ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬v [೪ನೇ ಅಂಕ ಹೇಮಚಂದ್ರರಾಜ ವಿಲಾಸ, ೪ನೇ ಅ೦ಕ, ೧ನೇ ಪ್ರಕರಣ-ತಪ್ಪಲು, ಪ್ರವೇಶ.-ಶುಕ್ಲಚಂದ್ರ ಕುಕೃ.ಬಹಿರಂಗವಾಗಿ ಸ್ತೋತ್ರಮಾಡಲ್ಪಟ್ಟು ಅಂತರಂಗವಾಗಿ ಅಪರಾಧಿಯಂತ ಪರಿಗಣಿಸಲ್ಪಡುವುದಕ್ಕಿಂತಲೂ, ಈ ಸ್ಥಿತಿಯಲ್ಲಿಯೇ ಇದ್ದುಕೊಂಡು, ಬಹಿರಂಗ ವಾಗಿ ಅಪರಾಧಿಯಂತೆ ಪರಿಗಣಿಸಲ್ಪಡುವುದು ಉತ್ತಮ. ಅತ್ಯಂತ ಭಾಗ್ಯಹೀನ ನಾಗಿರುವುದರಲ್ಲಿ, ಇನ್ನೂ ಒಳ್ಳೆಸ್ಥಿತಿಗೆ ಬರಬಹುದೆಂಬ ಆಸೆ ಇರುವುದೇ ಹೊರತು ಇದ್ದದ್ದು ಕೆಟ್ಟಿತಲ್ಲಾ ಎಂಬ ಭಯವೇನೂ ಇಲ್ಲ. ಯಾವ ಸ್ಥಿತಿಯಾದರೂ ಬದಲಾಯಿಸುವುದರಿಂದ ದುಃಖವೇ ಉಂಟಾಗುತ್ತಿದ್ದರೆ, ಅದು ಉತ್ತಮವಾದ ಸ್ಥಿತಿಯೇ ಸರಿ. ಅತ್ಯಂತ ಹೀನಸ್ಥಿತಿಯು ಆನಂದಕ್ಕೆ ತಿರುಗಿಕೊಳ್ಳುವುದು, ಹಾಗಾದರೆ, ನನ್ನ ಮೇಲೆ ತೀಡುತ್ತಿರುವ ವಾಯುವೇ, ನೀನೇ ನನ್ನ ಭಾಗಕ್ಕೆ ಉತ್ತಮ ; ಅತ್ಯಂತ ಹೀನಸ್ಥಿತಿಗೆ ನೀನು ತೂರಿಬಿಟ್ಟಂಥಾ ಆ ಪಾಪಿಯು ನೀನು ಬಡಿಯುವ ಬಿರಿಸಿಗೆ ಲಕ್ಷ್ಯಮಾಡಬೇಕಾದ್ದೇನೂ ಇಲ್ಲ. ಹೋ, ಇದು ಯಾರು ಇಲ್ಲಿ ಬರತಕ್ಕವರು, (ದುಃಖಸಾರನನ್ನು ಒಬ್ಬ ಮುದುಕ ಕೈಹಿಡಿದು, ಕರೆ ತರುವನು) ಹ ! ನಮ್ಮ ತಂದೆಯ ? ಪರಿವಾರ ಸಂಪತ್ತು ಏನೂ ಇಲ್ಲದೆ ಬರು ತಾನೆ ! ಪ್ರಪಂಚವೇ ಪ್ರಪಂಚವೇ ಹಾಳ ಪ್ರಪಂಚವೇ ! ನಿನ್ನಲ್ಲಿರತಕ್ಕ ವಿಚಿತ್ರ ವಾದ ಕಪ್ನಗಳಿಗಾಗಿ ನಿನ್ನಲ್ಲಿ ನಮಗೆ ದ್ವೇಷವೇ ಹೊರತು, ಮತ್ತೇನೂ ಇಲ್ಲ. ಹಾಗಿಲ್ಲದಿದ್ದರೆ, ವಾರ್ಧಿಕ್ಯದ ಶ್ರಮವನ್ನೂ ಲಕ್ಷ್ಯಮಾಡದೆ ಎಷ್ಟು ದಿವಸವಾ ದರೂ ಬದುಕಿರಬೇಕೆಂದು ಆಶೆ ಇರುತಿತ್ತು, ಮುದುಕ-ಬುದ್ದಿ, ಈ ನಾಲ್ಲಿ ಸ್ವತ್ತು ವರುಷದಿಂದಲೂ ತಮ್ಮಲ್ಲಿಯೂ ತಮ್ಮ ತಂದೆ ಗಳಲ್ಲಿ ಆಶ್ರಿತನಾಗಿ ಆರಂಬಮಾಡಿಕೊಂಡಿದ್ದೇನೆ. ದುಃಖ,ಎಲ, ಹೋಗು,ಹೋಗು, ನೀನು ಹೊರಟು ಹೋಗೈಯ ಹೊರಟು ಹೋಗು. ನೀನು ಮಾಡತಕ್ಕ ಉಪಚಾರ ನನಗೇನೂ ಸಖ್ಯವನ್ನುಂಟುಮಾಡಲಾರದು; ಅದಕ್ಕೆ ಬದಲಾಗಿ ನಿನಗೆ ಕಷ್ಟ್ಯವನ್ನು ಉಂಟುಮಾಡಿದರೂ ಮಾಡಬಹುದು, ಮುದುಕ.-ಅಕಟ, ಬುದ್ದಿ, ತಮಗೆ ದಾರಿ ಕಾಣಿಸುವುದಿಲ್ಲವಲ್ಲಾ. ದುಃಖ-ನನಗೆ ದಾರಿಯೇ ಇಲ್ಲ, ಆದ್ದರಿಂದ ಇನ್ನು ಕಂಣು ಯಾತಕ್ಕೆ ? ಕಂಣು ಕಾಣುತಿದ್ದಾಗ ಕಾಣದೇ ಎಡವಿಬಿದ್ದೆ. ನನಗಿರತಕ್ಕ ಉಪಪತ್ತಿಯೇ ನಮ್ಮಲ್ಲಿ ಅಜಾಗರೂಕತೆಯನ್ನು ಹುಟ್ಟಿಸುವುದು, ನಮ್ಮ ಪ್ರತಿಕೂಲಗಳೇ ನಮಗೆ ಅನು ಕೂಲವಾಗಿ ಪರಿಣಾಮ ಹೊಂದುವವು. ಹಾ, ಮಗನೆ, ಶುಕ್ಲಚಂದ್ರಾ, ಮೋಸ