ಪಿ ಠಿ ಕ . ಪ್ರೇಕ್‌ಸ್ಪಿ ಎಂಬ ರ್ಇಗೀ ಮಹಾಕವಿಯಿಂದ ರಚಿಸಲ್ಪಟ್ಟಿರುವ 'ರ್ಕಿಗಲೀ6” ಎಂಬ ಮಹಾನಾಟಕವು ಈ ಕವಿ ಬರೆದ ಗ್ರಂಥಗಳಲ್ಲೆಲ್ಲಾ ಸರೋತ್ತಮವಾದ್ದು, ಯಾವ ಇತರ ಭಾಷೆಯಲ್ಲಿ ಇಂಥಾ ಉತ್ತಮವಾದ ಗ್ರಂಥವು ರಚಿಸಲ್ಪಟ್ಟಿಲ್ಲ ಎಂದು ಅನೇಕಜನ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ತೋರಿಸಿರುವ ಸದ್ಗುಣ ದುರ್ಗುಣಗಳು, ತಂದೆಗೆ ಮಕ್ಕಳಲ್ಲಿರುವ ಅತಿಯಾದ ವಾತ್ಸಲು, ಅತಿ ಹೇಯವಾದ ಪಿತೃದ್ರೋಹ, ಸಿ ನೀರಲ್ಲಿರತಕ್ಕ ಉತ್ತಮಾಧವ ಗುಣಗಳು, ನಿಜವಾದ ಹುಚ್ಚು ಸುಳ್ಳು ಹುಚ್ಚು, ಅಟ್ಟ ರಾಜಭ ಆತ್ಮಾಧವಾದ ರಾಜಭಕ್ತಿ, ಇವೇ ಮೊದಲಾದ ಗುಣದೋಷಗಳನ್ನು ವಿಚಿತ್ರವಾದ ರೀತಿಯಲ್ಲಿ ವಿವರಿಸಿರುವ ಕಾರಣ ಸರೋತ್ತಮವಾದ ಗ್ರಂಥವೆಂದು ಅನೇಕರು ಪರಿಭಾವಿಸಿದ್ದಾರೆ. ಹೀಗೆ ಈ ನಾಟಕದಲ್ಲಿ ತೋರಿಸಿರುವ ಜಗ ದ್ವಿಲಕ್ಷಣವಾದ ಬುದ್ಧಿಯನ್ನೂ ಕೌಶಲ್ಯವನ್ನೂ ನಮ್ಮ ಕನ್ನಡಿಗರು ತಿಳಿದುಕೊಳ್ಳಲು ಸ್ವಲ್ಪಮಟ್ಟಿಗಾದರೂ ಅನುಕೂಲಪಡಿಸಿ ಕೊಡಬೇಕೆಂದು ನನಗೆ ಆಶೆ ಹುಟ್ಟಿತು. ಈ ಗ್ರಂಥವನ್ನು ಕಥಾರೂಪವಾಗಿಯಾಗಲಿ ಕಾವ್ಯರೂಪವಾಗಿಯಾಗಲಿ ಕನ್ನಡಿಸಿದರೆ, ಕವಿಯ ಆಶಯವನ್ನು ಸರಿಯಾಗಿ ಕಂಡು ಹಿಡಿದು ಭಾಷಾಂತರ ಮಾಡತಕ್ಕೆ ಶಕ್ತಿ ನನಗಿ ಲ್ಲವಾಗಿ, ಎಲ್ಲಿಯಾದರೂ ನನ್ನ ಬುದ್ದಿ ಮೋಸಹೋಗಿ ಅಪಾರ್ಥವನ್ನು ಕಲ್ಪಿಸಿಯೇನಲ್ಲಾ ಎಂದು ಭಯಗೊಂಡು, ಸಾಧ್ಯವಾದವಟ್ಟಿಗೂ ಮೂಲಕ್ಕೆ ಅನುಸಾರವಾಗಿರಲೆಂದು ವಾಕ್ಯರೂಪವಾಗಿಯೇ ಈ ನಾಟಕವನ್ನು ಕನ್ನಡಿಸಿದೆ. ಆದಾಗ್ಯೂ ಸಂದರ್ಭಾನುಸಾ ರವಾಗಿ ಎಲ್ಲಿಯೂ ಒಂದೊಂದು ಪದ ಅಥವಾ ಪಠ್ಯವನ್ನು :ದೂಷಕನ ಬಾಯಿಯಲ್ಲಿ ಆಡಿಸಬೇಕಾಗಿ ಬಂತು. “ ಇಷ್ಟೊಂದು ಪದ್ಯವನ್ನು ನೀನು ಎಲ್ಲಿ ಕಲಿತುಕೊಂಡೆಯೋ ಮಗು ??” ಎಂದು ದೊರೆಯು ಕೇಳುವ ಪ್ರಶ್ನೆ ಸಾರ್ಥಕವಾಗಿರಲೆಂದು, ಕೈಲಾದವು ಟ್ಟಿಗೆ ಕೆಲವು ಪದ್ಯಗಳನ್ನು ಹೊಸೆದು ಹಾಕಬೇಕಾಯಿತು. ವಿದೂಷಕಪಾತ್ರ ಸಭಾ ವಾನುಗುಣವಾಗಿ ಕನ್ನಡಭಾಷೆಯಲ್ಲಿ ರೂಢವಾಗಿರುವ ಕೆಲವು ಹಾಡು ಅಥವಾ ಪದಗ ಳನ್ನು ಜಂಬುಕನು ವಕ್ರವಾಗಿಯೂ ಭಾವಗರ್ಭಿತವಾಗಿ ಹೇಳುವ ಕಾರಣ, ಇವುಗಳನ್ನೂ ಅವನ ಬಾಯಿಯಲ್ಲಿ ಆಡಿಸದೆ. ಗ್ರಂಥವು ವಾಚಕರಿಗೆ ಕನ್ನಡ ಸ್ವರೂಪ ಉಳ್ಳದ್ದಾಗಿಯೇ ಕಾಣಲೆಂದು ಪಾತ್ರಗಳಿಗೆಲ್ಲಾ ಯೋಗ್ಯತಾನುಸಾರವಾದ ನಮ್ಮ ದೇಶದ ಹೆಸರುಗಳನ್ನೇ ಇಟ್ಟಿದೆ. ಮೂಲಕ್ಕೂ ಈ ತರ್ಜನೆಗೂ ಎರಡು ಸಂದರ್ಭದಲ್ಲಿ ಮೂತ್ರ ವ್ಯತ್ಯಾಸವಿದೆ : ಕನ್ನಡ ಜನರ ಮತ್ತು ಕನ್ನಡಭಾಷೆಯ ತಿಳುವಳಿಕೆ ಮತ್ತು ರೀತಿಗೆ ಅನುಗುಣವಾಗಿರುವಂತೆ, ಇಂಗ್ಲಿ 5 ದೇಶದಲ್ಲಿ ರೂಢವಾಗಿರತಕ್ಕೆ ಕೆಲವು ಪದಾರ್ಥ ಗಳಿಗೆ ಮತ್ತು ಪದ್ಧತಿಗಳಿಗೆ ಈ ದೇಶದಲ್ಲಿ ಅನುರೂಪವಾಗಿರತಕ್ಕವುಗಳನ್ನು ಬರೆದು
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧
ಗೋಚರ