೩೩ ಹೇಮಚಂದ್ರರಾಜ ವಿಲಾಸ [೩ನೇ ಅಂಕ ಮನೇಬಾಗಿಲಲ್ಲಿ ಒಂದು ತೋಳಬಂದು ಕೂಗಿದ್ದಾಗ್ಯೂ, ಅದರ ಕೌರವನ್ನು ಮರೆತು ಕನಿಕರದಿಂದ 6 ಎಲೆ, ದ್ವಾರಪಾಲಕನೆ, ಕವಾಟವನ್ನು ತೆಗೆ” ಎಂದು ನೀನು ಹೇಳುತ್ತಿದ್ದೆ. ಅಯ್ಯೋ ದೊರೆಯೆ, ಇದರ ಮುಂದೆ ಉಳಿದ ಕೌರವೆಲ್ಲಾ “ ಕೌರವಲ್ಲ. ಇಂಥಾ ಹಾಳಮಕ್ಕಳಿಗೆ ತಕ್ಕ ಪ್ರಾಯಶ್ಚಿತ್ತವು ಜಾಗ್ರತೆಯಲ್ಲಿ ಆಗುವುದನ್ನು ನಾನು ನೋಡಿಯೇನು. ಕುಟಿಲ.ನೀನು ಅಂಥಾದ್ದನ್ನು ಎಂದಿಗೂ ನೋಡದಂತೆ ಮಾಡುತ್ತೇನೆ. ಎಲಾ, ಮಂಚ ವನ್ನು ಹಿಡಿದುಕೊಳ್ಳಿರೋ, ಈ ನಿನ್ನ ಹಾಳಕಂಣುಗಳ ಮೇಲೆ ಒದೆಯುತ್ತೇನೆ, ಬಾ ಮುದಿಗೂಭೆ. ದುಃಖ,ಹಾ! ಹಾ! ಮುಪ್ಪಿನತನಕ ಬದುಕಬೇಕೆಂಬ ಆಶೆಯುಳ್ಳ ಮನುಷ್ಯರಾ, ನೀವು ನನಗೆ ಸ್ವಲ್ಪ ಸಹಾಯ ಮಾಡಬಾರದೆ ! ಅಯ್ಯೋ ಕೌರವೇ ! ಅಯ್ಯೋ ದೇವರೇ ! ವಿಸಜೆ.ಬಂದು ಕಂಣು ಇನ್ನೊಂದು ಕಂಣನ್ನು ಅಣಕಿಸುವುದು, ಇನ್ನೊಂದು ಕಂಡೂ ಆಗಲಿ. ಕುಟಿಲ.--ನೀನು ಪ್ರಾಯಶ್ಚಿತ್ತವಾಗುವುದನ್ನು ನೋಡಿದರೆ ೧ನೇ ಭಂಟ ಮಹಾಸ್ವಾಮಿ ತಮ್ಮ ಕೈಯನ್ನು ನಿಲ್ಲಿಸಿ, ನನ್ನ ಬಾಲ್ಯದಿಂದಲೂ ತಮ್ಮ ಸೇವೆಯನ್ನು ಮಾಡಿದ್ದೇನೆ. ಆದರೆ ಈಗ ತಮ್ಮ ಕೈಯನ್ನೂ ನಿಲ್ಲಿಸುವು ದೆಂದು ಹೇಳುವುದಕ್ಕಿಂತಲೂ ವುತ್ತಮವಾದ ಸೇವೆಯನ್ನು ತಮಗೆ ನಾನು ಎಂದಿ ಗೂ ಮಾಡಲಿಲ್ಲ. ವಿಷಜೆ ನೀನು ಯೆನೆಲಾ, ನಾಯಿ ! ೧ನೇ ಭಂಟ..ನಿನಗೆ ಗಡ್ಡವಿದ್ದರೆ, ಈ ಜಗಳದಲ್ಲಿ ಅದನ್ನು ಕಿತ್ತು ಹಾಕಿ ಬೇರೇ ಕೆಲಸ ಮಾಡುತಿದ್ದೆ, ಏನು ಇಂಥಾ ಘಾತುಕತನ ಉಂಟೆ ? ಕುಟಿಲ.-ಎಲ, ಖಳ ! (ಇಬ್ಬರೂ ಕತ್ತಿಯನ್ನು ಹಿರಿದು ಹೊಡೆದಾಡುವರು.) ೧ನೇ ಭಂಟಿ. ಹಾಗಾದರೆ, ಬಾ, ಕೋಪದ ಫಲವನ್ನು ಅನುಭವಿಸು. ವಿಷಜೆ.-ನಿನ್ನ ಕ ತಾ, ಈ ಹಳ್ಳಿಕಾರ ಹೀಗೆ ಎದ್ದು ಕೂತುಕೊಳ್ಳುವುದೆ ! (ಒಂದು ಕತ್ತಿಯನ್ನು ಹಿರಿದು ಹಿಂದುಗಡೆಯಿಂದ ಭಂಟನನ್ನು ತಿವಿಯುವಳು.) ೧ನೇ ಭಂದ. ಅಯ್ಯೋ, ಸತ್ತೆನಲ್ಲಾ ! ಸ್ವಾಮಿ ತಮಗೆ ಇನ್ನೂ ಒಂದು ಕಂಣಿದೆ ; ಇವನಿಗೆ ತಕ್ಕದ್ದಾಗುವುದನ್ನು ತಾವು ನೋಡಬಹುದು. ಓ! (ಸಾಯುತಾನೆ.) ಕುಟಿಲ,ಅಂಥಾದ್ದನ್ನು ಆ ಕಂಣು ಅತಿಯಾಗಿ ನೋಡೀತಲ್ಲಾ ಎಂದು ಅದನ್ನು ಚಿಗಟಹಾಕುತ್ತೇನೆ. ಬಾ, ಬಾ, ಹಾಳ ಗುಡ್ಡೆ ! ನಿನ್ನ ಪ್ರಕಾಶ ಈಗ ಎಲ್ಲಿ ? ದುಃಖ-ಹಾ, ದಿಕ್ಕಿಲ್ಲ: ಲೋಕವೆಲ್ಲಾ ಅಂಧಕಾರವಾಯಿತಲ್ಲಾ ! ಅಯ್ಯೋ, ಮಗು ಕೈ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೮೯
ಗೋಚರ