V ೪ನೇ ಪ್ರಕರಣ ] ಹೇಮಚಂದ್ರರಾಜ ವಿಲಾಸ ಅನೃದೇಶಕ್ಕೆ ಅಟ್ಟಿಬಿಟ್ಟದ್ದೂ, ಆಕೆಯಪಾಲಿನ ರಾಜ್ಯವನ್ನು ಶುನಕ ಹೃದಯರಾದ ಆ ನೀಚ ಹೆಂಗಸರಿಗೆ ಕೊಟ್ಟದ್ದೂ, ಇದೆಲ್ಲಾ ಹೃದಯದಲ್ಲಿ ನಾಟ ಆತನನ್ನು ಕುಕ್ಕುತಿರುವ ಕಾರಣ, ತಲೇಬಗ್ಗಿಸುವ ಲಜ್ಞೆಯು ಇಂದುಕಲೆಯನ್ನು ನೊ ಡಲು ತಡೆಯಾಗಿದೆ. ದೊಡ್ಡ,-ಅಯ್ಯೋ ಪಾಪ ! ನಿಷ್ಕಂಟಕ..-ಕುಟಿಲ ಭದ್ರನಾಥರ ಸೇನೆ ತೆರಳಿದ್ದನ್ನು ನೀವು ಕೇಳಲಿಲ್ಲವೆ ? ದೊಡ್ಡ-ತೆರಳಿತೆಂದು ವರ್ತಮಾನವಿದೆ. ನಿಷಂಟಕ..ಒಳ್ಳೇದು ಸ್ವಾಮಿ, ನನ್ನೊಡೆಯನಾದ ರಾಜನ ಸವಿಾಪಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ; ಆತನಿಗೆ ಉಪಚಾರ ಮಾಡುತ್ತಾ ಇರಿ. ಬಂದಾ ನೊಂದು ಮಹಕಾರಕ್ಕಾಗಿ ರಹಸ್ಯವು ಸ್ವಲ್ಪಕಾಲ ನನ್ನನ್ನು ಅವರಿಸಿಕೊಂಡಿ ದೀತು. ನಾನು ಇಂಥವನೆಂದು ನಿಮಗೆ ತಿಳಿದ ತರುವಾಯು ನಿಮ್ಮ ಪರಿಚಯದ ಪ್ರಯೋಜನವನ್ನು ನನಗೆ ತಾವು ಕೊಟ್ಟದ್ದಕ್ಕಾಗಿ ವ್ಯಸನಪಡಲಾರಿರಿ. ನನ್ನ ಸಂಗಡ ದಯಮಾಡಿ ಬನ್ನಿ, (ನಿಪ್ಪಾ ತ.) . 8ನೇ ಪ್ರಕರಣ-ದೇವರೇವಿನ ಹತ್ತಿರದ ಪಾಳಯ-ಒಂದು ಗೂಡಾರದಲ್ಲಿ. ಪ್ರವೇಶ-ಇಂದುಕಲೆ, ವೈದ್ಯ, ವೀರಭಟರು ದಾಳೆಯನ್ನು ಹಿಡಿದು ಭೇರೀನಾದವನ್ನು ಮಾಡುತ್ತಾ ಬರುವರು, ಇಂದು ಕಲೆ.-ಅಯ್ಯೋ ಆತನೇ ವಿಪರೀತವಾಗಿ ಘೋಪ್ರಮಾಡಿ ಅಲ್ಲೋಲಕಲ್ಲೋಲ ವಾಗುತ್ತಿರುವ ಮಹಾಸಮುದ್ರನಂತೆ ಹುಚ್ಚಿನಿಂದ ಈಗತಾನೆ ಆರ್ಭಟಿಸುತಿದ್ದರು; ಗಟ್ಟಿಯಾಗಿ ಕೂಗಿಕೊಂಡು ಹಾಡುತಿದ್ದರು ; ಉಗನೀಹಂಬು, ಬೂತಾಳೇಪಟ್ಟೆ, ಕಕ್ಕೆ ಹೂ, ದಾಸವಾಳದಹೂ, ಇತರ ಕಾಡಸೊಪ್ಪು ಮೊದಲಾದವುಗಳನ್ನೆಲ್ಲಾ ತಲೆಗೆ ಮೈಗೆ ಕಟ್ಟಿಕೊಂಡು ಕುಣಿದಾಡುತಿದ್ದರು, ನೂರುಮಂದಿ ಹೊರಡಲಿ. ಅಂಗೈಯಗಲದ ಸ್ಥಳವನ್ನೂ ಬಿಡದೆ ಹುಡುಕಿ*ಅವರನ್ನು ನನ್ನ ಸಮೀಪಕ್ಕೆ ಕರೆ ತರಲಿ. (ಒಬ ಅಧಿಕಾರಿ ಹೋಗುವನು) ಆತನ ಬುದ್ಧಿಭ್ರಮಣೆ ಹೋಗಿ ಜ್ಞಾನ ಸರಿಯಾಗುವುದಕ್ಕೆ ಮನುಷ್ಯನ ವಿವೇಕವು ಏನೇನು ಚಾತುರವನ್ನು ತೋರಿಸ ಬಲ್ಲದು ? ಆತನಿಗೆ ಯಾವೊನಾದರೂ ಗುಣಮಾಡಿದರೆ ನನ್ನ ಸಕಲೈಶ್ರರವೂ ಆ ವೈದ್ಯನ ದಾಗಿದ್ದೀತು,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೦೦
ಗೋಚರ