ಪುಟ:ಪ್ರೇಮ ಮಂದಿರ.djvu/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ವಾಗ್ಯೂಷಣ, Aff 1 ವುದು ಯೋಗ್ಯವಲ್ಲವೆಂದು ಆಲೋಚಿಸಿ ಆ ತರುಣಿಯು ಮಾತನಾಡಿದಳು. « ನೀರ ಶ್ರೇಷ್ಠರೇ ! ತಾವು ಈ ದಿನ ನನ್ನ ಮೇಲೆ ಮಾಡಿದ ಉಪಕಾರವನ್ನು ಜನ್ಮ ಜನ್ಮಾಂತರ ದಲ್ಲಿಯೂ ತೀರಿಸುವುದು ಅಸಾಧ್ಯವಾಗಿದೆ. ವೀರೋಚಿತವಾದ ಧರ್ಮದಿಂದ ವರ್ತಿಸಿ ತಾವು ಭಯಂಕರವಾದ ಪ್ರಾಣಸಂಕಟದೊಳಗಿಂದ ನನ್ನನ್ನು ಸಂರಕ್ಷಿಸಿದಿರಿ. ಆದರೆ ನಾನು ಯಾರೆಂಬುದನ್ನು ತಮಗೆ ತಿಳಿಸುವಂತಿಲ್ಲ; ಆದುದರಿಂದ ನನ್ನನ್ನು ಕ್ಷಮಿಸುವುದಾಗ ಬೇಕು. ದಯವಿಟ್ಟು ತಾವು ನನ್ನನ್ನು ಈ ಗುಡ್ಡಗಾಡ ಪ್ರದೇಶದಿಂದ ಆಚೆಗೆ ಕರೆದು ಕೊಂಡು ಹೋಗುವುದಾಗಬೇಕು. ಆ ಮೇಲೆ ನಾನೇ ಹೋಗುವೆನು. ಸಮೀಪದಲ್ಲಿಯೇ ಗ್ರಾಮವಿದೆ; ಅಲ್ಲಿ ಮೇಣೆಯಾಗಲಿ, ಡೋಲಿಯಾಗಲಿ ಸಿಕ್ಕಬಹುದು. ” « ತಮ್ಮ ಅಪೇಕ್ಷೆಯಂತೆಯೇ ಆಗಬಹುದು! ಆದರೆ ತಾವು ಒಬ್ಬರೇ ಇರುವಿರಿ. ಆದುದರಿಂದ ಒಂದು ವೇಳೆ ತಮಗೆ ಪುನಃ ಸಂಕಟವು ಪ್ರಾಪ್ತವಾಗಬಹುದು ? ಮುಗುಳಗೆಯಿಂದ ಆ ರಮಣಿಯು ಮಾತನಾಡಿದಳು, (( ಬಾದಶಹನ ನೂತನ ಸೇನಾಪತಿಗಳ ಖಡ್ಡಧಾರಿಯಾದ ಹಸ್ತವು ದುರ್ಬಲವಾಗಿಲ್ಲವೆಂಬುದು ನನಗೆ ಚೆನ್ನಾಗಿ ಗೊತ್ತು ! ಆದರೆ! ” ನಮ್ಮ ತರುಣಶಿಪಾಯಿಯು ಆ ರಮಣಿಯ ಅತುಲವಾದ ಸೌಂದರ್ಯದಿಂದ ಮೊದಲೇ ದೇಹಭಾವವನ್ನು ಮರೆತಿದ್ದನು. ಈಗ ಅವಳ ಮಂಜುಲವಾದ ಕಂಠಸ್ವರವನ್ನು ಕೇಳಿ ಮಂತ್ರಮೂಢಮನುಷ್ಯನಂತೆ ಸ್ತಬ್ಬನಾದನು ? ಆ ಮೇಲೆ ಏನನ್ನೋ ಜ್ಞಾಪಿಸಿ ಕೊಂಡು ಹಿಂದಕ್ಕೆ ಹೊರಳಿ ನೋಡಿದನು. ಅಲ್ಲೇನಿದೆ? ಯೋಗ್ಯವಾದ ಸಂಧಿಯನ್ನು ಸಾಧಿಸಿ, ಆ ಹಸ್ತಗತನಾದ ಚಂದ್ರಾವತನು ಆಗಲೇ ಓಡಿಹೋಗಿದ್ದನು. ಆ ಪರ್ವತ ಪ್ರದೇಶವು ನಮ್ಮ ಶಿಪಾಯಿಗೆ ಅಪರಿಚಿತವಾಗಿತ್ತು. ಈಗಲವನು ಮಾಡಬೇಕಾದುದೇನು? ದುರ್ಗಮವಾದ ಆ ಪರ್ವತವನ್ನು ಆತನು ದಾಟಿ ಹೋಗುವುದೆಂತು? ವೀಣಾರವವನ್ನು ಕೂಡ ನಾಚಿಸುವಂತಹ ಮಧುರವಾದ ಸ್ವರದಿಂದ ಆ ಸುಂದರಿ ಯು ಮತ್ತೆ ಮಾತನಾಡಿದಳು. ( ತಾವು ಅದಾವ ವಿಚಾರವನ್ನು ಮಾಡುತ್ತಿರುವಿರಿ? ನಡೆ ಯಿರಿ, ನಾವು ಜಾಗ್ರತೆಯಾಗಿ ಈ ಪ್ರದೇಶವನ್ನು ದಾಟಿಹೋಗುವ. ಆ ಅಧಮರಾದ ಚಾಂಡಾಲರು ಇಲ್ಲಿ ಬಹಳವಾಗಿ ಇದ್ದಾರೆ. ಅವರು ಮತ್ತೆ ಇಲ್ಲಿಗೆ ಬಂದು ನಮ್ಮಿಬ್ಬ ರನ್ನೂ ಸಂಕಟಕ್ಕೆ ಗುರಿಮಾಡಬಹುದು. ” - ಅಹಹಾ! ಅದೆಷ್ಟು ಮಧುರಸ್ವರವದು! ಸಜ್ಜಾಗಿ ಮೇಳಯಿಸಿದ ಸತಾರದ ತಂತಿ ಯ ಮೇಲೆ ಬೆರಳನ್ನು ಆಡಿಸಿ ರಸಿಕರಾರಾದರೂ ಮೋಹಕವಾದ ಝಂಕಾರವನ್ನು ಉತ್ಪನ್ನ ಮಾಡಿದರೋ! ಅಹಹಾ! ಆ ರಮಣಿಯ ರೂಪವಾದರೂ ಎಷ್ಟು ರಮಣೀಯ ? ಎಷ್ಟು ಹೃದಯಂಗಮ !ಹೊತ್ತಾರೆಯಲ್ಲಿ ಅರಳಿದ ಸುಂದರವಾದ ಕಮಲದಂತೆ ನಿಷ್ಠ ಲಂಕವಾದ ಆ ಸುಂದರಿಯ ಮುಖಮಂಡಲವು ಭಗವತಿಯಾದ ಪ್ರೀತಿದೇವತೆಯ