ನೇ ಪ್ರಕರಣ.] ಹೇಮಚಂದ್ರರಾಜ ವಿಲಾಸ, ೫೭ ೩ನ ಅ೦ಕ, ೧ನೇ ಪ್ರಕರಣ-ಬೆಟ್ಟದ ತಪ್ಪಲು. ವಿಪರೀತವಾದ ಗಾಳಿ, ನಿಷ್ಕಂಟಕ, ಒಬ್ಬ ದೊಡ್ಡ ಮನುಷ್ಯ ಇವರ ಪ್ರವೇಶ, ನಿಷ್ಕಂಟಕ.ಈ ಮಹಾನಾಯುವಿನ ಜೊತೆಗೆ ಇನ್ಯಾರು ಅಲ್ಲಿ ಬರತಕ್ಕವರು ? ದೊಡ್ಡ-ಈ ಮಹಾವಾಯುವಿನಂತೆಯೇ ಎಲ್ಲಡಿಯಾಗಿ ಅತ್ಯಂತ ಸಮಾಧಾನವಾಗಿ ರುವ ಮನಸ್ಸುಳ್ಳವನೊಬ್ಬ ನಿಂದಕ. ನಾನು ನಿನ್ನ ಗುರುತನ್ನು ಬಲ್ಲೆ ನೈಯ್ಯ. ಧೋರ ಲ್ಲಿದಾರೆ ? ದೊಡ್ಯ.- ಎಲ್ಲಿದಾರೆಂದು ಹೇಳಲಿ ! ವಿಪರೀತವಾಗಿ ಬಡಿಯುತಿರುವ ಬಿರುಮಳ ಗಾಳಿ ಯು ಸಂಗಡ ಸೆಣಸಾಡುತಿದಾರೆ. ಈ ಚರಾಚರ ವಸ್ತುಗಳ ವಿಕೃತಿ ಹೊಂದು ವಂತೆಯಾಗಲಿ ಇಲ್ಲ ನಾಶ ಹೊಂದುವಂತೆಯಾಗಲಿ, ಭೂಮಿಯನ್ನು ಕಡಲಿಗೂ ಕಡಲನ್ನು ಭೂಮಿಗೂ ತೂರಿಬಿಡುವಹಾಗೆ ಗಾಳಿಗೆ ಆಜ್ಞಾಪಿಸಿ ಮಾತನಾಡುತಿದಾರೆ ದಿಕ್ಕ ಕಾಣದೆ ಬೀಸುತ್ತಿರುವ ಚಂಡ ಮಾರುತವು, ಕೆದರಾಡಿ ಗೂರಾಡುತ್ತಿರುವ ನರೆಗೂದಲನ್ನು ಕಿತ್ತುಗೊಳ್ಳುತಿದಾರೆ. ಒಂದಕ್ಕೊಂದು ಅತ್ತಿತ್ತ ತೀಡಾಡು ತಿರುವ ಈ ಪ್ರಚಂಡ ಮಾರುತದ ಮತ್ತು ಈ ಮಹಾವರ್ಷಗಳ ಗಲಭೆಯನ್ನು ತಮ್ಮ ಶಾರೀರ ಪ್ರಪಂಚ ಗಲಭೆಯಿಂದ ಧಿಕ್ಕರಿಸುವುದಕ್ಕೆ ತಿಣಕಾಡುತಿರುವರು. ಮರಿಗೆ ಹಾಲಕೊಟ್ಟು ಸಾಕಾದ ಕರಡಿಯೂ, ಉಗ್ರ ಸಿಂಹವೂ, ಹಸಿದಿರುವ ತೋಳವೂ, ಇಂಥವುಗಳು ಕೂಡ ಆಚೆಗೆ ತಲೆ ಹಾಕದೆ ಒಳಗೇ ಇರತಕ್ಕೆ ಈ ವಿಪರೀತ ನೀತಿಯಲ್ಲಿ ಸಾಗಿಲ್ಲದೆ ತಲೆಯನ್ನು ಬರೀ ಹುಯಿದುಕೊಂಡು ಓಡಿಹೋ ಗುತ್ತಿದಾರೆ. ನಿನ್ನಂದಕ-ಅವರ ಸಂಗಡ ಯಾರಿದಾರೆ ? ದೊಡ್ಡ-ವಿದೂಷಕ ಹೊರತು ಮತ್ತೆ ಯಾರೂ ಇಲ್ಲ. ಆತನ ಹೃದಯ ಶೂಲವಾ ಗಿರುವ ಮಹಾ ವ್ಯಸನಾಂಧಕಾರವನ್ನು ಹಾಸ್ಯರಸವೆಂಬ ಬೆಳಕಿನಿಂದ ಹೋಗ ಲಾಡಿಸಬೇಕೆಂದು ಶ್ರಮಪಡುತಿರುವ ಅವ ಒಬ್ಬ ಸಂಗಡ ಇದಾನೆಯೇ ಹೊರತು ಮತ್ತೆ ಯಾರೂ ಇಲ್ಲ. ನಿಷ್ಕಂಟಕ.-ಅಯ್ಯ, ನಿನ್ನನ್ನು ನಾನು ಬಲ್ಲೆ. ಈ ನಮ್ಮ ಪೂರ ಪರಿಚಯದ ಆಧಾರದಮೇಲೆ ಒಂದಾನೊಂದು ಕಾರ್ ಗೌರವವನ್ನು ನೀನು ನಿರ್ವಹಿಸಬೇ ಕೆಂದು ಕೋರುತ್ತೇನೆ. ಕುಟಲನಿಗೂ ಭದ್ರನಾಥನಿಗೂ ವೈಷಮ್ಯ ಹುಟ್ಟಿದೆ ; ಆ ವೈಷಮ್ಯದ ಮುಖವು ಅವರಿಬ್ಬರ ತಂತ್ರದಿಂದ ಮುಚ್ಚಿಕೊಂಡಿದ್ದಾಗ್ಯೂ, ಅದು ಇರುವುದೇನೊ ಖಂಡಿತ. ಇವರಿಬ್ಬರ ಸಮೀಪದಲ್ಲಿಯ ಚಾಕರರಂತೆಯೇ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೭೦
ಗೋಚರ