ಪುಟ:ಪ್ರಬಂಧಮಂಜರಿ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಂಗಿನಮರ, ೫೫ ಇರುವೆಗಳು ಹಿಮಂತಋತುವಿನಲ್ಲಿ ಆಹಾರವು ಸಿಕ್ಕದಿರುವುದರಿಂದ ಆ ಕಾಲವನ್ನು ಜಡಾವಸ್ಥೆಯಲ್ಲಿ ಕಳೆವುವು. ಇರುವೆಗಳನ್ನು ಚೆನ್ನಾಗಿ ಪರಿಶೀಲಿಸಿ ನೋಡಿದಲ್ಲಿ ಒಂದರ ಅಭಿಪ್ರಾಯವನ್ನು ಮತ್ತೊಂದು ಅರಿವಂತೆ ಇವ್ರಗಳಿಗೆ ಒಂದು ತರದ ಭಾಷೆಯಿರುವುದಾಗಿ ತೋರುವುದು. ಇರುವೆಗಳ ಹಾವಳಿಯನ್ನು ಯಾವ ಪ್ರಾಣಿಯೂ ತಾಳಲಾರದು. ಆಫ್ರಿಕಾಖಂಡದ ಕೆಲವು ಸೀಮೆಗಳಲ್ಲಿ ಇವುಗಳ ಅವಾಂತರವನ್ನು ತಡೆಯಲಾರದೆ ಜನರು ತಮ್ಮ ಮನೆಗಳನ್ನು ಬಿಟ್ಟು ಹೋಗಿರುವರಂತೆ. ಗೆದ್ದಲಿಸ ಹಾವಳಿಯನ್ನು ಎಲ್ಲರೂ ಬಲ್ಲರಷ್ಟೆ. ನೆಲಕ್ಕೆ ಸೋಕುವಂತೆ ಯಾವ ವಸ್ತುನನ್ನಿ ಟ್ಟರೂ ಗೆದ್ದಲು ಅದನ್ನು ಹೊಡೆದು ಮಣ್ಣು ಮಾಡಿಬಿಡುತ್ತದೆ. ಹೀಗೆ ಇರುವೆಗಳಿಂದ ಮನುಷ್ಯನಿಗೆ ಬಾಧೆಯೇ ಹೊರತು ಪ್ರಯೋಜನವಿರುವಂತೆ ತೋರುವುದಿಲ್ಲ. ಇರುವೆಯ ಮೊಟ್ಟೆಗಳೂ ಕೀಟಾವಸ್ಥೆಯಲ್ಲಿರುವ 6ರು ವೆಗಳೂ ಹಕ್ಕಿಗಳಿಗೆ ಬಲು ಸವಿಯಾದ ಆಹಾರವು. 6, ತೆಂಗಿನ ಮರ. ಈ ಮರವು ಹಿಂದೂದೇಶ, ಸಿಲೋನ್, ಪೂರ್ವ ಪಶ್ಚಿಮ ದ್ವೀಪಸ್ತೋಮಗಳು, ಬ್ರೆಜಿಲ್ ಇವುಗಳಲ್ಲಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಮನೆಗಳ ಮುಂದೆಯೂ ತೋಟಗಳಲ್ಲಿಯೂ ತೆಂಗಿನ ಮರಗಳನ್ನು ಹಾಕುವರು. ಬಲು ತೇವವಿದ್ದ ಕಡೆ ತೆಂಗು ಪ್ರಬಲಿಸುವುದಿಲ್ಲ. ಮರಳು ಮಿಶ್ರವಾದ ಉಪ್ಪಿನ ನೆಲದಲ್ಲಿ ಇದು ಚೆನ್ನಾಗಿ ಬೆಳೆವುದು. ಇದರ ಬೆಳೆವಳಿಗೆಗೆ ಸಮುದ್ರದ ಅಥವಾ ನದಿಯ ತೀರವು ಉತ್ತಮವು. ಆದುದರಿಂದಲೇ ಇದು ಹಿಂದು, ಸ್ಥಾನದ ಪೂರ್ವ ಪಶ್ಚಿಮ ಸಮುದ್ರತೀರಗಳಲ್ಲಿ ಹೇರಳವಾಗಿದೆ, ಇದು ಚೆನ್ನಾಗಿ ಬೆಳೆವ ಸ್ಥಳಗಳಲ್ಲಿ ಸುಮಾರು ಎಂಬತ್ತು ಡಿಗ್ರಿಗೆ ಕಡಮೆಯಿಲ್ಲದೆ ಶಾಖವಿರಬೇಕು. ಪ್ರತಿವರ್ಷ ಮಳೆಯೂ ಚೆನ್ನಾಗಿ ಆಗಬೇಕು. ತೆಂಗು ದುಂಡಾಗಿರುವ ಕಂಬದಂತೆ ಮೂವತ್ತರಿಂದ ಅರುವತ್ತು ಅಡಿಗಳ ಎತ್ತರದವರೆಗೂ ಬೆಳೆಯುತ್ತದೆ. ಬುಡದಲ್ಲಿ ಇದರ ಸುತ್ತಳತೆ ಸುಮಾರು ನಾಲ್ಕಡಿ ; ಕೊನೆಯಲ್ಲಿ ಸುಮಾರು ಐದಡಿ, ಮರದ ಮೋಟಿನ ಮೇಲೆ ಬುಡದಿಂದ ತಲೆವರೆಗೂ ಉಂಗುರಗಳಂತೆ ಗುಂಡಾದ ಚಕ್ರಗಳಿವೆ. ತೆಂಗಿ