ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܬ ಹೇಮಚಂದ್ರರಾಜ ವಿಲಾಸ. [೩ನೇ ಅಂಕ. ದುಃಖ-ನೀನು ಹೋಗು ; ಒಂದು ಮಾತನ್ನೂ ಆಡಬೇಡ. ಕುಟಲನಿಗೂ ಭದ್ರನಾ ಥನಿಗೂ ವೈಷಮ್ಯ ಹುಟ್ಟಿದೆ ; ಇದಕ್ಕಿಂತಲೂ ಕೇಡಾದ್ದು ಇನ್ನೊಂದಿದೆ. ಈ ದಿನ ರಾತ್ರಿ ನನಗೆ ಒಂದು ಕಾಗದ ಬಂತು. ಆ ಮಾತನಾಡುವುದು ಅಪಾಯಕರ ವಾಗಿದೆ. ನನ್ನ ಬೊಕ್ಕಸದಲ್ಲಿ ಅದನ್ನಿಟ್ಟು, ಬೀಗಹಾಕಿದ್ದೇನೆ. ಈಗ ದೊರೆಗೆ ಕೊಟ್ಟಿರತಕ್ಕೆ ಕಕ್ಕೆಲ್ಲಾ ತಕ್ಕ ಖ್ಯಾತವಾಗುವುದು. ಆಗಲೇ ಕೆಲವು ಸೇನೆ ಹೊರಟಿತು. ನಾವು ಧೋರೇ ಪಕ್ಷಕ್ಕೆ ಬಾಗಿರಬೇಕು. ಆತನನ್ನು ನಾನು ಹುಡುಕಿಕೊಂಡು ಹೋಗಿ ಆತನ ಕಪ್ನ ನಿವಾರಣೆಗೆ ತಕ್ಕ ಸಹಾಯವನ್ನು ರಹ ನ್ಯವಾಗಿ ಮಾಡುತ್ತೇನೆ. ನಾನು ಉದಾಸೀನನಾಗಿದಾನೆಂಬ ಭಾವ ರಾಜಪ್ರತ್ರನಾದ ಕುಟಿಲನಿಗೆ ತಿಳಿಯದಹಾಗೆ ಅವರ ಸಂಗಡ ನೀನು ಮಾತುಕಥೆಯಾಡುತ್ತಾ ಓಡಾ ಡುತಿರು. ನಾನು ಎಲ್ಲಿ ಎಂದು ಕೇಳಿದರೆ_ದೇಹಕ್ಕೆ ಅಲಸಿಗೆಯಾಗಿದೆ, ಮಲಗಿ ದಾರೆ ಎಂದು ಹೇಳು. ನನ್ನ ಪ್ರಾಣ ಹೋದಾಗ ಸರಿಯೆ. ಆದರೆ ಈಗಿನ ಭಯದಿಂದ ಅದಕ್ಕಿಂತಲೂ ಕಡವೆಯಾದ್ದು ಯಾವುದೂ ಹೋಗುವಹಾಗೆ ತೋರ ಅಲ್ಲ ; ಆದರೂ ನನ್ನ ಸ್ವಾಮಿಯಾದ ದೊರೆಗೆ ಕಪ್ನ ನಿವಾರಣೆಯಾಗಲೇ ಬೇಕು. ವಿಚಿತ್ರವಾದ ಕೆಲವು ಸಂಗತಿಗಳು ನಡೆಯುತಿವೆ, ಕುಮಂತ ; ನೀನು ಜಾಗಿ ಯಾಗಿರು. (ನಿಮ್ಮ Wಂತ.) ಕುವಂತ | ಈ ಸಂಗತಿಯಲ್ಲಿಯೂ ಬಾಯಿ ಬಿಡಕೂಡದೆಂದು ನೀನು ನಿಯಮಿಸಿ ಬ್ಲಾಗ್ರ, ರಾಜಪುತ್ರರಾದ ಕುಟಿಲರಿಗೆ ನಾನು ಕೂಡಲೆ ಉಪಚಾರದ ಸಂಗತಿ ಯನ್ನು ಹೇಳುವುದೇ ಸರಿ. ಆ ಕಾಗದದ ಸಂಗತಿಯನ್ನೂ ಆತನಿಗೆ ತಿಳಿಸು ತೇನೆ. ಅವರ ದಯಕ್ಕೆ ಪಾತ್ರನಾಗುವುದಕ್ಕೆ ಒಳ್ಳೆ ಸಮಯ. ಇದರಿಂದ ನಮ್ಮ ತಂದೆ ಯಾವುದನ್ನು ಕಳೆದುಕೊಳ್ಳತಾನೋ ಅದು ನನಗೆ ಪ್ರಾಪ್ತವಾಗು ವುದು. ಅದೇನೆಂದರೆ ಆತನ ಸಕಲ ಸತ್ತು, ಮುದುಕರು ಬೀಳುವಾಗ ಹುಡು ಗರು ಏಳುತ್ತಾರೆ. (ನಿವ್ಯಾ ತ.) ಏನೇ ಪ್ರಕರಣ. ಬೆಟ್ಟದ ತಪ್ಪಲು, ಗುಹೆ ಮುಂದೆ. ಪ್ರವೇಶ.ದೊರೆ, ನಿಮ್ಮಂಟಕ, ವಿದೂಷಕ, ನಿಷ್ಕಂಟಕ.-ಇದೇ ಸ್ಥಳ, ಮಹಾಸ್ವಾಮಿ, ಒಳಕ್ಕೆ ದಯಮಾಡಿಸಬೇಕು, ನನ್ನೊ ಡೆಯ, ಈ ಭಯಂಕರವಾದ ನಿತಿಯು ಕೌರವನ್ನು ಬೈಲಲ್ಲಿದ್ದುಕೊಂಡು ಮನುಷ್ಯ ಸ್ವಭಾವವು ಸಹಿಸುವುದು ಕಮ್ಮ, (ಬಿರುಗಾಳಿ ಮಳೆ ಹೊಡೆಯುವುದು.)