ಪುಟ:ಪ್ರಬಂಧಮಂಜರಿ.djvu/೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಳೆಗಾಲದ ದಿನ. ಲ್ಪಡುತ್ತವೆ. ಆದುದರಿಂದ ಗಿಡಗಳು ಮರವನ್ನು ಒದಗಿಸದಿದ್ದರೆ, ವ್ಯವ. ಸಾಯ ನಡೆಯದೆ ನಮ್ಮ ಹಿಟ್ಟಿಗೇ ಮಾರ್ಗವಿಲ್ಲದಂತಾಗುವುದು. ಮಕ್ಕಳ ಆಟದ ಸಾಮಾನನ್ನೂ ಎಷ್ಟೋ ವಿಧವಾದ ಅಲಂಕಾರ ವಸ್ತುಗಳನ್ನೂ ಮರದಲ್ಲಿಯೇ ಮಾಡುವರು. ಗಿಡಗಳಿಂದಾಗುವ ಇವು ಮೊದಲಾದ ಉಪಯೋಗಗಳನ್ನು ವರ್ಣಿಸಲಳವಲ್ಲ. - 20. ಮಳೆಗಾಲದ ದಿನ. ವಡಮುಚ್ಚಿಕೊಂಡು ಮಳೆ ಬೀಳುತ್ತಿರುವ ದಿನಕ್ಕೆ ಸಂಸ್ಕೃತದಲ್ಲಿ ದುರ್ದಿನವೆಂದು ಹೆಸರು. ಈ ಹೆಸರಿನಿಂದಲೇ ಮಳೆಬಂದ ದಿನದಿಂದ ಬಹಳ ತೊಂದರೆಗಳಾಗುವುವೆಂಬುದು ವ್ಯಕ್ತವು. ಮೇಘಗಳು ಕವಿದುಕೊಂಡು ಕತ್ತಲೆಯಾಗಿ ಜನರಿಗೆ ದಿಕ್ಕು ತೋರದೆ ಮಂಕು ಮುಚ್ಚಿಕೊಂಡ ಹಾಗಿರುವ ಇದೆ. ಪಟ್ಟಣಗಳಿಗಿಂತ ಹಳ್ಳಿಗಳಲ್ಲಿ ಹೀಗೆ ವಿಶೇಷವಾಗಿ ಕಾಣುವುದು. ಹಳ್ಳಿಗಾಡಿನಲ್ಲಿ ಜನರು ಪ್ರಾಯಶಃ ಹೊರಗಡೆಯೇ ಕೆಲಸಮಾಡುವರು. ಆದುದರಿಂದ ಮಳೆಬಿದ್ದಾಗ ಅವರ ಕೆಲಸವು ಮನಸ್ಸಿಗೆ ಬೇಕಾಗಿರುವುದಿಲ್ಲ; ಕೆಲಸವು ನಡೆವುದೇ ದುಸ್ತರ. ಕೆಲಸ ಮಾಡದಿದ್ದಾಗ ಮನೆಬಿಟ್ಟು ಹೊರಗಡೆ ಎಲ್ಲಿಯೂ ಕದಲುವುದಕ್ಕಾಗದೆ, ತಮ್ಮ ಕತ್ತಲೆ ಗೂಡುಗಳಲ್ಲಿಯೇ ಇದ್ದು ಕೊಂಡು ಏನು ಮಾಡಬೇಕೋ ತಿಳಿಯದೆ ಕಾಲಕಳೆವುದು ಕಷ್ಟವು. ಹಳ್ಳಿಗಳಲ್ಲಿ ರಸ್ತೆಗಳೂ ಕಲ್ಲಿನ ಚರಂಡಿಗಳೂ ಇರುವುದಿಲ್ಲವಾದಕಾರಣ, ಮಳೆನೀರು ಸರಾಗವಾಗಿ ಊರಹೊರಗೆ ಹೋಗಲು ಅವಕಾಶವಿಲ್ಲದೆ ಬೀದಿಯೆಲ್ಲಾ ಕೆಸರಾಗಿ ಮನೆಯಿಂದ ಮನೆಗೆ ಹೋಗುವುದೇ ಅಸಹ್ಯವಾಗುವುದು. ದೊಡ್ಡ ಪಟ್ಟಣಗಳಲ್ಲಿ ಮಳೆಯು ಅಷ್ಟು ತೊಂದರೆಗೆ ಕಾರಣವಾಗುವುದಿಲ್ಲ. ಪಟ್ಟಣವಾಸಿಗಳು ತಮ್ಮ ಬಲವಾದ ಮನೆಗಳಲ್ಲಿಯೇ ಪ್ರಾಯಶಃ ಕೆಲಸಮಾಡುತ್ತಿರುವರು. ಮೋಡಮುಚ್ಚಿಕೊಂಡಾಗ ಇಂಥ ಮನೆಗಳೂ ಸ್ವಲ್ಪ ಕತ್ತಲೆಯಿಂದ ರಮ್ಯವಾಗಿ ಕಾಣದಿರಬಹುದು. ಆದರೆ ಮನೆಗಳನ್ನು ಗಟ್ಟಿಯಾಗಿ ಕಟ್ಟಿರುವುದರಿಂದ ನೀರು ಸೋರುವುದಿಲ್ಲ. ದೊಡ್ಡ ಪಟ್ಟಣಗಳಲ್ಲಿ ಮಳೆನೀರು ಬಿದ್ದ ಕೂಡಲೆ ಚರಂಡಿಗಳ ಮೂಲಕ ಹರಿದು ಹೋಗುವದರಿಂದ ಕೆಸರಾಗಲು ಅವಕಾಶವಿಲ್ಲ. ಮಳೆ ನಿಂತಕೂಡಲೆ ಹೊರಗೆ ಸಂಚಾರ