ಹೇಮಚಂದ್ರರಾಜ ವಿಲಾಸ, [ಎನೇ ಅಂಕ ಕುಟಿಲ,-ಅದಕ್ಕೆ ನಾನು ಹೊಣೆ. ವಿಗ್ರಜೆ..ತಮ್ಮ ಕಡೇ ರಾಯಭಾರಿಗೆ ಹೀಗೆ ಬೈದು ಹೊಡೆದ್ದಕ್ಕಾಗಿ ನಮ್ಮಯ್ಯ ನಿಗೆ ಇನ್ನೂ ಹೆಚ್ಚಾಗಿ ಖೇದ ಉಂಟಾಗಬಹುದು. ಅವನ ಕೈಗೆ ಹಾಕಿ. (ನಿಷ್ಕಂಟಕನಿಗೆ ಕೊಳೆ ಪ್ರಾಪ್ತಿಯಾಗುವುದು.) ತಾವು ದಯಮಾಡಿ, ಹೋಗೋಣ. (ನಿಂಟಕ, ದುಃಖಸಾರ, ಹೊರತು, ಉಳಿದವರ ನಿಷ್ಕಾಂತ ) ದುಃಖ,ಎಲೈ ಮಿತ್ರನೆ, ನಿನಗಾಗಿ ನಾನು ವ್ಯಸನಪಡುವೆನು, ಕುಟಿಲರಾಜರ ದಯ ಹಾಗಿತ್ತು ; ಇವರ ಸ್ವಭಾವವೇನೊ ಲೋಕವೆಲ್ಲಾ ತಿಳಿದಹಾಗೆಯೇ, ಘರ್ಷಣೆ ಯನ್ನು ತಡೆಯಲಾರದು, ಪ್ರತಿಭಟಿಸಿ ಮಾತನಾಡಲು ಅಸಾಧ್ಯ. ನಿನ್ನ ವಿಷಯ ವನ್ನು ನಾನು ಅವರಲ್ಲಿ ಅರಿಕೆಮಾಡಿಕೊಳ್ಳುತ್ತೇನೆ. ನಿರಂಜಕ,ಸ್ವಾಮಿ, ಬೇವಿ, ಅರಿಕೇಮಾಡಿಕೊಳ್ಳಬೇಡಿ. ಕಾವಲು ಕಾದುಕಾದು, ಸುತ್ತಿ ಸುತ್ತಿ ನನಗೆ ಸಾಕಾಗಿದೆ. ಸ್ವಲ್ಪ ಹೊತ್ತು ನಿದ್ರೆಮಾಡುತ್ತೇನೆ ; ಮಿಕ್ಕ ಹೊತ್ತಿನಲ್ಲಿ ಸಿಳ್ಳು ಹಾಕಿಕೊಂಡಿರುತ್ತೇನೆ. ಸಜ್ಜನರಿಗೆ ದುರವಸ್ಥೆ ಪ್ರಾಪ್ತವಾಗ ಬಹುದು. ತಮಗೆ ಸುಪ್ರಭಾತವಾಗಲಿ, ಸ್ವಾಮಿ, ದುಃಖ ಈ ಭಾಗದಲ್ಲಿ ಕುಟಿಲರಾಜರಿಂದ ತಪ್ಪಾಯಿತು. ಇದರಿಂದ ಮನಸ್ತಾಪ ಉಂಟಾಗುವುದು. (ನಿಮ್ಮ ತ.) | ನಿನ್ನಂದಕ.ಅಯ್ಯೋ ! ಸಜ್ಜನನಾದ ದೊರೆಯು, ಧರರಾಯನಿಗೆ ರಾಜ್ಯ ಹೋಗಿ ಅರಣ್ಯವಾಸ ಪ್ರಾಪ್ತವಾದ ಹಾಗ ನಿನಗೂ ಆಯಿತಲ್ಲಾ ! ದೈವಕೃಪಾರಸದಲ್ಲಿ ಇಳೀಯಮುಳುಗಿ ತೇಲುತ್ತಿದ್ದ ನೀನು ಸಾದಾರಣರಂತೆ ಹರಪೆಗೆ ಬಂದೆಯಲ್ಲಾ ! ಆಕಾಶಗತವಾದ ಬೆಳಕೆ, ಈ ಕಾಗದವನ್ನು ನಾನು ನೋಡಿಕೊಳ್ಳುವ ಹಾಗೆ ಆಪ್ಯಾಯನವಾದ ನಿನ್ನ ಸುಪ್ರಕಾಶವನ್ನು ಈ ಭೂಮಿಯವರಿಗೂ ಪ್ರಸರಿಸು, ಕಸ್ಮದಶೆವಿನಾ ಮತ್ತೆ ಯಾವುದೂ ಅಸಾಧ್ಯವಾದ ಮಹತ್ತುಗಳು ಜರಗಿದ್ದನ್ನು ಕಾಣುವುದಿಲ್ಲ. ಇದು ಇಂದುಕಲೆಯಿಂದ ಬಂದದ್ದು ; ಹೀಗೆ ನಾನು ವೇಷವನ್ನು ಬದಲಾಯಿಸಿಕೊಂಡಿರುವುದನ್ನು ದೇವರ ದಯದಿಂದ ಆಕೆ ಕೇಳಿದಾಳೆ ;
- ಇಂಥಾ ಅವ್ಯವಸ್ಥೆಯಾದ ಸ್ಥಿತಿಯನ್ನು ಸರಿಮಾಡಿ, ಆದ ನನ್ಮಕ್ಕೆ ಪ್ರತೀ ಕಾರವನ್ನು ಮಾಡಲು ವ್ಯವಧಾನಮಾಡಿಕೊಳ್ಳುತ್ತೇನೆ.”- ಕಾವಲು ಕಾದು ಕಾದು ಆಯಾಸವಾಗಿದೆ. ಈ ಅಪಮಾನಕರವಾದ ಸ್ಥಿತಿಯನ್ನು ನೋಡದಹಾಗೆ ಕಣ್ಣುಗಳಾ, ವಿಶ್ರಾಂತಿಯನ್ನು ಹೊಂದಿ. ಅದೃಷ್ಟ್ಯವೆ, ಈಗ ಹೋಗಿಬಾ ; ಇನ್ನೊಂದುಸಾರಿ ನಿನ್ನ ಮಂದಸ್ಮಿತದ ಕಿರಣಗಳನ್ನು ನರಿಸು. ನಿನ್ನ ಚಕ ತಿರುಗುತ್ತಲೇ ಇರಲಿ.
(ನಿದ್ರೆ ಮಾಡುವನು)