ಪುಟ:ಪ್ರಬಂಧಮಂಜರಿ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಪ್ರಬಂಧಮಂಜರಿ--ಎರಡನೆಯ ಭಾಗ ತೆಗೆದು ಒಣಗಿಸಿ ನೀರು ಹಾಕಿ ಬೇಯಿಸಿದರೆ ಬೆಣ್ಣೆಯಂತಿರುವ ವಸ್ತು. ವುಂಟಾಗುವುದು. ಗಿಡಗಳು ಪ್ರಪಂಚದಲ್ಲಿ ಪರಮೋಪಕಾರಿಗಳಾದ ವಸ್ತುಗಳು. ಇವು ಭೂಮಿಗೆ ದೈವಿಕವಾದ ಆಭರಣಗಳು, ಗಿಡಗಳಿಲ್ಲದ ದೇಶವನ್ನು ನೋಡುಇದಕ್ಕೆ ಬೇಸರವಾಗುತ್ತದೆ. ಇವು ಸೂರ್ಯಕಿರಣಗಳ ಸಹಾಯದಿಂದ ವಾಯುವಿನಲ್ಲಿರುವ ಇಂಗಾಲಾಮ್ಲ ವೆಂಬ ಕೆಟ್ಟ ವಸ್ತುವನ್ನು ವಿಭಾಗಿಸಿ, ಇಂಗಾಲವನ್ನು ತಮ್ಮೆಲೆಗಳ ಮೂಲಕ ಗ್ರಹಿಸಿ ಉಳಿದ ಆಮ್ಲಜನಕವನ್ನು ಬಿಟ್ಟು ವಾಯುವನ್ನು ಶುದ್ಧ ಮಾಡುತ್ತವೆ. ಸಂಪಗೆ ಗುಲಾಬಿ ಮೊದಲಾದ ಸುವಾಸನೆಯುಳ್ಳ ಸೊಗಸಾದ ಹೂಗಳನ್ನು ಗಿಡಗಳು ಕೊಡುತ್ತವೆ. ಸವಿ. ಯಾದ ಒಳ್ಳೆಯ ಹಣ್ಣುಗಳೂ ಗಿಡಗಳಿಂದಲೇ ಆಗುತ್ತವೆ. ಇಂಗ್ಲೆಂಡಿನ ಸೇಬೂ,ಯೂರೋಪಿನ ದಕ್ಷಿಣದೇಶಗಳ ದ್ರಾ ಕಿತ್ತಲೆ ಹಣ್ಣುಗಳೂ ನಮ್ಮ ದೇಶದ ತೆಂಗಿನಕಾಯಿ ಮಾವು ದಾಳಿಂಬೆ ಹಲಸಿನಹಣ್ಣುಗಳೂ ಇದಕ್ಕೆ ಉದಾಹರಣೆಗಳು. ಗಿಡಗಳು ಬದುಕಿರುವಾಗಲ್ಲದೆ, ಕಡಿದು ನೆಲಕ್ಕೆ ಉರಳಿಸಿದ ಮೇಲೆಯೂ ಅಪಾರವಾದ ಉಪಕಾರಗಳನ್ನು ಮಾಡುವುವು. ಮರಗಳಿಲ್ಲದಿದ್ದರೆ ಜನರು ಒದುಕು ವುದೇ ದುಸ್ತರವಾಗುತ್ತಿತ್ತು. ಮರದ ದೂಲಗಳೂ ಜಂತೆಗಳೂ ಹಲಗೆಗಳೂ ಇಲ್ಲದಿದ್ದರೆ ಮನೆಗಳನ್ನು ಕಟ್ಟಲಾದೀತೆ? ಕೆನಡಾ ಮತ್ತು ಪಶ್ಚಿಮ ಅಮೆರಿಕಾ ದೇಶಗಳಲ್ಲಿನ ಜನರು ಮರದ ತುಂಡುಗಳನ್ನು ಒಂದರ ಮೇಲೊಂದಾಗಿಟ್ಟು ಮನೆ ಕಟ್ಟುತ್ತಾರೆ. ಇಟ್ಟಿಗೆಯಿಂದ ಇಲ್ಲವೆ ಕಲ್ಲಿನಿಂದ ಮನೆಗಳನ್ನು ಕಟ್ಟಿಸಿದರೂ, ಮರದ ಕಿಟಿಕಿಗಳೂ ಕದಗಳೂ ಕುರ್ಚಿ ಮೊದಲಾದ ಸಾಮಾನುಗಳೂ ಆವಶ್ಯಕವಾಗಿ ಬೇಕಾಗುವುವು. ಮರದಿಂದಾಗುವ ದೋಣಿಗಳೂ ಹಡಗುಗಳೂ ಇಲ್ಲದಿದ್ದಲ್ಲಿ ದೊಡ್ಡ ನದಿಗಳನ್ನೂ ಸಮುದ್ರವನ್ನೂ ದಾಟಲಾಗದೆ ಒಂದುದೇಶದವರಿಗೂ ದೀಪಾಂತರದವರಿಗೂ ಸಂಬಂಧವೇ ಇಲ್ಲದೆ ಹೋಗುತ್ತಿತ್ತು. ಮರದಿಂದ ಮಾಡಿದ ಬಂಡಿಗಳೂ ಸಾರೋಟುಗಳೂ ರೈಲುಗಾಡಿಗಳೂ ನಮ್ಮನ್ನು ಸ್ಥಳದಿಂದ ಸ್ಥಳಕ್ಕೆ ಒಯ್ಯುತ್ತವೆ. ಭೂಮಿಯ ವ್ಯವಸಾಯಕ್ಕೆ ಬೇಕಾದ ಸಾಮಾನುಗಳು ಮರದಿಂದ ಮಾಡ