ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ೨ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ ೨ನೇ ಪ್ರಕರಣ -ದುಃಖಸಾರನ ಮಂದಿರದ ಮುಂಭಾಗ. ಪ್ರವೇಶ ನಿಷ್ಕಂಟಕ, ರಾಹುಕ. ರಾಹುಕ.ನಿನಗೆ ಸುಪ್ರಭಾತವೈ. ನೀನು ಈ ಮನೆಯವನೋ ? ನಿಷ್ಕಂಟಕ-ಹವುದು. ರಾಹುಕ. ನಮ್ಮ ಕುದುರೆಗಳನ್ನು ಎಲ್ಲಿ ಕಟ್ಟಬೇಕು. ನಿಮ್ಮyಂಟಕ. ಆ ಜೋರೆಯಲ್ಲಿ. ರಾಹುಕ, ನನ್ನ ಮೇಲೆ ಅಭಿಮಾನವಿದ್ದರೆ ಹೇಳಬಾರದೆ. ನಿಪ್ಪಂದಕ.ನಿನ್ನ ಮೇಲೆ ಅಭಿಮಾನವಿಲ್ಲ. ರಾಹುಕ. ಹಾಗಾದರೆ ನಿನ್ನ ಲಕ್ಷ ನನಗೇನು ? ನಿಮ್ಮಂಟಕ-ನನ್ನ ಹಲ್ಲಿಗೆ ನೀನು ಸಿಕ್ಕಿದ್ದರೆ ಅಲ್ಲಿ ನನ್ನನ್ನು ಕಂಡರೆ ನಿನಗೆ ಲಕ್ಷ ವಿರುವಂತೆ ಮಾಡಿಕೊಳ್ಳುತಿದ್ದೆ. ರಾಹಕ-ನೀನು ಯಾಕೆ ಹೀಗೆ ಮಾತನಾಡುತಿದೆ ? ನೀನು ಯಾರೋ ನಾನರಿಯೆ. ನಿಷ್ಕಂಟಕ, ನಾನು ನಿನ್ನನ್ನು ಬಲ್ಲೆ ಕಲಾ. ರಾಹುಕನನ್ನನ್ನು ನೀನು ಯಾರೆಂದು ಬಲ್ಲೆ ? ನಿಷ್ಕಂಟಕ-ಯಾರಂದೇ ? ನೀಚ, ದುಮ್ಮ, ಚಂಡಾಲ, ಮೋಸಗಾರ, ಗಂಟುಕಳ್ಯ, `ತಲೆವೊಡಕ, ಮನೆಮರಕ, ಚಾಕೋರ, ಭಂಡ, ಅಂಜಪುರಕಿ, ಕೈಲಾಗದವ, ಹೇಡಿ, ತಿರಕ, ಮೂಳ, ನಾಯಿ, ದುರಾಚಾರಿ, ದುರ್ನಿತ, ಸಿಗೇಡಿ, ಅಪ್ರಯೋಜಕ, ಅವಿವೇಕಿ, ಅಜ್ಞಾನಿ, ನೀತಿಬಾಹಿರ, ಶುಂ, ವಜಶುಂಠ, ಕುಲಗೇಡಿ, ಅಲ್ಪ, ಭಂಗೀ ಕೋರ, ಹೆಂಡಕೊರ, ಕೂರ, ಕಳ್ಳ, ಮಾತೃದ್ರೋಹಿ, ಪಿತೃದ್ರೋಹಿ, ಸ್ವಾಮಿ ದೋಹಿ, ಗುರುದ್ರೋಹಿ, ಮಿತ್ರದ್ರೋಹಿ, ಅಯೋಗ್ಯ, ಸುಳಗಾರ, ಮೋಸಗಾರ, ಭಸ್ಮ, ಅಧಮ, ಹೀಗೆಂದು ಬಲ್ಲೆ. ಈ ಬಿರುದಾವಳಿ ಒಂದೂ ನಿನ್ನವಲ್ಲವೆಂದು ಹೇಳಿದರೆ, ಯಾರನ್ನು ನಾನು ಹಿಡಿದು ಬದುಕ' ಎನ್ನು ವವರಿಗೂ ಒದೆಯು ತೇನೊ ಅಂಥವನು, ಎಂದೂ ಬಲ್ಲೆ ಕಣೆಲಾ. ರಾಹುಕ.ಎಂಥಾ ಪಿಶಾಚದಂಥವನೊ ನೀನು ? ನೀನು ಯಾರೊ ನಾನು ಕಾಣೆ, ನಾನು ಯಾರೊ ನೀನು ಕಾಣೆ ; ಆದರೂ ನನ್ನನ್ನು ಹೀಗೆ ಬಯ್ಯಬೇಕಾದರೆ, ನಿಪ ,ಂಟಕ.ನನ್ನ ನ್ನು ಕಂಡೂ ಕಾಣೆನೆಂದು ಹೇಳುತೀಯೆನೆಲಾ ? ಎಂಥಾ ಭಂಡ ಸುಳ್ಳುಗಾರನೆಲಾ ನೀನು ? ದೊರೆಯು ಸಾಪದಲ್ಲಿ ನಾನು ನಿನ್ನನ್ನು ಹಿಡಿದು ಒದ್ದು ಇನ್ನೂ ಎರಡು ದಿವಸವಾಗಲಿಲ್ಲ. ನಿಂತುಕೊ, ಖಳ ; ರಾತ್ರೆಯಾದರೂ ಚಿಂತೆ ಇಲ್ಲ ; ಬೆಳದಿಂಗಳಿದೆ. ಮುಖವನ್ನು ಹೈರಕನ ಕೈಲಿಕೊಟ್ಟು ಬೆಳ್ಳಗೆ