ಪುಟ:ಪ್ರೇಮ ಮಂದಿರ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಪ್ರೇಮಮಂದಿರೆ.

  • # # # # # # #Y /YY

ಎರಡನೆಯ ಪರಿಚ್ಛೇದ

  1. +0+=

ಪ್ರೇಮಸಂಚಾರ ! ಕರುಣಸಿಂಹನು ಪರ್ಣಶಯ್ಯಯ ಮೇಲೆ ಮಲಗಿಕೊಂಡಿದ್ದನು. ಅವನ ಹತ್ತಿರದ ಲ್ಲಿಯೇ ಆ ಸುಂದರಿಯು ಕುಳಿತುಕೊಂಡಿದ್ದಳು. ಚೇತನಾಹೀನನಾಗಿ ಬಿದ್ದು ಕೊಂಡಿರುವ ಕರುಣಸಿಂಹನ ಮಲಿನಮುಖವನ್ನು ಅವಳು ಅನಿಮಿಷ ನೇತ್ರದಿಂದ ನೋಡುತ್ತಿದ್ದಳು. ಆಗಿಂದಾಗ್ಗೆ ಕಪ್ಪು ಬಣ್ಣದ ಒಂದು ತರದ ಮಲಾಮನ್ನು ಅವಳು ಕರುಣಸಿಂಹನ ಗಾಯ ಕ್ಕೆ ಹಚ್ಚುತ್ತಿದ್ದಳು. ಆ ಗುಡಿಸಲವಿದ್ದ ಪ್ರದೇಶವ್ರ ಅತ್ಯಂತ ನಿರ್ಜನವಾಗಿತ್ತು. ಕರುಣಸಿಂಹನ ಹಾಸು ಗೆಯ ಬಳಿಯಲ್ಲಿ ಕುಳಿತ ಆ ತರುಣಿಯ ಮಂದಶ್ವಾಸೋಚ್ಛಾಸದ ಹೊರತು ಅಲ್ಲಿ ಇನ್ನಾವ ಶಬ್ದವೂ ಕೇಳಬರುತ್ತಿದ್ದಿಲ್ಲ. ಆ ತರುಣಿಯು ಏಕಾಗ್ರಚಿತ್ತದಿಂದ ಕರುಣಸಿಂಹನ ಪರಿಚ ರ್ಯೆಯಲ್ಲಿ ನಿರತಳಾಗಿದ್ದಳು. ಇಷ್ಟರಲ್ಲಿ ಜಟಾಜೂಟದಿಂದ ಭೂಷಿತಮಸ್ತಕನಾದ ಒಬ್ಬ ಯೋಗಿಯು ಅಲ್ಲಿ ಒಂದನು. ಮತ್ತು ಪ್ರೇಮಾದ್ರ್ರಸ್ವರದಿಂದ ಆ ತರುಣಿಯನ್ನು ಕೇಳಿದನು, “ ವತ್ತೇ ? ಕರುಣನು ಈಗ ಹೇಗೆ ಇದ್ದಾನೆ ? ” ಯೋಗಿಯು ಬಂದೊಡನೆಯೇ ಆ ಸ್ತ್ರೀಯು ಹಾಸುಗೆಯಿಂದ ಸ್ವಲ್ಪ ದೂರ ಸರಿದು ಮಾತನಾಡಿದಳು. ( ಅಪ್ಪಾ, ಇವರ ಪ್ರಕೃತಿಯು ಈಗ ಮೊದಲಿಗಿಂತ ಎಷ್ಟೋ ಚನ್ನಾ ಗಿದೆ. ಸ್ವಲ್ಪ ಹೊತ್ತಿಗೆ ಮೊದಲು ಅವರು ಎಚ್ಚರವಾಗಿದ್ದರು. ಆದರೆ ಈಗ ಪನಃ ಇವ ರಿಗೆ ನಿದ್ದೆ ಹತ್ತಿದೆ. ” ಈ ನುಡಿಯನ್ನು ಕೇಳಿ ಯೋಗಿಯ ಮುಖದ ಮೇಲೆ ಆನಂದದ ಚಿಹ್ನವು ತೋರ ಹತ್ತಿತು. ಆಗಲವನು ಉಲ್ಲಾಸದಿಂದ ಮಾತನಾಡಿದನು. ( ಜಗದಂಬಾಮಾತೆಯ ಕೃಪೆ ಯಿಂದ ಕರುಣಸಿಂಹನು ಈ ಪ್ರಾಣಸಂಕಟದಿಂದ ಪಾರಾದನು ! ಔಷಧವ ಗುಣಕಾರಿ ಯಾಗಿ ಪರಿಣಮಿಸಿತಲ್ಲವೇ ? ೨ | ಇಷ್ಟು ಮಾತನಾಡಿ ಸನ್ಯಾಸಿಯು ಹೊರಟುಹೋದನು. ಆ ಸುಂದರಿಯು ತನ್ನ ಪ್ರಣವನ್ನುಳಿಸಿದ ಆ ರಜಪೂತವೀರನನ್ನು ಕರುಣದೃಷ್ಟಿಯಿಂದ ನೋಡಹತ್ತಿದಳು. ಎಷ್ಟು ಹೊತ್ತಿನ ವರೆಗೆ ಆತನ ಮೊಗವನ್ನು ನೋಡಿದರೂ ಅವಳ ದರ್ಶನಾಪೇಕ್ಷೆಯು ತೃಪ್ತ ಗಲೊಲ್ಲದು ! ಒಮ್ಮೆ ಕರುಣಸಿಂಹನನ್ನು ನೋಡಿ ಕಣ್ಣೆವೆಗಳನ್ನು ಬಡಿಯುವಷ್ಟರಲ್ಲಿಯೇ ಮತ್ತೆ ನೋಡಬೇಕೆಂಬ ಒಯಕೆಯು ಅವಳಲ್ಲಿ ಹುಟ್ಟುವುದು, ದೇವದಾನವರ ಯುದ್ದೆ