L ಹೇಮಚಂದ್ರರಾಜ ವಿಲಾಸ. [4ನೇ ಅಂಕ ಮಾಡದಿರಲಿ, ಆ ಚಂಡಾಲ ಪಿಶಾಚಿಯನ್ನು ದೀಕರಿಸು, ಹ ಹ ಹ ಹ ಹಾ ಹಿ ಹಿ ಹಿ ಹಿ ಹೀ ಹು ಹು ಹು ಹು ಹೂ. (ಬಿರುಗಾಳಿ ಬೀಸುತಿರುವುದು.) ದೊರೆ-ಹೀಗೆ ಬರಿಮೈಲಿದ್ದು ನಡುಗುವುದಕ್ಕಿಂತ ನೀನು ಸಮಾಧಿಯಲ್ಲಿದ್ದರೆ ಚೆನ್ನಾ ಗಿರುತಿದ್ದೆ ಮೈ, ಮನುಷ್ಯ ಎನ್ನುವುದು ಇಷ್ಮೆಯೆ ? ಅವನ ಸ್ಥಿತಿಯನ್ನು ಚೆನ್ನಾಗಿ ಯೋಚಿಸು. ನೀನು ಹುಳುವಿನಿಂದ ರೇಷ್ಮೆ ತೆಗೆದುಕೊಂಡವನಲ್ಲ, ಮೃಗದಿಂದ ಚಕ್ಕಳಾ ತೆಗೆದುಕೊಂಡವನಲ್ಲ, ಕುರಿಯಿಂದ ತುಲಟ ತೆಗೆದುಕೊಂಡ ವನಲ್ಲ, ಪ್ರಣುಗಿನ ಬೆಕ್ಕಿನಿಂದ ವಾಸನೆಯನ್ನು ಗ್ರಹಿಸಿದವನಲ್ಲ, ನಾವು [ಮೂರು ಜನವೂ ವಸ್ತ್ರ ದಿಂದ ಕೂಡಿದವರು, ನೀನು ಬೆರೆಕೆಯಿಲ್ಲದ ಅಪುಟ. ಬರೀ ಮೈಲಿರತಕ್ಕೆ ಪುರುಷನು ನಿನಂಥಾ ಎರಡು ಕಾಲಿನ ಮೃಗವೇ ಸರಿ. ಹೋಗು. ಆಚೆಗೆ ಹೋಗು, ಹಾಳ ಬಟ್ಟೆಯೆ ? ಬಾ, ಈ ಕಥೆಯನ್ನು ಬಿಚ್ಚು, ತನ್ನ ಬಟ್ಟೆಯನ್ನು ಹರಿಯುತ್ತಾ ವಿದೂ-ಮಾವ, ಸಹಿಸಿಕೊ. ಈ ರಾತ್ರೆಯನ್ನು ಈಜುವುದು 'ಕಮ್ಮ, ಇಲ್ಲಿ ನೋಡು, ನಡೆಯುವ ಬೆಂಕಿ ಬರುತಾ ಇದೆ. (ದುಃಖಸಾರ ಬಂದು ದೀವಟಿಗೆಯನ್ನು ಹಿಡಿದು ಕೊಂಡು ಬರುವನು.) ಶು-ಇದೇ ಆ ಕೆಟ್ಟ ಕೊಳ್ಳೇಬೈಲು, ರಾತ್ರಿ ಎಂಟುಗಂಟೆಗೆ ಮೊದಲು ಮಾಡಿ * ಮೊದಲು ಕೋಳಿ ಕೂಗುವತನಕ.'ಕುಣಿಯುತ್ತೆ, ಪೀನಸೆ ತರುತ್ತೆ, ಉರಿಗಣ್ಣು ಮಾಡುತ್ತೆ. ಸಿರವಾಯಿ ಮಾಡುತ್ತೆ. ಪೈರಿಗೆಲ್ಲಾ ರೋಗಾತರುತ್ತೆ. ನಿಮ್ಮಂಟಕ-ಮಹಾಸ್ವಾಮಿ ಹ್ಯಾಗಿದೀರಿ ? ಧೋಗೆ.-ಅವ ಯಾರು ? ನಿಷ್ಪಂಚಕ ಅವ ಯಾರು ಅಲ್ಲಿ ? ಏನನ್ನು ಹುಡುಕಿಕೊಂಡುಬಂದೆ ? ದುಃಖ-ನೀವು ಯಾರು, ಅಲ್ಲಿ ? ನಿಮ್ಮ ಹೆಸರೇನು ? ಶುಕ್ರ-ಕಪ್ಪೆಯು ತಿನ್ನುವೆ ನಿಲಿಗಳ | ತಪ್ಪದೆ ನುಂಗುವೆ ನನಿಶಂ ನೊಣವಂ ಮೆಲ್ಲುವೆ | ಕುಪ್ಪುಸ ಗಳಯದ ಚಿಟ್ಟೆಯ | ನೂರಾರ ನಗಿವೆನಾಂ | ಜೋ ! ರಾಮಜೋಗಿ ಯೋ ರಾಮಜೋಗಿ ! ದುಃಖ. ಅಯ್ಯೋ ! ಮಹಾಸ್ವಾಮಿ, ತಮಗೆ ಇದಕ್ಕಿಂತಲೂ ಉತ್ತಮವಾದ ಸಹವಾಸ ದೊರೆಯಲಿಲ್ಲವೆ ? ಶುಕ್-ಬ್ರಹ್ಮನು ನೀಚನು ಪಾಂಚಾಲುತ್ತಮ ತಿಳಿಯಿತು ನಿಮ್ಮಯಜ್ಞಾನಾ. ದುಃಖ,-ನಮ್ಮ ಮಕ್ಕಳೇ ನಮ್ಮಮೇಲೆ ಕತ್ತೀಕಟ್ಟಿದರು, ಸ್ವಾಮಿ, ಶುಕ್-ಅಯ್ಯೋ ! ರಾಮಜೋಗಿಗೆ ಸೊಳೆದು, ಸೊಳಿ !
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೭೯
ಗೋಚರ