ಪುಟ:ಪ್ರಬಂಧಮಂಜರಿ.djvu/೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅರಳಯ ಮುರ, ೫೭ ಯೂ ಹಾಕುವುದುಂಟು. ಮರದೊಳಗಿನ ತಿರುಳು ತೆಗೆದು ನೀರು ಹರಿವ ದೋಣಿಗಳನ್ನೂ ಕೊಳವೆಗಳನ್ನೂ ಮಾಡುವುದುಂಟು. ಒಣಗಿದ ಗರಿಗಳನ್ನು ಚಾವಣಿಗೆ ಹೊದಿಸುವರು ; ಚಾಪೆಗಳಾಗಿ ಹೆಣೆವರು; ಅವುಗಳಿಂದ ತಡಿಕೆಗಳನ್ನೂ ಕೊಡೆಗಳನ್ನೂ , ಮಕ್ಕರಿ ಬುಟ್ಟಿ ಮೊದಲಾದುವನ್ನೂ ಮಾಡುವರು. ಗರಿಗಳ ಕಡ್ಡಿಗಳನ್ನು ಗುಡಿಸುವುದಕ್ಕು ಪಯೋಗಿಸುವರು. ತೆಂಗಿನ ನಾರನ್ನು ಹಾಸಿಗೆಗೂ ದಿಂಬುಗಳಿಗೂ ಹಾಕುವರು; ಹಗ್ಗ ಹೊಸೆವರು. ಹಗ್ಗ ವಾಗದ ನಾರನ್ನು ಒಲೆಗೆ ಹಾಕುತ್ತಾರೆ; ಪಾತ್ರೆಗಳನ್ನು ಜ್ಜುವುದಕ್ಕೆ ಬಳಸುತ್ತಾರೆ. ತೆಂಗಿನ ಚಿಪ್ಪನ್ನು ನುಣುಪಾಗಿ ತೇದು ಬಟ್ಟಲು ಮಿ? ಮೊದ ಲಾದ ಸಾಮಾನುಗಳನ್ನು ಮಾಡುವರು; ಕೆಲಸಕ್ಕೆ ಬಾರದೆ ಚಿಪ್ಪನು ಒಲೆಗೆ ಹಾಕುವರು. ಕೊಬ್ಬರಿ ತಿನ್ನಲು ಬಲು ಸವಿಯಾಗಿರುವುದು ,ಅಡಿಗೆಗೆ ಬಹಳ ಉಪಯೋಗ ಕೊಬ್ಬರಿಯೆಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ ಇದರಿಂದ ಕೂದಲು ನುಣುಪಾಗುವುದಲ್ಲದೆ ಉದ್ದವಾಗಿ ಬೆಳೆವುದು. ಸುವಾಸನೆಯುಳ್ಳ ಕೇಶರಂಜನ ತೈಲ ಮೊದಲಾದ ಹೆಸರಿನಿಂದ ಮಾರುವ ಎಣ್ಣೆಗೆಳೆಲ್ಲ ಕೊಬ್ಬರಿಯೆಣ್ಣೆಗೆ ಮೂಲಿಕೆಗಳು ಸೇರಿ ಆದುವು. ಕೊಬ್ಬರಿಯೆಣ್ಣೆ ದೀಪಕ್ಕೂ ಬರುವುದು, ಅದನ್ನು ಮುಲಾಮಿಗೆ ಸೇರಿಸಿ ಗಾಯಕ್ಕೆ ಬಳಿಯುತಾರೆ ಈ ಎಣ್ಣೆಯಿಂದ ಮೇಣದ ಬತ್ತಿಯನ್ನೂ ಮಾಡುವರು. ಕೊಬ್ಬರಿಯ ಹಿಂಡಿಯನ್ನು ದನಕರುಗಳಿಗೆ ತಿನ್ನಿ ಸುವರು, ಇಲ್ಲವೆ ಗೊಬ್ಬರಕ್ಕಾಗಿ ಉಪಯೋಗಿಸುತ್ತಾರೆ. ಹೊಂಬಾಳೆಯನ್ನು ಮಂಟಪವೇ ಮುಂತಾದುವುಗಳಿಗೆ ಅಲಂಕಾರಕ್ಕಾಗಿ ಉಪಯೋಗಿಸುವರು. ಬೇಸಗೆಯಲ್ಲಿ ಎಳನೀರನ್ನು ಕುಡಿಯುತ್ತಾರೆ; ಇದರಿಂದ ದಾಹಶಾಂತಿ ಚನ್ನಾಗಿ ಆಗುವುದು, ಎಳನೀರನ್ನೂ ತೆಂಗಿನಕಾಯಿಯನ್ನೂ ಮರ್ಯಾದೆಗಾಗಿ ತಾಂಬೂಲದ ಜತೆಯಲ್ಲಿ ಕೊಡುವರು. ಫಲದಾನದಲ್ಲಿ ನಾರಿಕೇಳದಾನವು ಪ್ರಶಸ್ತವಾದುದು. 7. ಆಡಕೆಯ ಮರ, ಅಡಕೆಯ ಮರವು ಏಷ್ಯಾ ಖಂಡದ ಉಷ್ಣ ದೇಶಗಳಲ್ಲಿಯೂ, ಮಲಯಾ ಆಸ್ಟ್ರೇಲಿಯಾ ದ್ವೀಪಗಳಲ್ಲಿಯೂ ಬೆಳೆವುದು, ಕೊಚಿನ್ ಚೈನಾ, ಇಂಡಿಯಾ ದೇಶಗಳಲ್ಲಿ ವಿಶೇಷ ಆಗುವುದು.