೭ನೇ ಪ್ರಕರಣ.] | ಹೇಮಚಂದ್ರರಾಜ ವಿಲಾಸ. ೬೬ ಕುಮ೦ತ್ರ ಎಲ್ಲಿದ್ದೀಯಾ ! ಈ ಮಹಾ ಅಸುರ ಕೃತ್ಯಕ್ಕೆ ತಕ್ಕ ಪ್ರತೀಕಾರ ಮಾಡಲು ಸಮಸ್ತ ಅಗ್ನಿಯನ್ನೂ ಜೀಲನಮಾಡ್ಕಯ್ಯಾ ! ಶಿವಶಿವಾ ! ವಿರಜೆ-, ನಡೆ ಆಚೆಗೆ ದ್ರೋಹಿ, ನಿನ್ನ ಮೇಲೆ ದ್ವೇಪ್ರಮಾಡತಕ್ಕವನನ್ನು ಕರೆದು ತೀಯೆ. ನೀನು ಮಾಡಿದ ದೊಹನನ್ನು ಆತನೇ ನನಗೆ ಹೇಳಿದವನು, ಅಂಥಾ ಸಜ್ಜನನು ನಿನ್ನಲ್ಲಿ ಕನಿಕರವನ್ನು ಕೂಡಾ ಇಟ್ಟುಕೊಂಡಿರಕೂಡದು, ದುಃಖ-ಅಯ್ಯೋ, ನನ್ನ ಅವಿವೇಕವೇ! ಹಾಗಾದರೆ ಶುಕ್ಲಚಂದ್ರನಿಗೆ ಅನ್ಯಾಯವಾ ಯಿತು. ದೇವರೆ ನನ್ನ ಅಪರಾಧವನ್ನು ಕ್ಷಮಿಸಿ ಅವನನ್ನು ಕಾಪಾಡು. ವಿಗ್ರಜೆ.ಇವನನ್ನು ಬಾಗಿಲಿನಿಂದ ಆಚೆಗೆ ನೂಕಿಬಿಡಿ. ಇವ ದಾರಿಯನ್ನು ಕಂಣಿ ನಿಂದ ನೋಡಿಕೊಂಡು ಹೋಗುವುದಕ್ಕಿಲ್ಲವಾಗಿ, ದಾರಿಯನ್ನು ಮೂಸಿನೋಡಿ ಕೊಂಡು ಹೋಗಲಿ. (ದುಃಖಸಾರನನ್ನು ಆಚೆಗೆ ಎಳೆದುಕೊಂಡು ಹೋಗುವರು.) ಸ್ವಾಮಿ, ತಾವು ಹ್ಯಾಗಿದೀರಿ. ಕುಟಿಲ.ನನಗೆ ಗಾಯವಾಗಿದೆ, ಬಾ ಹೋಗೋಣ. ಈ ಕಂಣಿಲ್ಲದ ಚಂಡಾಲ ನನ್ನು ಹೊರಕ್ಕೆ ತಳ್ಳಿಸಿ ಬಿಡು, ಈ ಗುಲಾಮನನ್ನು ತಿಪ್ಪೆಮೇಲಕ್ಕೆ ಎಳೆದು ಬಿಡಿ, ರಕ್ತವೇನೋ ಸುರಿಯುತ್ತಿದೆ. ಒಳ್ಳೆ ಸಮಯದಲ್ಲಿ ಈ ಗಾಯ ಪ್ರಾಪ್ತವಾ ಯಿತಲ್ಲಾ ! ಪ್ರಿಯಳೆ, ನನ್ನ ಕೈಯನ್ನು ಹಿಡಿದುಕೊ. (ವಿಪ್ರಜೆ ಕುಟಿಲನ ಕೈಹಿಡಿದು ಕರೆದುಕೊಂಡು ಹೋಗುವಳು.) ೦ನೇ ಭಂಟಈ ಮನುಷ್ಯನಿಗೆ ಗುಣವಾದರೆ, ನಾನು ಯಾವ ಕೆಟ್ಟ ಕೆಲಸವನ್ನು ಮಾಡುವುದಕ್ಕೆ ತಾನೆ ಹಿಂತೆಗೆದೇನು ? ೩ನೇ ಭಂಟ,ಇವಳು ಬಹಳ ದಿವಸ ಬದುಕಿದ್ದು ತರುವಾಯ ಸತ್ತರೆ, ಹೆಂಗಸರೆ ಲ್ಲರೂ ತಾಟಕಿಯ ಅವತಾರಗಳೇ ಅಗುವರು. ೨ನೇ ಭಂಟಈ ಮುಪ್ಪಿನ ಮಂತ್ರಿಯ ಹಿಂದೆ ಹೋಗಿ, ಬೇಕಾದಕಡೆಗೆ ಕರೆ ದುಕೊಂಡು ಹೋಗಪ್ಪ ಎಂದು ಆ ಜೋಗಿಗಾದರೂ ಹೇಳೋಣ. ಅವನ ಹುಚ್ಚು ಯಾತಕ್ಕೆಂದರೆ ಅದಕ್ಕೆ ಅನುಕೂಲಿಸುವುದು, ೩ನೇ ಭಂಟರಕ್ತ ಸುರಿಯುತ್ತಿರುವ ಆ ಮುದುಕನ ಮುಖಕ್ಕೆ ಸವರಲು, ಸ್ವಲ್ಪ ಗಾಯದ ಎಂಣೆಯನ್ನು ತರುತ್ತೇನೆ. ನೀನು ನಡೆ. ಶಿವಶಿವಾ, ಮುದುಕನಿಗೆ ಈ ಗತಿಬಂತೆ ! ದೇವರೇ ಕಾಪಾಡಬೇಕು, (ನಿಮ್ಮ ಮಣ.)
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೯೦
ಗೋಚರ