ಹೇಮಚಂದ್ರರಾಜ ವಿಲಾಸ. [೧ನೇ ಅಂಕ. ವೃದ್ದರ ಬಾಧೆಯನ್ನು ಸಹಿಸಿಕೊಂಡಿರುವದು ಹೀನವಾದ ಸೇವಾವೃತ್ತಿ. ಈ ಬಾಧೆಯು ನಾವು ಸಹಿಸಿಕೊಂಡು ಇದ್ದ ಸ್ಕೂ ಹೆಚ್ಚುವುದೇ ಹೊರತು, ಅವರ ಅಧಿಕಾರಾನುಗುಣವಾಗಿ ಹೆಚ್ಚುವುದಿಲ್ಲ. ಈ ಸಂಗತಿಯನ್ನು ಕುರಿತು ನಾನು ಇನ್ನೂ ಮಾತನಾಡುವದಕ್ಕೆ ಅನುಕೂಲವಾಗಿರುವಂತೆ ನೀನು ಇಲ್ಲಿಗೇ ಬಾ ; ನಾನು ಎಬ್ಬಿಸುವತನಕ ನಮ್ಮತಂದೆ ಮಲಗಿಯೇ ಇದ್ದರೆ ಅವನ ಆದಾಯದಲ್ಲಿ ಅರ್ಧವನ್ನು ನೀನು ಅನುಭವಿಸಿಕೊಂಡು ಪ್ರೇಮಾಸ್ಪದನಾದ ನನ್ನ ತಮ್ಮನಾಗಿ ಸುಖವಾಗಿರೆಂದು ಕೋರುವ - ಶುಕ್ಲಚಂದ್ರ.” ಹುಂ! ದೋಹ ಚೆಂತಾಸಂಘವೋ ! ( ನಾನು ಎಬ್ಬಿಸುವ ತನಕ ನಮ್ಮ ತಂದೆ ಮಲಗಿದ್ದರೆ ಅವನ ಆದಾಯದಲ್ಲಿ ಅರ್ಧವನ್ನು ನೀನು ಅನುಭವಿಸುವೆ.” ಎಲೆ ಮಗನೇ, ಶುಕ್ಷ ಚಂದ್ರ ! ಅಯ್ಯೋ ಇದನ್ನು ಬರೆಯುವುದಕ್ಕೆ ಅವನಿಗೆ ಕೈ ಬಂತೇ ! ಇದನ್ನು ಯೋಚಿಸುವದಕ್ಕೆ ಮನಸ್ಸು ಬಂತೇ ! ಇದು ನಿನಗೆ ಯಾವಾಗ ಬಂತು ? ಯಾರು ತಂದರು ? ಕುವಂತ ). ಇದನ್ನು ನನಗೆ ಯಾರೂ ತಂದು ಕೊಡಲಿಲ್ಲ ; ಅದೇ ಇದರಲ್ಲಿ ನಡೆದ ಚಮತ್ಕೃತಿ : ನನ್ನ ಏಕಾಂತ ಗೃಹದಲ್ಲಿ ಇದು ಬಿಸಾಡಿತ್ತು. ದುಃಖ.-ಇದು ನಿಮ್ಮಣ್ಣನ ಅಕ್ಷರವೆಂದು ನೀನು ಎಲ್ಲೆ ಯಲ್ಲವೆ ? ಕುಮತ) - .ಅದರ ವಿಷಯ ಒಳ್ಳೆಯದಾದರೆ ಇದು ಅವನದೇ ಎಂದು ನಾನು ಪ್ರಮಾಣವಾಗಿ ಹೇಳ ಬಲ್ಲೆ ; ಆದರೆ ಹಾಗಿಲ್ಲವಾದ್ದರಿಂದ ಆತನದಲ್ಲವೆಂದು ಸಂತೋಷವಾಗಿ ಹೇಳುತ್ತೇನೆ. ದುಃಖ-ಇದು ಅವನದೇ, ಕುಮಂತ.ಅವನ ಹಸ್ತಾಕ್ಷರವೇ ಸರಿ ; ಆದರೆ, ಅವನು ಮನಃಪೂರಕವಾಗಿ ಬರೆದದ್ದಲ್ಲ. ದುಃಖ.ಈ ವಿಷಯವಾಗಿ ನಿನ್ನ ಮನಸ್ಸನ್ನು ಪರೀಕ್ಷಿಸಲು ಪೂರ್ವದಲ್ಲಿಯೇ ಏನಾ ದರೂ ಯತ್ನಿಸಿದ್ದನೆ ? ಕುವಂತ),ಎಂದಿಗೂ ಇಲ್ಲಿ ಅಪ್ಪಾಜಿ ; ಆದರೆ ಮಕ್ಕಳು ವಯಸ್ಕರಾಗಿ ತಂದೆಯು ಗಳಿತವಯಸ್ಕನಾಗುತ್ತಿರುವಲ್ಲಿ, ತಂದೆಯು ಮಗನ ಪೋಷ್ಯನಾಗಿದ್ದು ಮಗನು ಅವನ ಆಡಳತಗಳನ್ನೆಲ್ಲಾ ನೋಡಿಕೊಳ್ಳತಕ್ಕದ್ದು ಯೋಗ್ಯವಾಗಿದೆ, ಎಂದು ನಮ್ಮಣ್ಣ ಹೇಳಿದ್ದನ್ನು ನಾನು ಆಗಾಗ್ಗೆ ಆತನಿಂದ ಕೇಳಿದೇನೆ. ದುಃಖ,ಎಲ ಚಂಡಾಲ, ಚಂಡಾಲ! ಅವನ ಅಭಿಪ್ರಾಯವೇ ಈ ಕಾಗದದಲ್ಲಿದೆಯಲ್ಲಾ! ಎಲ ದ್ರೋಹಿ, ಪಾಪಿ, ಚಂಡಾಲ, ಖಳ, ಅದಕ್ಕಿಂತಲೂ ಕಡಮೆಯಾದವನೆ ! ಎಲ, ಹೋಗು, ಅವನನ್ನು ಹುಡುಕು ; ಹಿಡಿ, ಆ ಚಂಡಾಲನನ್ನು ; ಅವ ಎಲ್ಲಿದಾನೆ?
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೨೭
ಗೋಚರ