೪ನೇ ಪ್ರಕರ] ಹೇಮಚಂದ್ರರಾಜ ವಿಲಾಸ M ನಾಗವೇಣಿ.-ಸ್ವಾಮಿ ಕೇಳಿ ; ಒಂದಕ್ಕೆ ಎರಡರಷ್ಟು ಜನ ತಮ್ಮ ಹಸಾದಕ್ಕೆ ಹಮ್ಮಿಸಿಕೊಂಡು ಸಿದ್ಧರಾಗಿರುವ ಮನೆಯಲ್ಲಿ ಇಪ್ಪತ್ತೈದಲ್ಲ, ಹತ್ತು, ಹತ್ತಲ್ಲ, ಐದುತಾನೆ ಯಾಕೆ ? ವಿಸಜೆ ಒಬ್ಬನಿಂದತಾನೆ ಪ್ರಕೃತವೇನು ? ಧೋರೆ.-ಅಯ್ಯೋ ಪ್ರಕೃತಾಪಕೃತಗಳ ಮಾತನ್ನಾಡಬೇಡ, ಗೋಪಾಳದವರಾದರೂ ಸರಿಯೆ, ಕೆಲಸಕ್ಕೆ ಬಾರದ ಒಂದು ಪದಾರ್ಥವನ್ನು ತಮಗೆ ಪ್ರಕೃತವಿಲ್ಲದಿದ್ದಾ ಗ್ರ ಹೆಚ್ಚಾಗಿ ಇಟ್ಟುಕೊಂಡಿರುವರು, ಪ್ರಕೃತಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ವದಗಿಸಿನೋಡು, ಮನುಷ್ಯನ ಬಾಳೂ ತಿರಕಜಂತುಗಳ ಬಾಳೂ ಎರಡೂ ಒಂದೇಯಾಗಿರುವುದು. ಬೆಚ್ಚಗೆ ಉಡುಪನ್ನು ಹಾಕಿಕೊಳ್ಳುವುದೇ ಡಂಭ ವಾಗಿ ತೋರಿದ ಪಕ್ಷಕ್ಕೆ, ಮೈಗೆ ಬೆಚ್ಚಗಿಲ್ಲದೆ ಡಂಭವಾಗಿ ಹಾಕಿಕೊಂಡಿರುವ ಉಡಪು ಅವಕೃತವಾದ್ದು. ನಿಜವಾಗಿಯೂ ಬೇಕಾದ್ದೇನೆಂದರ-ದೇವರೇ, ಸಹ ನವನ್ನು ನೀಡು, ಸಹನವೇ ನನಗೆ ಬೇಕಾದ್ದು, ದೇವರ, ಭಾಗ್ಯಹೀನನಾಗಿರುವ ಮುದುಕನಾದ ನಾನು ವ್ಯಸನದಿಂದಲೂ ವಾರ್ಧಿಕ್ಯದಿಂದಲೂ ಪೀಡಿತನಾಗಿದೇನೆ. ಇವೆರಡರ ಬಾಧೆಯಿಂದಲೂ ಮಗ್ನನಾಗಿರುವಂತೆ ಮಾಡಿದೀರಿ. ಹೀಗೆ ತಂದೆಗೆ ವಿರೋಧವಾದ ಹೃದಯವನ್ನೂ ಈ ಹೆಮ್ಮಕ್ಕಳಿಗೆ ಕೊಟ್ಟವರು ನೀವೇ ಆದರೆ, ಅದನ್ನು ಸಾತ್ವಿಕನಾಗಿ ಸಹಿಸಿಕೊಂಡಿರುವಂಥಾ ಅವಿವೇಕವನ್ನು ಮಾತ್ರ ನನಗೆ ಕೊಡಬೇಡಿ. ಗಂಭೀರವಾದ ಆಗ್ರಹ ನನ್ನನ್ನು ಸೋಕಲಿ, ಹೆಂಗಸಿನ ಆಯುಧ ವಾದ ಕಂಬನಿಗಳ ಕರೆ ಗಂಡಸಾದ ನನ್ನ ಕೆನ್ನೆ ಮೇಲೆ ಹರಿದು ಕೆಡಿಸದಿರಲಿ. ಎಲೆ ದಯಾರಹಿತರಾದ ಚಂಡಾಲ ಕರಾಳಿಗಳಿರಾ ; ಲೋಕವೆಲ್ಲಾ ಕಂಪಿ ಸುವಂತೆ ನಿಮ್ಮಲ್ಲಿ ರಮೇಲೆಯೂ ನನ್ನ ದುಃಖವನ್ನು ತೀರಿಸಿಕೊಳ್ಳುತೇನೆ. ಎಂಥಾ ಕೆಲಸಕೊಡುತೇನೆಂದರೆ_ಇಂಥಾದ್ದೇ ಎಂದು ಈಗ ನಾನರಿಯೆ. ಆದರೆ ಅದರಿಂದ ಭೂಮಿಯೆಲ್ಲಾ ಭಯದಿಂದ ಗಡಗಡನೆ ನಡಗಿ ಹೋದೀತು. ನಾನು ಅಳುತೇನೆಂದು ತಿಳಿದಿದ್ದೀರೋ ? ಇಲ್ಲ ನಾನು ಅಳುವುದಿಲ್ಲ. ಈ ಹೃದಯವು ಒಂದು ಲಕ್ಷ ಚೂರಾಗಿ ಒಡೆದು ಹೋಗುವತನಕ ನಾನು ಅಳುವುದಿಲ್ಲ. ಎಲ್ಲಾ ವಿದೂಷಕ, ನನಗೆ ಹುಚ್ಚು ಹಿಡಿಯುವುದಲ್ಲೊ! (ದೊರೆ, ದುಃಖಸಾರ, ನಿಷ್ಕಂಟಕ, ವಿದೂಷಕನಿಷ್ಟಾಂತ, ದೊಡ್ಡ ಬಿರು ಗಾಳಿ, ಮಳೆ, ಗುಡುಗು ಸಿಡಿಲು ವಿಶೇಷವಾಯಿತು.) ಕುಟಿಲ.ನಾವು ಒಳಕ್ಕೆ ಹೋಗೋಣ, ಮಳೆಯ ಗಾಳಿಯ ವಿಪರೀತವಾಗಿದೆ. ವಿಷಜೆ.ಈ ಮನೆ ಚಿಕ್ಕದು ; ಮುದುಕನಿಗೂ ಅವನ ಜನರಿಗೂ ಸ್ಥಳ ಸಾಲದು. ನಾಗವೇಣಿ. ಅದು ಅವನ ದೋಷವೆ. ತಾನಾಗಿಯೇ ಆಯಾಸವನ್ನು ಉಂಟು ಮಾಡಿಕೊಂಡ ; ಅವನ ಅವಿವೇಕದ ರುಚಿಯನ್ನು ಅವನೋಡಲೇ ಬೇಕು,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೬೮
ಗೋಚರ