ಪುಟ:ಪ್ರಬಂಧಮಂಜರಿ.djvu/೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೭೮ ಪ್ರಬಂಧಮಂಜರಿ-ಎರಡನೆಯ ಭಾಗ ರಮೇಲೆ ಭಾರಹಾಕಿ ಮನಃಪೂರ್ವಕವಾಗಿ ಮಾಡುವನು. ವರ್ತಕನೂ ಸರಕಾರದ ಬಡಕರರೂ ಕುಳಿ ತೆಡೆಯಲ್ಲಿಯೇ ಬಹಳ ಹೊತ್ತು ಕುಳಿತುಕೊಂಡಿರಬೇಕಾಗುವುದರಿಂದ ಅವರಿಗೆ ಕೈಕಾಲುಗಳು ಕಟ್ಟಿಹಾಕಿದಹಾಗಾಗಿ ಶುದ್ಧವಾದ ಗಾಳಿಗೆ ಹೋಗಿ ಉಸಿರುಬಿಡಲು ಅವಕಾಶವಿಲ್ಲದೆ ನಿರ್ಬಲರಾಗಿ ಅನಾರೋಗ್ಯವು ಬರಬಹುದು. ರೈತನಾದರೋ ಹಗಲೆಲ್ಲಾ ನಿರ್ಮಲವಾಯುವಿನಲ್ಲಿಯೇ ಕೆಲಸಮಾಡಬೇಕಾಗಿರುವುದರಿಂದ ಅತಿಶಯವಾದ ಆರೋಗ್ಯವನ್ನೂ ದೇಹದಾರ್ಡ್ಯವನ್ನೂ ಅನುಭವಿಸುವನು. ರೈತನನ್ನೂ ಅವನ ವೃತ್ತಿಯನ್ನೂ ಜರೆವುದು ಕೆಲವರ ಪದ್ಧತಿ, ಚೆನ್ನಾಗಿ ಪರ್ಯಾಲೋಚಿಸಿದರೆ, ಇದು ಕೇವಲ ಅಯುಕ್ತವೆಂದು ತೋರುವುದು. ರೈತರು ಹಗಲೂ ಇರುಳೂ ದುಡಿದು ಕೆಲಸಮಾಡಿ ಬೆಳೆಯದಿದ್ದರೆ ನಮ್ಮೆಲ್ಲ ರಿಗೂ ಅನ್ನ ವೆಲ್ಲಿಯದು? ಒಂದುವರ್ಷ ಸರಿಯಾಗಿ ಮಳೆಯಾಗದೆ ಬೆಳೆಕೆಟ್ಟರೆ ಎಷ್ಟೋ ತೊಂದರೆಯಾಗುವುದು. ಹೀಗಿರಲು ನಮ್ಮ ದೇಶದ ರೈತರೆಲ್ಲಾ ಒಂದೇಸಾರಿ ಆರಂಬಮಾಡದೆ ನಿಂತುಬಿಟ್ಟರೆ, ನಮ್ಮ ಗತಿಯೇನಾಗಬೇಕು? ರೈತರೇ ಜನಾಂಗದ ಏಳಿಗೆಗೆ ಮೂಲಾಧಾರ. ಯಾವ ದೇಶದ ರೈತರು ದುಂದುಗಾರರೂ ಡಾಂಭಿಕರೂ ಸೋಮಾರಿಗಳೂ ಆಗುವರೋ ಆ ದೇಶವು ಸ್ವಲ್ಪ ಕಾಲದಲ್ಲಿಯೇ ಕೊನೆಗಾಣುವುದೆಂಬುದರಲ್ಲಿ ಸಂದೇಹವಿಲ್ಲ. ಈ ವಿಷಯವನ್ನು ಅರಿತವರೊಬ್ಬರೂ ರೈತರನ್ನು ನೋಡಿ ನಗಲಾರರು, ರೈತರು ಬೆಳೆದ ದವಸಗಳು ಅವರಿಗೂ ಅವರ ಸುತ್ತಮುತ್ತ ಹಳ್ಳಿಗಳಲ್ಲಿರುವವರಿಗೂ ಉಪಯುಕ್ತವಾಗಿರುವುವಲ್ಲದೆ, ದೊಡ್ಡ ಪಟ್ಟಣಗಳಲ್ಲಿರುವ ಲಕ್ಷಾಂತರ ಪ್ರಜೆಗಳ ಪ್ರಾಣವನ್ನು ಳಿಸುವುವು. ಅವರಿಗಾದ ಬಳಿಕ ಉಳಿದುದು ಸಮುದ್ರದ ಮೇಲೆ ಇಂಗ್ಲೆಂಡ್ ಮುಂತಾದ ಪತ್ತೆ ಮ ದೇಶಗಳಿಗೂ ಹೋಗುತ್ತವೆ.ಹೀಗೆರೆ ತರು ತಮ್ಮ ಸೀಮೆಯವರಿಗಲ್ಲದೆ, ಅನ್ಯ ದೇಶಗಳ ಗಣಿಗಳಲ್ಲಿಯೂ ಕಾರ್ಖಾನೆಗೆಇಲ್ಲಿಯೂ ಕೆಲಸಮಾಡುವ ಸಾವಿರಾರು ಕೂಲಿಯವರಿಗೆ ಆಹಾರವನ್ನು ಒದಗಿಸಿಕೊಟ್ಟು ಅಲ್ಲಿಂದ ಹತ್ತಿ, ಬಟ್ಟೆ, ಕಬ್ಬಿಣದ ಸಾಮಾನು, ಉಕ್ಕಿನಆಯುಧ ಮೊದಲಾದ ವಸ್ತುಗಳನ್ನು ತರಿಸಿಕೊಳ್ಳಲು ಸಹಕಾರಿಗಳಾಗಿದ್ದಾರೆ. 19. ಗಿಡಗಳು. ಗಿಡಗಳು ಆಕಾರದಲ್ಲಿಯೂ ಗಾತ್ರದಲ್ಲಿಯೂ ಮನುಷ್ಯರಂತೆ ನಾನಾವಿಧಗಳಾಗಿವೆ. ಕೆಲವು ಗಿಡಗಳು ಕೊಂಬೆಗಳಿಲ್ಲದೆ ಕೋಲಿನಂತೆ ಎತ್ತರವಾಗಿ