ಹೇಮಚಂದ್ರರಾಜ ವಿಲಾಸ, [೧ನೇ ಅಂಕ ವಿಗ್ರಜೆ-ಆಪ್ಪಾಜಿ, ನಾನೂ ನನ್ನ ಅಕ್ಕನಂತೆಯೇ; ಆಕೆಗೆ ಕೊಟ್ಟ ಹಾಗೆಯೇ ನನಗೂ ಅಪ್ಪಣೆಯಾಗಲಿ. ನನ್ನ ಹೃದಯಗತವಾಗಿರುವ ಅಭಿಮಾನದ ಸಾರವನ್ನೇ ಆಕೆ ಹೇಳಿದಳು ; ಆದರೆ ಕೊಂಚ ಕಡಮೆಯಾಯಿತು. ನನ್ನ ಅತಿ ನಾಜೂಕಾದ ಸ್ವಭಾವಕ್ಕೆ ಅನುಗುಣವಾಗಿರುವ ಸಕಲ ಐಹಿಕ ಭೋಗಗಳನ್ನೂ ನನ್ನ ಕತ್ತು ವಾಗಿ ಭಾವಿಸಿ, ನನಗೆ ಸಮಸ್ತ ಸುಖವೂ ತಮ್ಮ ಮೇಲಿನ ಅಭಿಮಾನವೇ ಎಂದು ತಿಳಿದಿದೇನೆ. ಇಂದುಕಲೆ.-(ಆತ್ಮಗತ) ಅಯ್ಯೋ ! ಬಡ ಇಂದುಕಲೆ ! ಹಾ ! ಬಡ ಅನ್ನಕೂಡದು; ನನ್ನ ವಾಗೈಭವಕ್ಕಿಂತಲೂ ತಂದೆಯ ಮೇಲಿನ ಪ್ರೇಮವೆಂಬ ಐಕ್ಷರವು ಅಧಿಕ ವಾಗಿರುವ ಕಾರಣ, ಹಾಗೆ ಹೇಳಲಾಗದು. ದೊರೆ. ಹಾಗಾದರೆ .ಪಜೆ, ವಿಸ್ತೀರ್ಣದಲ್ಲಿಯಾಗಲಿ, ಐಕ್ಷರದಲ್ಲಿಯಾಗನಿ, ಯಾವ ಭಾಗದಲ್ಲಿಯೂ ನಾಗವೇಣಿಗೆ ಕೊಟ್ಟ ಪ್ರಾಂತ್ಯಕ್ಕಿಂತಲೂ ಸ್ವಲ್ಪವೂ ಕಡಮೆ ಇಲ್ಲದ ಈ ಒಂದು ಭಾಗವನ್ನು ನೀನು ಸತತಿ ಪರಂಪರೆಯಾಗಿ ಅನುಭವಿಸಿ ಕೊಂಡು ಬಾರಮ್ಮ. ಇದು ಸರಿಹೋಯಿತು. ಏನಮ್ಮ ಇಂದುಕಲೆ, ನನ್ನ ಸುಖಸ್ವರೂಪವೇ ? ಕನಿಷ್ಕ ಪುತ್ರಿಯಾದರೂ ನೀನು ಯಾರಿಗೂ ಕನಿಷ್ಕಳಲ್ಲಿ ; ಮುದ್ರದೇಶದ ಅಥವಾ ಮಾರದೇಶದ ಸಕಲ ಸಾಭಾಗ್ಯವೂ ನಿನ್ನ ದಾಗಬೇಕೆಂದು ಕಾದಿದೆಯಮ್ಮ ; ನಿಮ್ಮ ಅಕ್ಕಂದಿರಿಗೆ ಕೊಟ್ಟ ಭಾಗಕ್ಕಿಂತಲೂ ಸಮಸ್ತ ವಿಷಯ ದಲ್ಲಿಯ ಸಂಪದ್ಯುಕ್ತವಾಗಿರುವ ಮತ್ತೊಂದು ಪಾಲನ್ನು ತೆಗೆದುಕೊಳ್ಳುವುದಕ್ಕೆ ನೀನು ಏನಂತೀಯ ? ಮಾತನಾಡು. ಇಂದುಕಲೆ-ಅಪ್ಪಾಜಿ, ಏನೂ ಇಲ್ಲ. ಧೋರೆ, ಏನೂ ಇಲ್ಲ ! ಇಂದು.ಏನೂ ಇಲ್ಲ. ದೊರೆ. ಏನೂ ಇಲ್ಲ ಅಂದರೆ ಏನೂ ಇಲ್ಲ. ಸರಿಯಾಗಿ ಮಾತನಾಡು, ಇಂದು.ತಂದೆ, ನಾನು ಬಹು ಪಾಪಿ, ದುರದೃಳು ; ನನ್ನ ಹೃದಯದಲ್ಲಿ ತುಂಬಿ ರುವುದನ್ನು ಬಾಯಿಗೆ ತಂದುಕೊಂಡು ಹೇಳಿ ವಿವರಿಸಲಾರೆ. ನಮ್ಮ ಪರಸ್ಪರ ಸಂಬಂಧ ಎಷ್ಮರ ಮಟ್ಟಿಗೆ ಇದೆಯೋ ಅಷ್ಟು ಮಾತ್ರ ತಮ್ಮ ಮೇಲೆ ನನಗೆ ಅಭಿಮಾನವಿದೆಯಲ್ಲದೆ, ಹೆಚ್ಚಾಗಿಯೂ ಇಲ್ಲ, ಕಡಮೆಯಾಗಿಯೂ ಇಲ್ಲ. ದೊರೆ..ಏನಂದೆ ಇಂದುಕಲೆ ? ನೀನಾಡಿದ ಮಾತನ್ನು ಸರಿಮಾಡಿಕೊ ; ನಿರ್ಭಾಗ್ಯ ೪ಾದೀಯೆ. ಇಂದುಕಲೆ-ಅಪ್ಪಾಜಿ, ತಾವು ನನ್ನನ್ನು ಹೆತ್ತಿರಿ, ಪೋಷಿಸಿದಿರಿ, ಪ್ರೀತಿಸಿ ಲಾಲಿಸಿದಿರಿ; ಈ ಉಪಕಾರಕ್ಕೆ ಪ್ರತಿಯಾಗಿ ಯೋಗ್ಯಳಾಗಿದ್ದುಕೊಂಡು, ತನಗೆ ವಿಧೇಯ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೭
ಗೋಚರ