ಪುಟ:ಪ್ರಬಂಧಮಂಜರಿ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಬೆಕ್ಕು, ಜೀವಿಸುವಂತೆ ಮಾಡುತ್ತವೆ.ಗ್ರೀನ್ಲೆಂಡ್ ದೇಶದಲ್ಲಿ ನಾಯಿಗಳನ್ನು ಗಾಡಿಗೆ ಕಟ್ಟುತ್ತಾರೆ ನಾಯಿ ಸತ್ತ ಮೇಲೆ ಅದರ ಮಾಂಸವನ್ನು ಕೆಲವರು ತಿನ್ನು ವರು, ಚರ್ಮವನ್ನು ನಯಮಾಡಿ ಕೈಚೀಲ ಮುಂತಾದುವನ್ನು ಮಾಡುವುದುಂಟು ಮುಖ್ಯವಾಗಿ ನಾಯಿ ಮನುಷ್ಯನಿಗೆ ಅತ್ಯಂತೋಷಕಾರಿಯಾಗಿಯೂ ಕೃತಜ್ಞತೆಯುಳ್ಳದ್ದಾಗಿಯೂ ಇದೆ. ಇಷ್ಟು ಒಳ್ಳೆಯ ಪ್ರಾಣಿಯನ್ನು ನಮ್ಮ ದೇಶದಲ್ಲಿ ನಿಕೃಷ್ಟವಾಗಿ ಎಣಿಸಿ ಹಿಂಸಿಸುವುದು ಅನ್ಯಾಯ. 4, ಬೆಕ್ಕು, ಕಾಡು ಬೆಕ್ಕು ಯೂರೋಪಿನಲ್ಲಿಯೂ ಏಷ್ಯಾ ಖಂಡದ ಕೆಲವು ಭಾಗಗಳಲ್ಲಿಯೂ ಸಿಕ್ಕುವುದು. ಊರ ಬೆಕ್ಕು ಸಾಮಾನ್ಯವಾಗಿ ಮನುಷ್ಯರು ವಾಸಿಸುವ ಕಡೆಗಳಲ್ಲೆಲ್ಲಾ ಇರುವುದು. ಕಾಡು ಬೆಕ್ಕಿ ಗೂ ಊರ ಬೆಕ್ಕಿಗೂ ಅನೇಕ ಭೇದಗಳುಂಟು.. ಊರ ಬೆಕ್ಕಿನ ಬಾಲವು ಉದ್ದವಾಗಿಯೂ ಕೃಶವಾಗಿಯೂ ಇದೆ; ಬರುತ ಬರುತ ಮೊನೆ, ಕಾಡು ಬೆಕ್ಕಿನ ಬಾಲವು ಇದಕ್ಕಿಂತ ಮೋಟು, ದಪ್ಪ, ಕಾಡು ಬೆಕ್ಕು ಮೂಗಿನ ತುದಿಯಿಂದ ಬಾಲದ ಕೊನೆವರೆಗೆ ಸುಮಾರು ಮರಡಿ ಉದ್ದವಿರುತ್ತದೆ. ಊರ ಬೆಕ್ಕು ಇದಕ್ಕಿಂತ ಚಿಕ್ಕದು. ಬೆಕ್ಕು, ಸಿಂಹ, ಹುಲಿ, ಚಿರತೆ ಇವುಗಳೆಲ್ಲಾ ಒಂದೇ ಜಾತಿಗೆ ಸೇರಿದ ಪ್ರಾಣಿಗಳು. ಇವೆಲ್ಲಕ್ಕೂ ದೇಹರಚನೆ ಪ್ರಾಯಶಃ ಒಂದೇ. ಇವುಗಳ ಕಾಲುದವಡೆಗಳ ಸ್ವಾ ಯುಗಳಲ್ಲಿ ಒಲವಿದೆ. ಇವು ನೋಡುವುದಕ್ಕೆ ಸುಂದರವಾಗಿಯೂ ಭಯಂಕರವಾಗಿಯೂ ಇವೆ. ನಮ್ಮ ದೇಶದ ಬೆಕ್ಕುಗಳು ಸಾಮಾನ್ಯವಾಗಿ ಬೂದುಬಣ್ಣವುಳವು. ಇದಕ್ಕೆ ಮೈ ಮೇಲೆ ಕರಿಯ ಬರೆಗಳಿವೆ. ಪಾರ್ಸಿ ಮುಂತಾದ ಸೀಮೆಗಳ ಬೆಕ್ಕುಗಳು ಬಿಳಿಯವು. ಅಚ ಕರಿಯ ಬೆಕ್ಕು ಗಳೂ ಉಂಟು. ಬೆಕ್ಕಿನ ಕಣ್ಣುಗಳು ಸಾಧಾರಣ ಹಸುರಾಗಿ ಉರುಟಾಗಿವೆ. ರಾತ್ರಿಯಲ್ಲಿ ಇವು ಕೆಂಡದಂತೆ ಹೊಳೆವುವು. ಕರಿಯಗುಡ್ಡು ಹಗಲು ಹೊತ್ತು ಮೇಲಿಂದ ಕೆಳಕ್ಕೆ ಉದ್ದುದ್ದವಾಗಿ ಎಳೆದ ಒಂದುಕರಿಗೆರೆಯಂತೆ ಇದ್ದು ರಾತ್ರಿವೇಳೆ ಹರಡಿಕೊಂಡು ಅಗಲವಾಗುವುದು ಬಾಯ ಮೇಲ್ಗಡೆ ಎರಡು ಕಡೆಯಲ್ಲಿಯೂ ಉದ್ದವಾದ ಮಿಾಸೆಗಳಿವೆ. ಇದೇ ಬೆಕ್ಕಿಗೆ