ಹೇಮಚಂದ್ರರಾಜ ವಿಲಾಸ, [ನೇ ಅb ನಿಮ್ಮಂಟಕ.ಯಾಕೈಯ್ಯ, ವಿರೂಪಕ ? ವಿದೂಷಕ-ಹಿಮಗಾಲದಲ್ಲಿ ಶ್ರಮಪಡಕೂಡದೆಂಬ ಸಾರವನ್ನು ನಿನಗೆ ಕಲಿಸುವುದ ಕ್ಯಾಗಿ ನಿನ್ನನ್ನು ಇರುವೇ ಮರಕ್ಕೆ ಹಾಕುತ್ತೇನೆ. ತಮ್ಮ ಮೂಗಿನ ನೇರಕ್ಕೆ ಹೋಗತಕ್ಕವರೆಲ್ಲರಿಗೂ ಕಂಣಿದೆ, ಕುರಡರು ಹೊರತು : ಭಾಗ್ಯಹೀನನಾಗಿ ನಾತ ಹತ್ತಿದವನ ವಾಸನೆಯನ್ನು ತಿಳಿಯದವನು ಇಪ್ಪತ್ತಕ್ಕೆ ಒಬ್ಬನೂ ಇರುವದಿಲ್ಲ. ಅತಿಭಾರವಾದ ಚಕ್ಕ ಬೆಟ್ಟದಮೇಲಿನಿಂದ ಬರುತ್ತಿರುವಾಗ, ಅದನ್ನು ಹಿಡಕೊ ಳ್ಳದೆ ಬಿಟ್ಟುಬಿಡಬೇಕು ; ಇಲ್ಲದೆ ಅದರ ಹಿಂದೆಯೇ ಹೋದರೆ ತಲೆ ಒಡೆದುಹೋ. ಗುವುದು. ಬೆಟ್ಟದಮೇಲಕ್ಕೆ ಹತ್ತುತ್ತಿರುವ ದೊಡ್ಡ ಚಕ್ರವು ನಿನ್ನನ್ನು " ಲಕ್ಕೆ ಎಳೆದುಕೊಂಡು ಹೋಗಲಿ, ಬುದ್ಧಿವಂತರು ನಿನಗೆ ಬುದ್ದಿವಾದವ' ® ದಾಗ, ನಾನು ಕೊಟ್ಟ ಬುದ್ಧಿವಾದವನ್ನು ನನಗೆ ಹಿಂತಿರುಗಿ ಕೊಟ” ” ಕೆಂ ದರೆ ವಿದೂಷಕನಾದ ನನ್ನ ಮಾತಿನಪ್ರಕಾರ ನಡೆಯಬೇಕಾದರೆ ದೂರೇ. ಜಾಳಿಗೆಗೆ ಸ್ವಾಮಿಯನ್ನು ಸೇವಿಸ | ಆಳುತಾನಾಪ್ರಢ ಭೂತಿಯು | ಮಳೆಯು ಬರೆವೋಡುವನ ಸಿಡಿಲಿಗೆಡೆಮಾಡಿ || ಪಾಳೊಳಗೆ ಕೋಡಂಗಿ ನಿಲೆನು | ಪೊಳವಜಾಣರು ಓಡಲೊಡಲಿ | ಕಳವಳದಿ ವೋಡುವನೆ ಕೇಡಿಗ ; ಜಾಣ, ಕೋಡಂಗಿ | ನಿಪ್ಪಟಕ-ಇದನ್ನು ಎಲ್ಲಿ ಕಲಿತೆ ಕೊಡಂಗಿ ? ವಿದೂಷಕ.-ಕೋಳದಲ್ಲಿ ಅಲ್ಲಿ ಕೋಡಂಗಿ, ಪ್ರವೇಶ.ದೊರೆ, ದುಃಖಸಾರ. ದೊರೆ. ನನ್ನ ಸಂಗಡ ಮಾತನಾಡುವುದಿಲ್ಲ ! ದೇಹ ಸ್ವಸ್ಥವಿಲ್ಲ ! ಆಯಾಸವಾಗಿದೆ ! ರಾತ್ರಿ ಎಲ್ಲಾ ಪ್ರಯಾಣಮಾಡಿಬಂದರು ! ಇದೆಲ್ಲಾ ಏನು ವ್ಯಾಜ್ಯಗಳು? ವಿರುದ್ಧವ ನ್ನು ದ್ಯೋತಕವಾಡಿ ಫಲಾಯನಗೈದರ ಪ್ರತಿಬಿಂಬವಾಗಿದೆ. ಸರಿಯಾದ ಉತ್ತ ದವನ್ನು ತೆಗೆದುಕೊಂಡು ಬಾ. ದುಃಖ,ಮಹಾಸ್ವಾಮಿ, ರಾಜಪ್ರತರಾದ ಕುಟಿಲರ ಬೆಂಕಿಯಂಥಾ ಸ್ವಭಾವವೇದ್ಯವೇ ಇದೆ. ಅವರಿಗೆ ಯಾರು ಎಷ್ಟು ಹೇಳಿದಾಗ್ಯೂ ತಮ್ಮ ಮಾರ್ಗವನ್ನೇ ಹಿಡಿಯುವ ಅವರ ಮೂರ್ಖ ಸ್ವಭಾವವು ಸಾದಕ್ಕೆ ಗೊತ್ತೇ ಇದೆ. ಧೋರೆ.-ಹಾಳಾಗಿ, ಮೂಳಾಗಿ, ಮಾಳವಾಗಿ, ನಾಶವಾಗಿ, ಸಾಯಬಾರದೆ ! ಬೆಂಕಿ ಎಂದರೇನು ? ಎಂಥಾ ಸಭಾವ ? ದುಃಖಸಾರ, ದುಃಖಸಾರ, ಕುಟಿಲನನ್ನೂ ಅವನ ಹೆಂಡತಿಯನ್ನೂ ಕಂಡು ನಾನು ಮಾತನಾಡಲೇ ಬೇಕು,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೬೧
ಗೋಚರ