AY
ಹೇಮಚಂದ್ರರಾಜ ವಿಲಾಸ [೩ನೇ ಅಂಕ ಹೋಗು, ದೇವರ ಧ್ಯಾನವನ್ನು ಮಾಡಿ ತರುವಾಯು ಮಲಗಿಕೊಳ್ಳುತ್ತೇನೆ. (ವಿದೂಷಕ ಒಳಕ್ಕೆ ಹೋಗುವನು) ಅಯ್ಯೋ ! ಬಟ್ಟೆಗೆ ಗತಿಯಿಲ್ಲದೆ ಯಿರುವ ನಿರ್ಭಾಗ್ಯರಾದ ದರಿದ್ರರಾ, ನಿರ್ದಯವುಳ್ಳ ಈ ಗಾಳಿ ಮಳೆಯ ಎಸಗೆಗೆ ಸಿಕ್ಕಿ ನೀವು ಎಲ್ಲಿದ್ದರೂ ಸರಿಯೇ ಮರೆಯಿಲ್ಲದೆ ನಿಮ್ಮ ತಲೆಯ ಅನ್ನವಿಲ್ಲದ ನಿಮ್ಮ ಹೊಟ್ಟೆ ಹ ಚಿಂದಿಚಿಂದಿಯಾದ ನಿಮ್ಮ ಬಟ್ಟೆಯೂ ಇಂಥಾ ಅವಾಂತರದ ದೆಸೆಯಿಂದ ಹ್ಯಾಗೆತಾನೇ ಕಾಪಾಡಿಯಾವು ? ನಾನಾದರೋ ಈ ವಿಷಯದಲ್ಲಿ ಉದಾಸೀನನಾ ಗಿದ್ದೆ. ಎಲ ಡಂಭವೆ, ಔಷಧನನ್ನು ತೆಗೆದುಕೊ, ನಿರ್ಭಾಗ್ಯರು ಅನುಭವಿಸತ ಕದ್ದನ್ನೆಲ್ಲಾ ನೀನು ಅನುಭವಿಸಿ ನಿನಗಾಗಿ ಮಿಕ್ಕ ಐಕ್ಷರವನ್ನು ಅವರಿಗೋ ಸ್ಪರ ಒದರಿಬಿಟ್ಟು ದೇವರು ಬಹಳ ನ್ಯಾಯವಂತನೆಂದು ತೋರ್ಪಡಿಸು. ಕುಕ್ಷ ಚಂದ)-( ಒಳಗೆ ) ಒಂದೂವರೆ ಯಾಳುದ್ದಾ, ಬಂದೂವರೆಯಾಳದ್ದ! ಅಯ್ಯೋ, ರಾಮಜೋಗಿ ! (ವಿದೂಷಕ ಗುಹೆಯಿಂದೀಚೆಗೆ ಓಡಿಬರುವನು.) ವಿದೂ.-ಮಾವ ಒಳಕ್ಕೆ ಬರಬೇಡ, ಇಲ್ಲಿ ಪಿಶಾಚಿ ಇದೆ. ಅಯ್ಯೋ, ಇನ್ನೇನುಗತಿ ! ನಿಮ್ಮಂಟಕ-ನಿನ್ನ ಕೈ ಕೊಡು ಯಾರದು ? ವಿದೂ.ಪಿಶಾಚಿ, ಪಿಶಾಚಿ, ತನ್ನ ಹೆಸರು ರಾಮಜೋಗಿ ಎನ್ನು ವುದು. ನಿಷ್ಕಂಟಕ-ಆ ಹುಲ್ಲಿನಲ್ಲಿ ಗೊಣಗುಟ್ಟುತಿದೀಯಲ್ಲಾ, ನೀನು ಯಾರು, ನೀನೇನು ? ಬಾ ಈಚೆಗೆ, ಪ್ರವೇಶ ಶುಕ್ಷ ಚಂದ, ಹುಚ್ಚನ ವೇಷದಲ್ಲಿ, ಶುದೂರಾ ಇರಿ, ನನ್ನ ಹಿಂದೆ ಪಿಶಾಚಿ ಬರುತಿದೆ. ಗಾಳಿ ತಣ್ಣಗೆ ಬೀಗುತಿದೆ ಹಂ! ನಿನ್ನ ತಂಣನಾದ ಹಾಸಿಗೆಗೆ ಹೋಗಿ, ಬೆಚ್ಚಗೆ ಮಾಡಿಕೊ. ದೊರೆ. ನಿನಗೆ ಇದ್ದದ್ದನ್ನೆಲ್ಲಾ ನಿನ್ನ ಇಬ್ಬರು ಹೆಮ್ಮಕ್ಕಳಿಗೆ ಕೊಟ್ಟು ನೀನು ಈ ಸ್ಥಿತಿಗೆ ಬಂದೆ ? : ಶುಕ್ಷ್ಯ-ರಾಮಜೋಗಿಗೆ ಯಾರು ಯೇನನ್ನು ಕೊಡುತ್ತಾರೆ ? ಈ ಹಾಳ ಪಿಶಾಚಿಯು ಅವನನ್ನು ಬೆಂಕಿಯಮೇಲೆ ನಡಿಸಿ, ಉರಿಯೊಳಗೆ ನುಗ್ಗಿಸಿ, ಹೊಳೆಯಲ್ಲಿ ತಳ್ಳಿ, ಮಡುವಿನಲ್ಲಿ ಮುಳುಗಿಸಿ, ಜೋರೇಮೇಲೆ ನಡಿಸಿ, ಚೂರಿಯನ್ನು ಅವನ ತಲೆ ದಿಂಬಿನ ಕೆಳಗಿಟ್ಟು, ಅವನ ಆಸನದಮೇಲೆ ಮುಳ್ಳ ನೆಟ್ಟು, ಅವನ ಎಡೆಯ ಹತ್ತರ ಪಾಪ್ರಾಣವನ್ನು ಹಾಕಿ, ಅವನ ನೆರಳನ್ನು ಕಂಡರೆ ಅವನು ಹೆದರುವ ಹಾಗೆ ಮಾಡಿ, ಇಲ್ಲಾ ಮಾಡಿತು. ಅಯ್ಯೋ ರಾಮಜೋಗಿಗೆ ಛಳಿ, ತೋಂ ! ನಾನನ, ನಾನನ, ನಾನನನ, ಬಿರುಗಾಳಿ, ಗ್ರಹಗಳ ಕೂರದೃಷ್ಟಿ, ರೋಗ, ಯಾ ವುದೂ ಪೀಡಿಸದಂತೆ ಮಾಡಿ, ಅಯ್ಯೋ ! ಪಿಶಾಚ ಪೀಡಿತನಾದ ರಾಮಜೋಗಿಗೆ ಧನ್ಮಾಮಾಡಿರಪ್ಪಾ ! ಅಗೋ ಅಲ್ಲಿ ಬರುತಾ ಇದೆ, ಬಂತಾ, ಬಂತು, ಅಲ್ಲಿ, ಅಲ್ಲಿ (ಬಿರುಗಾಳಿ ಹೊಡೆಯುವುದು.)