V* ಹೇಮಚಂದ್ರರಾಜ ವಿಲಾಸ [೪ನೇ ಅಂಕ. ರಲ್ಲವೆ. ಆಕೆಯ ಮಂದಹಾಸವೂ ಕಂಬನಗಳೂ ಇನ್ನೂ ವಿಶೇಷವಾದ ಸಾಂದರ್ ವನ್ನು ಪ್ರಕಾಶಮಾಡಿದವು. ಆ ಸುಂದರವಾದ ತುಟಿಗಳಮೇಲೆ ಆಡುತಿದ್ದ ಸುಖ ತರವಾದ ಮಂದಹಾಸವು ಆಕೆಯ ಕಂಣಿನಲ್ಲಿ ಬಂದಿರುವ ಅತಿಥಿಗಳನ್ನು ಅರಿ ಯದೇ ಇದ್ದವು. ಕಣ್ಣಿನಿಂದ ಬೀಳುವ ಎಟ್ಟುಗಳು ವಜ್ರಗಳಿಗೆ ಕಟ್ಟಿದ ಮುತ್ತಿನಸರಗಳೇ ಎನ್ನುವ ಹಾಗೆ ಕಾಣಿಸಿದವು. ಮುಖ್ಯವಾಗಿ ವ್ಯಸನವನ್ನು ಎಲ್ಲರೂ ಹಾಗೆ ಸಹಿಸಿಕೊಂಡರೆ, ಲೋಕದಲ್ಲಿ ವ್ಯಸನವು ಎಲ್ಲರಿಗೂ ಬೇಕಾದ ವಸ್ತುವಾಗುವುದು. ನಿಂದಕ -ಬಾಯಿಮಾತಿನಲ್ಲಿ ಏನನ್ನೂ ಕೇಳಲಿಲ್ಲವೆ ? ದೊಡ್ಡಸ್ವಾಮಿ, ಒಂದೆರಡು ಸಾರಿ “ ತಂದೆಯೇ” ಎಂದು ನಿಟ್ಟುಸಿರಬಿಟ್ಟು ಆ - ಮಾತು ತನ್ನ ಹೃದಯವನ್ನು ಒತ್ತುತಿದೆಯೋ ಎನ್ನುವ ಹಾಗೆ ಓದುತ್ತಾ ಏದುತ್ತಾ ಎಂದಳು. ತರುವಾಯ " ಅಯ್ಯೋ ಅಕ್ಕಂದಿರಾ ! ಅಕ್ಕಂದಿರಾ ! ಹೇಣುಜನ್ಮಕ್ಕೆ ಹೀನಾಯವಾದಿರಾ ! ಅಯ್ಯೋ ನಿಷ್ಕಂಟಕನೆ, ಅಪ್ಪಾಜಿ ! ಹಾಳ ಅಕ್ಕಂದಿರಾ ! ಆ ವಿಪರೀತವಾದ ಮಳೆಗಾಳಿ ಹೊಡೆಯುತ್ತಿರುವಾಗಲೇ ? ಆ ಮಹಾನಿಕೆಯಲ್ಲಿಯೇ ? ದಯಾರಸವೆನ್ನುವುದು ಇದೆ ಎಂದು ನಾನು ನಂಬುವುದಿಲ್ಲ ! ” ಹೀಗೆಲ್ಲಾ ಹೇಳಿ ಕೊಂಡು ಆಕೆ ಪ್ರಳಾಪಿಸಿದಳು. ನೇತ್ರಕಮಲದಿಂದ ಮಕರಂದವನ್ನು ಸುರಿಸಿ ದಳು. ಆಗೋಳಿನಲ್ಲಿ ಮೈಯೆಲ್ಲಾ ತೇವವಾಯಿತು. ಆ ಮೇಲೆ ತಾನು ಏಕಾಂ ತವಾಗಿ ದುಃಖಪಡಲು ಹೊರಟು ಹೋದಳು. ನಿಪ್ಪಂದಕ.-ಇದೆಲ್ಲಾ ಆ ಗ್ರಹಗತಿಗಳಿಂದಲೇ ಉಂಟಾಗತಕ್ಕದ್ದು. ಹಾಗಿಲ್ಲದಿದ್ದರೆ ಪರಸ್ಪರ ಸಂಬಂಧವಿಲ್ಲದಂಥಾ ಗುಣಗಳುಳ್ಳ ಮಕ್ಕಳು ಒಂದೇ ಬಸಿರಿನಿಂದ ಹುಟ್ಟು ವುದಿಲ್ಲ. ಅಲ್ಲಿಂದ ಈಚೆಗೆ ನೀನು ಆಕೇ ಸಂಗಡ ಮಾತನಾಡಲಿಲ್ಲವೊ ? ದೊಡ್ಡ.-ಇಲ್ಲ ಸ್ವಾಮಿ. ನಿಷ್ಕಂಟಕ-ಇದು ಮಾರದೇಶಾಧಿಪತಿ ಹಿಂದಕ್ಕೆ ಹೊರಟುಹೋಗುವುದಕ್ಕೆ ಮುಂ ಚೆಯೇ, ನಡೆದದ್ದು ? ದೊಡ್ಡ-ಇಲ್ಲ, ಈಚೆಗೆ. ನಿಂದಕ-ಬಹು ಕಣ್ಮಕ್ಕೆ ಗುರಿಯಾದ ಹೇಮಚಂದ್ರರಾಜರು ಈ ಪಟ್ಟಣದಲ್ಲಿ `ದಾರೆ. ಸ್ವಲ್ಪ ಜ್ಞಾನಸರಿಯಾಗಿದ್ದಾಗ ನಾವು ಇಲ್ಲಿಗೆ ಬಂದಕಾರವನ್ನು ತಿಳಿದುಕೊ ೪ುತಾರೆ. ಆದರೆ ಏನಾದರೂ ಆಗಲಿ ತನ್ನ ಮಗಳನ್ನು ನೋಡುವುದಿಲ್ಲವೆಂದು ಹರಹಿಡಿದಿದ್ದಾರೆ. ದೊಡ್ಡ-ಯಾಕೆ ಸ್ವಾಮಿ? ನಿಮ್ಮಂಟಕ.-ವಿಶೇಷವಾದ ನಾಚಿಕೆಯು ಆತನನ್ನು ತಡೆಯುತ್ತಿದೆ. ಆಕೆಯನ್ನು “ನಿರ್ದಯದಿಂದ ಕಂಡದ್ದೂ, ಒಂದು ಆಶೀರ್ವಾದ ವಚನವನ್ನು ಕೂಡ ಹೇಳದೆ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೯೯
ಗೋಚರ