ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಾಯಾಕೋಲಾಹಲ ಸಂದಣಿಸುತಿಟ್ಟಣಿಸಿ ನೆರೆದಿಹ | ಮಂದಿಯಲಿ ನಾನಿವನನನುಚಿತ | ದಿಂದಲಿವಳಿಗೆ ನುಡಿದು ತೋರುವುದೆಗ್ಗತನವೆನುತ | ಅಂದು ವಿಮಳೆಗೆ ಜಾತಿಜಾಣಿಕೆ | ಯಿಂದಲಭಿನವ ಪಾಡು ನೋಟಗ | ಳಿಂದ ಬಳಿಕಲ್ಲಮನ ತೋರಿಸುತಿರ್ದಳಾ ಮಾಯೆ ಆಕೆ ಕಡೆಗಣ್ಣಿನಲ್ಲಿ ತೋರಿದ | ಡೀಕೆ ನಡುಗಣ್ಣಿನಲಿ ನೋಡುತ | ಲಾ ಕಳಾವಿದನಾಗಿ ಕಾಣಿಸುವಾತನಿಂಗಿತವ || ಲೋಕದೊಳಗಿಂತಪ್ಪ ಮಾನವ | ರಾಕೃತಿಯ ನಾ ಕಾಣೆನೆನುತಾ | ಲೋಕಿಸಿದಳನಿಮಿಷತೆಯಿಂದಾ ವಿಮಳೆಯಲ್ಲಮನ ಊಹಿಸುವಡಾ ದೇವ ಮಾನವ | ಚಹವನು ತೊಟ್ಟಿರ್ದನೋ ಮೇಣ್ | ಮೋಹದಿಂದಾನೀಕ್ಷಿಸಲು ದಿಟವೆನ್ನ ಕಣ್ಣಿಂಗೆ | ರೂಹಿನಂದದೊಳಿರ್ದನೋ ಸಂ | ದೇಹವಾಗಿದೆ ತಿಳಿವಡೀತನ | ಗಾಹು ನನಗರಿದಾದುದೆಂದರು ವಿಮಳೆ ಮನದೊಳಗೆ ದಿಟಕೆ ಭಾವಿಸಲಾರ ಭಾವನೆ | ಘಟಿಸಿದಂತಿರೆ ತನ್ನ ರೂಪನು | ನಟಿಸಿ ತೋರುವನಾದ ಕಾರಣ ವಿಮಳೆಯರಿವಿಂಗೆ | ಅಟಮಟದಲಹುಲ್ಲವೆಂಬೀ | ನಟನೆಯನೆ ನೆಲೆಗೊಳಿಸುತಿರ್ದನು | ಪಟುತರಸ್ವಾತಂತ್ರ್ಯಮಹಿಮೆಯ ಮೂರ್ತಿಯಲ್ಲಮನು ||90|| 2011 12.011