ಪುಟ:ಪ್ರಬಂಧಮಂಜರಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಯಿ, yଟ ಗೊರಸಿನಿಂದ ಗುಂಡಿ, ಭರಣಿ ಮುಂತಾದುವನ್ನು ಮಾಡುತ್ತಾರೆ, ಕುದುರೆಯ ಕೊಬ್ಬಿನಿಂದ ಸಾಬೂನು ಮೇಣದ ಬತ್ತಿಗಳಾಗುತ್ತವೆ. 3. ನಾಯಿ, ನಾಯಿ ಸಕಲ ಭೂಭಾಗಗಳಲ್ಲಿಯೂ ಜೀವಿಸಬಲ್ಲುದು, ಇದು ಮನುಷ್ಯನಿಗೆ ಗೆಳೆಯನಂತೆಯೂ ಆಳಿನಂತೆಯೂ ನಡೆದುಕೊಳ್ಳುತ್ತ ಅವನಿರುವ ಕಡೆಗಳಲ್ಲೆಲ್ಲಾ ಇರುವುದು, ಊರು ನಾಯಿಗಳಲ್ಲದೆ ಕಾಡುನಾಯಿಗಳ ಉಂಟು ಊರುನಾಯಿ ಕಾಡು ನಾಯಿಯ ಅಥವಾ ತೋಳದ ಸಂತತಿ ಯೆಂದು ಕೆಲವರು ಹೇಳುವರು. ನಾಯಿ ಗಳಲ್ಲಿ ಮನೆ ಕಾಯುವ ನಾಯಿ, ಮಂದೆನಾಯಿ, ಜೂಲುನಾಯಿ ಬೇಟೆನಾಯಿ ಮೊದಲಾದ ನಾನಾಭೇದಗಳುಂಟು. ನಾಯಿ ಗಳು ಬಣ್ಣದಲ್ಲಿ ಬೇರೆಬೇರೆಯಾಗಿವೆ. ಕೆಲವು ಕರಿಯವು, ಕೆಲವು ಕೆಂಪು, ಮತ್ತೆ ಕೆಲವು ಬಿಳಿಯವು, ನಾಯಿಯ ಹಲ್ಲುಗಳು ಮೂಳೆಯನ್ನು ಕೂಡ ನಗು. ವಷ್ಟು ಗಟ್ಟಿ, ನಾಲಗೆ ಉದ್ದವಾಗಿ ನುಣುಪಾಗಿದೆ. ಮೂಗು ಕಿರಿದು. ಮುಟ್ಟಿದರೆ ತಣ್ಣಗಿರುವುದು. ಇದರ ಕತ್ತು ಉದ್ದವಾಗಿಲ್ಲ; ಆದರೂ ಇದು ತಲೆಯನ್ನು ಎತ್ತ ಬೇಕಾದರೂ ಅತ್ತ ತಿರುಗಿಸಬಲ್ಲುದು ಇದರ ಚರ್ಮ ಮೈಗೆ ಬಿಗಿಯಾಗಿ ಅಂಟಿಕೊಂಡಿಲ್ಲದೆ ಸಡಿಲವಾಗಿದೆ. ಬಾಲವು ಡೊಂಕು. ಕಾಲುಗಳು ಬಲವಾಗಿಯೂ ಪಾದಗಳು ಗುಂಡಾಗಿಯೂ ಇವೆ, ಮುಂದಿನ ಪಾದಗಳಲ್ಲಿ ಬೆರಳುಗಳು ಐದೈದೂ ಹಿಂದಿನವುಗಳಲ್ಲಿ ನಾಲ್ಕು ನಾಲ್ಲೂ ಇವೆ, ಮುಂಗಾಲಿನ ಹೆಬ್ಬೆಟ್ಟುಗಳು ನಡೆವಾಗ ನೆಲಕ್ಕೆ ತಾಗುವುದಿಲ್ಲ. ಹಿಂಗಾಲುಗಳಲ್ಲಿ ಹೆಬ್ಬೆಟ್ಟು ಗಳಿಲ್ಲ. ಬೆರಳನ್ನು ಊರಿಕೊಂಡು ನಡೆಯುತ್ತವೆ. ಅಂಗಾಲಿನಲ್ಲಿ ಮೆತ್ತಗಿರುವ ಮಾಂಸದ ಉಂಡೆಗಳಿವೆ ಇದರಿಂದ ನಡೆವಾಗ ಸದ್ದಾಗು ವುದಿಲ್ಲ ಒಂದೊಂದು ಬೆರಳಿನಲ್ಲಿಯೂ ಬಾಗಿಕೊಂಡು ಬಲವಾಗಿರುವ ಒಂದೊಂದು ಉಗುರಿದೆ, ಮನು ಪೈತರ ಪ್ರಾಣಿಗಳಲ್ಲೆಲ್ಲಾ ನಾಯಿ ಅತ್ಯಂತ ಬುದ್ಧಿಶಾಲಿ. ಇದಕ್ಕೆ ಅನೇಕ ಕಾರ್ಯಗಳನ್ನು ಕಲಿಸಬಹುದು. ಜ್ಞಾಪಕಶಕ್ತಿ ಹೆಚ್ಚು. ಸಾಕುವವನ ಮಾತುಗಳನ್ನೂ ಕೈಸನ್ನೆ ಗಳನ್ನೂ ತಿಳಿದು ಅದರಂತೆ ನಡೆಯು