ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಮಚಂದ್ರರಾಜ ವಿಲಾಸ. [೧ನೇ ಅಂಕ ಸಲಿ. ನಿಮ್ಮಂಟಕ ಮತ್ತೊಂದು ರಾಜ್ಯಕ್ಕೆ ಹೋಗಿ ತನ್ನ ಪಾಡನ್ನು ನೋಡಿ ಕೊಳ್ಳುತ್ತಾನೆ. [ನಿಮ್ಮ ಮಣ: (ವಾದ್ಯಧ್ವನಿ.) ಪ್ರವೇಶ-ದುಃಖಸಾರ, ಅನಂಗರಾಜ, ಮದ್ರಾಧೀಶ, ಪರಿವಾರ. ದುಃಖಸಾರ.ಮಹಾಸ್ವಾಮಿ, ಅನಂಗರಾಜರೂ, ಮದ್ರಾಧೀಶರೂ ದಯಮಾಡಿದಾರೆ, ದೊರೆಸ್ವಾಮಿ, ಮದ್ರಾಧೀಶರೇ, ನಮ್ಮ ಮಗಳನ್ನು ವರಿಸುವುದಕ್ಕಾಗಿ ಮೇಲಾಡಿ ಕೊಂಡು ಬಂದಂಥಾ ತಮ್ಮೊಡನೆ ಮೊದಲು ಮಾತನಾಡಬೇಕು, ಅವಳಿಗೆ ಕೊನೇ ಪಕ್ಷ ಎಷ್ಟು ಬಳುವಳೀಕೊಟ್ಟರೆ ಅವಳನ್ನು ನೀವು ಸ್ವೀಕರಿಸುತ್ತೀರಿ, ಇಲ್ಲದಿದ್ದರೆ ಅವಳ ಹಂಬಲನ್ನು ಬಿಡುತ್ತೀರಿ ? ಮದ್ರಾಧೀಶ.ಸ್ವಾಮಿ, ತಾವು ಆಕೆಗೆ ಎಷ್ಟು ಕೊಡುತ್ತೇನೆಂದು ಹೇಳಿದರೆ ಅಷ್ಟೇ ನನಗೆ ಸಾಕು ; ಅದಕ್ಕಿಂತಲೂ ಕಡಮೆಯಾಗಿ ಸ್ವಾಮಿ ಕೊಡುವುದೇ ಇಲ್ಲ. ಧೋರೆಗಾಂಭೀರ ನಿಧಿಗಳಾದ ಮದ್ರಾಧೀಶರೆ, ಅವಳು ಒಂದಾನೊಂದು ಕಾಲದಲ್ಲಿ ನಮ್ಮ ಪ್ರೇಮಾಸ್ಪದಳಾಗಿದ್ದಳು. ಅದು ಆಗಿನ ಮಾತಾಯಿತು. ಈಗ ಅವಳ ಮಲ್ಯ ಕಡಮೆಯಾಯಿತು. ಅಕೋ ಆ ಪದಾರ್ಧ ಅಲ್ಲಿ ನಿಂತಿದೆ. ನಮ್ಮ ಆಗ್ರ ಹಕ್ಕೆ ಮಾತ್ರ ಸರ್ವಥಾ ಪಾತ್ರವಾಗಿರುವ ಆ ಅಲ್ಪ ಪದಾರ್ಥದಲ್ಲಿ ನಿಮ್ಮ ಅನು ರಾಗಕ್ಕೆ ಪಾತ್ರವಾಗತಕ್ಕ ಗುಣ ಏನಾದರೂ ಇದ್ದರೆ, ಇಗೊ ಅದು ಇಲ್ಲಿದೆ ; ಅದು ನಿಮ್ಮದೇ. ಮದ್ರಾಧೀಶ.-ಇದಕ್ಕೆ ನನಗೇನೂ ಉತ್ತರ ತೋರದು, ಧೋರೆ.-ಇಂಥಾ ದುರ್ಗುಣಗಳಿಗೆ ರಾಗಿ, ನಮ್ಮ ಪಕ್ಕೆ ನೂತನವಾಗಿ ಗುರಿ ಯಾಗಿ, ನಮ್ಮ ಶಾಪವೆಂಬ ಬಳುವಳಿಯನ್ನು ಪಡೆದು, ನದ ಪ್ರಮಾಣಪ್ರರ ಸ್ಪರವಾಗಿ ಬಹಿಷ್ಕೃತಳಾಗಿ, ಇತ್ತ ಬಾ ಎನ್ನು ವರಿಲ್ಲದೇ ಇರತಕ್ಕ ಈ ನೀತಳನ್ನು ನೀವು ಸ್ವೀಕರಿಸುತ್ತೀರಾ, ತ್ಯಜಿಸುತ್ತೀರಾ ? ಮದ್ರಾ ಧೀಶ.ಸ್ವಾಮಿ ಕ್ಷಮಿಸಬೇಕು ; ಇಷ್ಟು ನಿರ್ಬಂಧದಿಂದ ಆಕೆಯನ್ನು ನಾನು ಸ್ವೀಕರಿಸುವುದಕ್ಕಾಗುವದಿಲ್ಲ. ದೊರೆ. ಹಾಗಾದರೆ ಬಿಡಿ ; ನಾನು ಹೇಳಿದ ಗುಣಗಳೇ ಅವಳಿಗಿರುವ ಸಕಲೆಶಪ್ಪ, (ಅನಂಗರಾಜನನ್ನು ಕುರಿತು) ಮಹಾರಾಜರೆ, ನನ್ನ ಆಗ್ರಹಾಸ್ಪದವಾದ ಪದಾರ್ಥ ವನ್ನು ತಮಗೆ ವಿವಾಹಮಾಡಿಕೊಟ್ಟರೆ, ತಮ್ಮಲ್ಲಿ ನನಗಿರುವ ಪ್ರೇಮಕ್ಕೆ ಕುಂದಕ ವನ್ನು ತರುವುದು ನನಗೆ ಇಷ್ಮವಿಲ್ಲ. ಈ ತುಚ್ಛವಾದ್ದನ್ನು ತಾನು ನಿರ್ಮಿಸಿದೆ ನೆಂದು ಒಪ್ಪಲು ವಿಧಿಯೂ ಕೂಡ ನಾಚಿಕೊಳ್ಳುವನು. ಈ ಪಾಪಿಗಿಂತಲೂ ಬೇರೆ ಯೋಗ್ಯವಾದ ಕಡೆಗೆ ತಮ್ಮ ವ್ಯಾಮೋಹವನ್ನು ತಿರುಗಿಸುವಿರೆಂದು ನಾನು ಬೇಡುತ್ತೇನೆ.