ಪುಟ:ಪ್ರಬಂಧಮಂಜರಿ.djvu/೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಡೆಯಲು ಕಲ್ಲಿದ್ದಲು ಬೇಕಾಗುವುದರಿಂದ ಇದು ನಾನಾವಿಧವಾದ ಕಸಬುಗಳಿಗೆ ಆಧಾರವಾಗಿದೆ. ಇಂಗ್ಲೆಂಡಿನ ಐಶ್ವರ್ಯಕ್ಕೆ ಕಲ್ಲಿದ್ದಲೇ ಮುಖ್ಯ ಕಾರಣವೆಂದು ಅನೇಕ ಪಂಡಿತರು ಅಭಿಪ್ರಾಯ ಪಡುವರು. ಕಲ್ಲಿದ್ದಲಿಂದ ಬಟ್ಟಲು, ಮಸಿಯ ದಾತಿ ಪೆಟ್ಟಿಗೆ ಮುಂತಾದುವನ್ನೂ ಮಾಡುವುದುಂಟು. ಇದರಿಂದ ತರತರದ ಬಣ್ಣಗಳೂ ಆಗುವುವು. 18, ರೈ ತ. ವ್ಯವಸಾಯವು ಸ್ವತಂತ್ರವಾದ ಜೀವನೋಪಾಯಗಳಲ್ಲಿ ಅತ್ಯುತ್ತಮ ವಾದುದು. ವ್ಯವಸಾಯವನ್ನು ಅವಲಂಬಿಸಿ ದುಡಿವ ರೈತನ ಜೀವನವು ಶ್ರಾವ್ಯವಾದುದು. ಬಹಳ ಆಸೆಯಿಲ್ಲದೆ ಶಾಂತಚಿತ್ತನಾಗಿರುವವನಿಗೆ ರೈತನ ಬದುಕು ಯೋಗ್ಯವಾಗಿರುವುದು, ದೊಡ್ಡ ದೊಡ್ಡ ಪಟ್ಟಣಗಳ ಗದ್ದಲದಿಂದ ಮನಸ್ಸು ಕೆಡದೆ ರೈತನು ನಿಶ್ಯಬ್ದವಾಗಿರುವ ಹಳ್ಳಿಗಾಡಿದಲ್ಲಿ ತೃಪ್ತಿಯೊಡನೆ ಸುಖವಾಗಿ ಬದುಕುವನು. ಅವನು ಬೆಳಗಿನಿಂದ ಸಂಜೆಯ ವರೆಗೂ ಕಷ್ಟ ಪಟ್ಟು ಕೆಲಸಮಾಡುತ್ತಿರುವನು. ವರ್ಷದ ಸರ್ವಕಾಲಗಳಲ್ಲಿಯೂ ಒಂದೊಂದು ಕೆಲಸವನ್ನು ಇಟ್ಟು ಕೊಂಡಿರುವನೇ ಹೊರತು ವ್ಯರ್ಥವಾಗಿ ಎಂದಿಗೂ ಕಾಲವನ್ನು ಕಳೆಯನು, ತಾನು ಆರಂಬಮಾಡಿ ಬೆಳೆದುದೇ ರೈತನಿಗೆ ಸಾಕು. ಅಷ್ಟರಲ್ಲಿಯೇ ತೃಪ್ತಿಪಟ್ಟು ಕೊಂಡು, ತನ್ನ ಯೋಗ್ಯತೆ ಮಾರಿದ ವೆಚ ಕ್ಕೆ ಎಂದಿಗೂ ಹೋಗನು, ತನ್ನ ಆದಾಯಕ್ಕೆ ತಕ್ಕಂತೆ ವ್ಯಯಮಾಡುತ್ತಾ ಬೆಳೆಯಲ್ಲಿ ಸ್ವಲ್ಪ ಭಾಗವನ್ನು ಪ್ರತಿವರ್ಷವೂ ಕೂಡಿಡುವನು. ದುಂದುಮಾಡಿ ಕೆಟ್ಟಿರುವ ರೈತನೇ ನಮ್ಮ ಸೀಮೆಯಲ್ಲಿಲ್ಲವೆಂದು ಹೇಳಬಹುದು. ರೈತನಿಂದ ಮಿತವ್ಯಯವೆಂಬ ಸುಗುಣವನ್ನು ಎಲ್ಲರೂ ಕಲಿಯಬೇಕಾಗಿದೆ. ಅವನ ಪ್ರಾಮಾಣಿಕತೆಯೂ, ದೈವಭಕ್ತಿಯೂ, ಗಾಜಭಕ್ತಿಯೂ, ಎಲ್ಲರಿಗೂ ಮೇಲ್ಪ ಜಿಯಾಗಿವೆ. ಸರಕಾರವೆಂದರೆ ರೈತನಿಗೆ ಬಹಳ ಭಯ. ಇದನ್ನು ಕಂಡು ಸರಕಾರದ ಕೆಲವು ಕೆಟ್ಟ ನರಾಕರರು ರೈತರನ್ನು ಹೆದರಿಸಿ ಅನ್ಯಾಯವಾಗಿ ಹಣವನ್ನು ಸುಲಿದುಕೊಳ್ಳುವುದುಂಟು. ರೈತನು ತನ್ನ ಕುಲಾಚಾರಗಳನ್ನು ಬಿಟ್ಟು ಎಂದಿಗೂ ನಡೆಯನು, ರೈತನ ತಾಳ್ಮೆಗೆ ಪಾರವಿಲ್ಲ; ಎಷ್ಟು ಕಷ್ಟವನ್ನಾದರೂ ಸಹಿಸಿಕೊಳ್ಳುವನು. ಕಷ್ಟಕ್ಕೆ ಅಂಜದೆ ತನ್ನ ಕರ್ತವ್ಯವನ್ನು ದೇವ