ಭಾಗ ಹಸುವೇನೋ ಬಲು ಉಪಯುಕ್ತವಾದುದೆಂಬಂಶವು ಎಲ್ಲರಿಗೂ ಗೊತ್ತು, ವಾಯವ್ಯ ಪ್ರಾಂತಗಳಲ್ಲಿ ಎಮ್ಮೆ ಯ ಹಸು ವಿನಷ್ಟೇ ಉಪಯುಕ್ತವಾಗಿದ್ದರೂ ಎಮ್ಮೆಯನ್ನು ಏಕೆ ಪೂಜಿಸುವುದಿಲ್ಲ ? ಸಂಸ್ಕೃತದಲ್ಲಿ ಹಸುವಿಗೆ ಗೌಃ' ಎಂದು ಹೆಸರು. ಈ ಶಬ್ದಕ್ಕೆ ಭೂಮಂಡಲವೆಂದರ್ಥವು. ಹಿಂದೂ ಶಾಸ್ತ್ರ ಪ್ರಕಾರ ಹಸುವಿನ ದೇಹದ ಪ್ರತಿಯೊಂದು ಭಾಗದಲ್ಲಿಯೂ ಒಂದೊಂದು ಲೋಕವು ಒಂದೊಂದು ಅಧಿದೇವತೆಯೊಡನೆ ಇರುವುದು. ಆದುದರಿಂದ ದಾನಗಳಲ್ಲಿ ಗೋದಾನವೇ ಶ್ರೇಷ್ಠವಾದುದೆಂದು ಹಿಂದೂಗಳು ನಂಬಿರುವುದಲ್ಲದೆ, ಪಂಚಗವ್ಯವೆಂಬ ಅದರ ಗಂಜಲ ಮೊದಲಾದುವುಗಳನ್ನು ತಮ್ಮ ದೇಹಶುದ್ದಿಗಾಗಿ ಬಳಸುವುದುಂಟು. ಹಸು ಮುಸಲ್ಮಾನರಿಗೂ ಹಿಂದೂಗಳಿಗೂ ವಿರೋಧಕ್ಕೆ ಕಾರಣವಾಗಿದೆ. ಮುಸಲ್ಮಾನರು ಆಹಾರಕ್ಕಾಗಿ ಹಸುವನ್ನು ಕೊಲ್ಲುವರು. ಗೋವಧೆಯನ್ನು ಮಹಾಪಾತಕವೆಂದು ತಿಳಿದಿರುವ ಹಿಂದೂಗಳಿಗೆ ಇದು ಕೋಪವನ್ನು ಂಟು. ಮಾಡಿ, ಇಬ್ಬರಿಗೂ ಕಲಹಗಳುಂಟಾಗಿ, ಅನೇಕರು ಹತರಾಗಿದ್ದಾರೆ. ಎಲ್ಲರಲ್ಲಿಯೂ ವಿದ್ಯೆ ಹೆಚ್ಚಿ, ಅಂತಃಕಲಹಗಳು ದೇಶಕ್ಕೂಭೆಗೆ ಕಾರಣಗಳೆಂತಲೂ, ಎಲ್ಲರೂ ಕ್ಷಮೆಯಿಂದ ಅವರವರ ಕಟ್ಟಳೆಗಳಿಗನುಸಾರವಾಗಿ ನಡೆದುಕೊಳ್ಳಬೇಕೆಂತಲೂ ತಿಳಿದುಕೊಂಡರೆ ಇಂತಹ ಕಲಹಗಳು ತೊಲಗುವುವು. 2. ಕುದುರೆ, ಮನುಷ್ಯನು ವಾಸಿಸುವ ಎಡೆಗಳಲ್ಲೆಲ್ಲಾ ಪಳಗಿದ ಕುದುರೆ ಸಿಕ್ಕುತ್ತದೆ. ಕಾಡು ಕುದುರೆ ಟಾರ್ಟರಿ, ಉತ್ತರ ಅಮೆರಿಕಾ, ಷಾನ್, ಸೆಲಿಬಿಸ್ ದ್ವೀಪ, ಈ ಸೀಮೆಗಳಲ್ಲಿ ವ್ಯಾಪಿಸಿರುವುದು. ಕಾಡು ಕುದುರೆಯನ್ನು ಯಾವಜನರು ಯಾವಕಾಲದಲ್ಲಿ ಪಳಗಿಸಿದರೆಂದು ನಿರ್ಧರಿಸಲಾಗುವುದಿಲ್ಲ. ಕುದುರೆಗಳಲ್ಲಿ ಅರಬ್ಬಿ, ಪೈಗೊ, ಜೂಜಿನ ಕುದುರೆ, ಗಾಡಿಯ ಕುದುರೆ ಮೊದಲಾದ ನಾನಾಜಾತಿಗಳುಂಟು. ಕುದುರೆಗಳ ಬಣ್ಣವು ಬಿಳುಪು, ಕಪ್ಪ,ಕೆಂಪು ಅಥವಾ ಮಿಶ್ರವಾಗಿಯೂ ಇರುವುದುಂಟು. ತಲೆಯು ಜಾತಿಗೆ