ಪುಟ:ಪ್ರೇಮ ಮಂದಿರ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಾಗೂಷಣ. ಒಂದಾನೊಂದು ಕಾಲದಲ್ಲಿ ಸ್ವತಂತ್ರವಾದ ರಾಜ್ಯವಿತ್ತು; ಅವನಿಗೆ ವಿಪುಲವಾದ ಐಶ್ವ ರ್ಯವಿತ್ತು; ಆತನನ್ನು ಎಲ್ಲರೂ ಮರ್ಯಾದೆಯಿಂದ ಕಾಣುತ್ತಿದ್ದರು; ಆತನ ಕೀರ್ತಿಯು ಎಲ್ಲೆಡೆಯಲ್ಲಿಯೂ ಹರಡಿತ್ತು. ಕರುಣಸಿಂಹನು ದುರ್ಗಾಧಿಪತಿಯಾದ ವಿಮಲಸಿಂಹನ ಮಗನು. ಐಶ್ವರ್ಯಶಾಲಿಯಾದ ಕುಣಸಿಂಹನು ಕೇವಲ ಹೊಟ್ಟೆ ಹೊರಕೊಳ್ಳುವದಕ್ಕಾಗಿ ಈಗ ಬಾದಶಹನ ಕೈಕೆಳಗಿನ ಸೇನಾಪತಿಯಾಗಿ ನಿಲ್ಲಬೇಕಾಯಿತು. ಆ ಸನ್ಯಾಸಿಗೆ ಕರು ಣಸಿಂಹನ ಪೂರ್ವ ಪೀಠಿಕೆಯ ಚರಿತ್ರೆಯ ಪೂರ್ಣವಾಗಿ ಗೊತ್ತಿತ್ತು. ಆತನೇ ಲಲಿ ತೆಗೆ ಎಲ್ಲ ವೃತ್ತಾಂತವನ್ನೂ ಹೇಳಿದ್ದನು. ಆ ವರ್ತಮಾನವನ್ನು ಕೇಳಿದ ಬಳಿಕ ಕರುಣ ಸಿಂಹನ ವಿಷಯಕವಾದ ಲೀಲೆಯ ಕೃತಜ್ಞತೆಯು ನೂರು ಮಡಿ ಹೆಚ್ಚಾಯಿತು ! ಅವಳ ಸಹಾನುಭೂತಿಯು ಮೆಲ್ಲ ಮೆಲ್ಲನೆ ಪ್ರೇಮದಲ್ಲಿ ರೂಪಾಂತರವನ್ನು ಹೊಂದಹತ್ತಿತು. ತಂದೆ ತಾಯಿಗಳು, ಪಿತೃಸ್ನೇಹ, ಸಂಸಾರ ಇವು ಒಂದು ಕಡೆಯಿಂದಲೂ, ಪರ್ಣಶ ಮೈಯ ಮೇಲೆ ಮಲಗಿಕೊಂಡಿದ್ದು ರಜಪೂತ ವೀರಕುಮಾರನು ಇನ್ನೊಂದು ಕಡೆ ಯಿಂದಲೂ ಆಕೆಯನ್ನು ಎಳೆಯಹತ್ತಿದುವು. ಒಂದು ವೇಳೆ ಈ ರಜಪೂತ ಕುಮಾರನು ತನ್ನನ್ನು ಪರಿಗ್ರಹಿಸಿದರೆ, ತುಚ್ಚವಾದ ತನ್ನ ಶರೀರವನ್ನೂ ಕುದ್ರವಾದ ಪ್ರಾಣವನ್ನೂ ಕರುಣಸಿಂಹನ ಹಿತಾರ್ಥವಾಗಿ ಉಪಯೋಗಿಸುವ ಸಂದರ್ಭವು ಪ್ರಾಪ್ತವಾದರೆ, ಮತ್ತು ಹತಭಾಗಿನಿಯಾದ ತನ್ನನ್ನು ಸ್ವೀಕರಿಸಲು ಈ ವೀರನು ಸಮ್ಮತಿಸಿದರೆ ತನ್ನ ಹೃದಯ ವನ್ನು ಅತ್ಯಾನಂದದಿಂದ ಕರುಣಸಿಂಹನಿಗೆ ದಾನಮಾಡಿ ತನ್ಮೂಲಕ ತನ್ನ ತಂದೆಗೆ ಪಾಪದ ಪ್ರಾಯಶ್ಚಿತ್ತವನ್ನು ಉಂಟುಮಾಡಬೇಕೆಂದು ಲಲಿತೆಯು ಮನಃಪೂರ್ವಕವಾಗಿ

  • ಮೆಲ್ಲನೆ ತೆ ಮಾನವನ್ನು

ಇಚ್ಛಿಸಹತ್ತಿದಳು ಈ ಪ್ರಕಾರ ಚಿಂತಾಮಗ್ನ ಳಾದ ಲಲಿತೆಯನ್ನು ನೋಡಿ, ತನ್ನ ಪರಿಚಯವನ್ನು ಹೇಳುವುದಕ್ಕೆ ಅವಳಿಗೆ ಯಾವುದೋ ಒಂದು ಪ್ರತಿಬಂಧಕ ಕಾರಣವಿರಬಹುದೆಂದು ನಮ್ಮ ರಜಪೂತ ವೀರನು ತಿಳಿದುಕೊಂಡನು. ಆದುದರಿಂದ ಅವನು ಆ ವಿಷಯವಾಗಿ ಅವಳನ್ನು ಹೆಚ್ಚಾಗಿ ಏನೂ ಕೇಳಲಿಲ್ಲ. ಮತ್ತೆ ಆತನಿಗೆ ಸ್ವಲ್ಪ ಬಳಲಿಕೆಯುಂಟಾಯಿತು. ತನ್ನ ಕಣ್ಣುಗಳನ್ನು ಅರ್ಧ ಮುಚ್ಚಿ ಆತನು ಕರುಣಸ್ವರದಿಂದ ಮಾತನಾಡಿದನು. ನೀರು ಬೇಕು ! ನೀರು ಬೇಕು! ನೀರಡಿಕೆಯು ಬಹಳವಾಗಿದೆ! ಗಂಟಲೊಣಗಿದೆ ! ” ಸುಗಂಧಿತವಾದ ಔಷಧದ ಮಿಶ್ರಣದಿಂದ ಮಧುರವಾದ ಪಾನೀಯವನ್ನು ಆ ಭುವನಸುಂದರಿಯಾದ ಲಲಿತೆಯು ಕರುಣಸಿಂಹನಿಗೆ ಕುಡಿಸಹತ್ತಿದಳು. ಅದನ್ನು ನೋಡಿ, ದೇವಲೋಕದೊಳಗಿನ ಯಾವಳೋ ಒಬ್ಬ ಅಪ್ಪರೆಯು ತನ್ನ ಬಾಯಲ್ಲಿ ಅಮ್ಮ ತವನ್ನು ಹಾಕಿ ತನಗೆ ನವಜೀವನವನ್ನುಂಟು ಮಾಡುತ್ತಿರುವಳೋ ಎಂದು ಕರುಣಸಿಂಹ ನಿಗೆ ಎನಿಸಹತ್ತಿತು. ಆ ಅಮೃತಸೇವನೆಯಿಂದ ಕರುಣಸಿಂಹನಿಗೆ ಅಲ್ಪಾವಧಿಯಲ್ಲಿಯೇ ನಿದೆ ಹತ್ತಿತ್ತು.