LY ಆನೇ ಕಕರಣ.] ಹೇಮಚಂದ್ರರಾಜ ವಿಲಾಸ. ದೊರೆ-ಏನು, ಇವನ ಹೆಮ್ಮಕ್ಕಳು ಇವನನ್ನು 'ಈ ಗತಿಗೆ ತಂದರೆ ? ನೀನೇನೂ ಉಳಿ ಸಿಕೊಳ್ಳಲಿಲ್ಲವೆ ? ಎಲ್ಲಾ ಕೊಟ್ಟುಬಿಟ್ಟೆಯ ? ವಿದ.-ಇಲ್ಲ, ಒಂದು ಕಂಬಳಿ ಮಾತ್ರ ಉಳಿಸಿಕೊಂಡ. ಇಲ್ಲದಿದ್ದರೆ ನಾವೆಲ್ಲಾ ನಾಚಿಕೊಂಡು ಹೋಗಬೇಕಾಗುತಿತ್ತು. ದೊರೆ. ಈ ಬ್ರಹಾಂಡ ಕಟಾಹದಲ್ಲಿ ಜನರ ದುರ್ನಿತಿಗೆ ತಗಲಲೇಬೇಕೆಂದಿರುವ ಮಹಾ ವಿಪತ್ತುಗಳಲ್ಲಾ ನಿನ್ನ ಹೆಮ್ಮಕ್ಕಳಿಗೆ ತಟ್ಟಬಾರದೆ ! ನಿಷ್ಕಂಟಕ.-ಸ್ವಾಮಿ ಆತನಿಗೆ ಹೆಮ್ಮಕ್ಕಳಿಲ್ಲ. ದೊರೆ -ಕಾರುಣ್ಯ ಶೂನ್ಯರಾದ ಪುತ್ರಿಯರು ಹೊರತು ಮತ್ತೆ ಯಾರೂ ಇಂಥಾ ಹೀನ ಸ್ಥಿತಿಗೆ ತರಲಾರರು. ಆಚೆಗೆ ತಳ್ಳಲ್ಪಟ್ಟ ತಂದೆಗಳು ತಮ್ಮ ಶರೀರದಮೇಲೆ ಇಷ್ಟು ಕೊಂಚವಾಗಿ ಅಭಿಮಾನವನ್ನಿಟ್ಟುಕೊಂಡಿರಬೇಕೆಂಬುವುದೇನು ಪದ್ಯ ತಿಯೋ ? ಒಳ್ಳೇ ಶಿಕ್ಷೆ ! ತಾಯ ಹೊಟ್ಟೆಯನ್ನು ಬಗೆದು ತಿನ್ನು ವಶಕ್ತಿ ವಿಶೇ ಪ್ರಗಳಿಗೆ ಸಮನಾದ ಹೆಮ್ಮಕ್ಕಳನ್ನು ಸೃಷ್ಟಿಸಿದ ದೇಹವಲ್ಲವೇ ಇದು ? ಕುತಾ ಹು ಹೊ ಟೈ, ತಾಯ ಹೊ ಟೈ, ಹ ಹ ಹ ಹು ಹೆ ಹು ಹೆ. ವಿದೂ.-ಈ ರಾತ್ರೆ ಛಳಿಯು ನಮ್ಮೆಲ್ಲರಿಗೂ ಹುಚ್ಚ ಹಿಡಿಸುವದು. ಕು-ಅಯ್ಯೋ, ಪಿಶಾಚಿ ಬಂತು, ಜಾಗ್ರತೆಯಾಗಿರು. ತಂದೆ ತಾಯಿಗಳು ಹೇಳಿದ ಹಾಗೆ ಕೇಳು, ನ್ಯಾಯವಾಗಿ ನಿನ್ನ ಮಾತಿಗೆ ತಪ್ಪಬೇಡ, ಆನ್ ಇಟ್ಟುಕೊಳ್ಳ ಬೇಡ, ಅಗ್ನಿ ಸಾಕ್ಷಿಯಾಗಿ ಮದುವೆಯಾದವನ ಹೆಂಡತೀ ಸಂಗಬೇಡ, ನಿನ್ನ ಹೆಂಡ ತಿಗೆ ಪ್ರತಿಷ್ಮೆ ಕಲಿಸಬೇಡ, ಓ ! ರಾಮಜೋಗಿಗೆ ಸೊಳಿಸಿ ಸೊಳಿ! ಧೋರೆ.-ನೀನು ಪೂರದಲ್ಲಿ ಏನಾಗಿದ್ದೆಯಾ ? ಕುಕ್ಷ್ಯ-ಚಾಕರೀ ಆಳಾಗಿದ್ದೆ, ಅತಿಯಾಗಿ ಹೆಮ್ಮೆಪಡುತಿದ್ದೆ, ಜಲುಪಿಬಿಡಿಸಿಕೊಂಡಿದ್ದೆ ತಲೆಗೆ ಕುಚ್ಚಬಿಟ್ಟು ವಸ್ತ್ರವನ್ನು ಸುತ್ತುತಿದ್ದೆ, ಮಾತು ಮಾತಿಗೂ ಆಣೇ ಇಟ್ಟುಕೊಂಡು ಅದಕ್ಕೆ ತಪ್ಪುತಿದ್ದೆ, ಮಲಗುವಾಗಲೂ ಎದ್ದ ಮೇಲೆಯೂ ಮದಾಂ - ಧನಾಗಿಯೇ ಇರುತಿದ್ದ, ಹೆಂಡದಲ್ಲಿ ತುಂಬಾ ಆಸೆ, ಪಗಡೆಯಲ್ಲಿ ಅತಿಪ್ರೀತಿ, ಸ್ತ್ರೀ ವಿಷಯದಲ್ಲಿ ಮಿತಿಮೀರಿದ ಆಸಕ್ತಿ ; ಮನಸ್ರೋ ಎರಡು ಬಗೆಯುವುದು, ಕಿವಿಯೋ ಹಿತ್ತಾಳೆ, ಕೈಯ್ಯೋ ಕೊಲೆಯಿಂದ ರಕ್ತಮಯ ; ಪಾಲುದಾರಿಕೆಯಲ್ಲಿ ಹಂದಿ, ಕಳ್ಳತನದಲ್ಲಿ ನರಿ, ಬೀಳಬಡಿಯುವುದರಲ್ಲಿ ಸಿಂಹ, ಹೊಟ್ಟೆ ಬಾಕತನದಲ್ಲಿ ತೋಳ, ಹುಚ್ಚುತನದಲ್ಲಿ ನಾಯಿ, ಇದೆಲ್ಲಾ ಆಗಿದ್ದೆ, ಚಪಲವಾಗಿ ತಿರುಗುವ ಕಣ್ಣ ಹೆಳವ ಪಳಪಳನೆ ತಳತಳಿಸುವ ದಂತಗಳ ಕಾಂತಿಯ ನಿನ್ನನ್ನು ಸ್ತ್ರೀ ನಕ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೭೮
ಗೋಚರ