ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬v Ly ಹೇಮಚಂದ್ರರಾಜ ವಿಲಾಸ [೩ನೇ ಅಂಕ ದುಃಖ-ಗುಹೆಯೊಳಕ್ಕೆ ನೀನೂ ನಡೆ, ಮೈಬೆಚ್ಚಿಗೆ ಮಾಡಿಕೊ. ಧೋರೆ.--ಬನ್ನಿ, ನಾವೆಲ್ಲರೂ ಒಳಕ್ಕೆ ಹೋಗೋಣ. ನಿಷ್ಕಂಟಕ-ಈ ದಾರಿಯಲ್ಲಿ ದಯಮಾಡಿಸಬೇಕು, ನನ್ನೊಡೆಯ. ಧೋರೆ.-ನಾನು ಆತನ ಸಂಗಡ ; ನಮ್ಮ ಭಟ್ಟಾಚಾರನ ಸಂಗಡಲೇ ನಾನು ಇರ ತಕ್ಕವನು. ನಿಷ್ಕಂಟಕ-(ದುಃಖಸಾರನನ್ನು ಕುರಿತು ಸ್ವಾಮಿ ತಾವು ಅವರನ್ನು ಸಮಾಧಾನ ಮಾಡಿ, ಅವನನೂ ಒಳಗೆ ಕರೆದುಕೊಂಡು ಹೋಗಲಿ. ದುಃಖ ಪ್ರಭುವೆ, ಅವನನ್ನೂ ಜೊತೆಯಲ್ಲಿ ಕರೆದುಕೊಂಡು ದಯಮಾಡಿಸ ಬಹುದು, ನಿಷ್ಕಂಟಕ.ಬಾರೆಲಾ ನೀನೂ, ನಮ್ಮ ಸಂಗಡ ನಡೆ. ದೊರೆ-ಅಯ್ಯ ನವದೀಪದ ಪೂಜ್ರರೆ, ದಯಮಾಡಿಸಿ. ದುಃಖ ಮಾತನಾಡಬೇಡ, ಸದ್ದು! ನಡೆ. ಶುಕ-ಮಾತೆ ವಿಷಮಂ ಪೆತ್ತರ್ಭಕಂ ಗೂಡಲು, ದೊರೆ ಕೊಲ್ಲಲೆ ಪರಕಾಯ್ಕನೇ ಹರಹರಾ ಶ್ರೀಚನ್ನ ಸೋಮೇಶ್ವರಾ (ನಿಷ್ಮಣ.) ೫ನೇ ಪ್ರಕರಣ-ದುಃಖಸಾರನ ಭವನ ಪ್ರವೇಶ-ಕುಟಿಲ, ಕುಮಂತ್ರ ಕುಟಿಲ.ಅವನ ಮನೆಯನ್ನು ಬಿಟ್ಟು ಹೊರಟುಹೋಗುವುದರೊಳಗಾಗಿ ಅವನಿಗೆ ಪ್ರತೀಕಾರವನ್ನು ಮಾಡಿಯೇ ಸಿದ್ಧ. ಕುಮ೦ತ್ರ). ಹೀಗೆ ಸ್ವಭಾವವಾದ ಪಿತೃಭಕ್ತಿಯ ರಾಜಭಕ್ತಿಗೆ ಎಡೆಗೊಟ್ಟಿತಲ್ಲಾ! ನನ್ನನ್ನು ಯಾರು ಯೇನೆಂದಾರೆ ಎಂಬದಾಗಿ ಭಯವುಂಟಾಗಿದೆ, ಸ್ವಾಮಿ, ಕುಟಿಲ.ನಿಮ್ಮಂಣನ ಮರಣವನ್ನು ನಿಮ್ಮ ತಂದೆ ಅಪೇಕ್ಷಿಸುವುದಕ್ಕೆ ನಿಮ್ಮಂಣನ ದುರ್ಗುಣ ಬಂದೇ ಕಾರಣವಲ್ಲವೆಂದು ನನಗೆ ಈಗ ತೋರುವುದು. ನಿಮ್ಮ ತಂದೆಯ ದುಸ್ವಾಭಾವದಿಂದ ನಿಮ್ಮಂಣನ ಸುಗುಣವು ಕೆಣಕಲ್ಪಟ್ಟು, ಎದರುಬಿದ್ದು, ಕಾ ರೊದ್ಯೋಗಕ್ಕೆ ಮೊದಲುಮಾಡಿತು. ಕುಮ೦ತ್ರ)-ಅಯ್ಯೋ ! ನಾನ್ನು ನ್ಯಾಯವಾಗಿ ನಡೆದುಕೊಳ್ಳಬೇಕಾಗಿದೆಯಲ್ಲಾ ಎಂದು ನಾನು ಪೇಚಾಡಬೇಕಾಗಿಬಂತಲ್ಲಾ! ನನ್ನ ಅದೃಷ್ಟ್ಯ ಇನ್ನೆಂಥಾ ಕೆಟ್ಟ ದೊ ! ಇಗೊ ಇದೇ ಅವರು ಹೇಳಿದ ಕಾಗದ, ಮರದೇಶಾಧೀಶನಿಗೆ ತಿಳಿದು